ಸಾರಾಂಶ
ಕೆರೂರ: ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯ ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯಲ್ಲಿದ್ದ ₹ 40 ಸಾವಿರ ಮೌಲ್ಯದ ಕೇಬಲ್ ಕಳ್ಳತನ ಪ್ರಕರಣ ಭೇದಿಸಿರುವ ಕೆರೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೋನಿಯಾ ಉರ್ಫ ಸೋಹನ ಕಿಶೋರ ಮಚಲಿ. ಸಾಗರ ಶೇರಸಿಂಗ್ ಮಚಲಿ ಅವರನ್ನು ಬಂಧಿಸಿದ್ದು, ರಾಹುಲ್ ಕಿಶೋರ ಮಚಲಿ, ಮಹೇಶ ಉರ್ಫ ಚಿನ್ನು ಕಿಶೋರ ಮಚಲಿ ಪರಾರಿಯಾಗಿದ್ದು, ಶೋಧ ನಡೆಸಿದ್ದಾರೆ. ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯಲ್ಲಿನ ₹ 40 ಸಾವಿರ ಬೆಲೆಬಾಳುವ 500 ಫೂಟ ಉದ್ದದ ಕೇಬಲ್ ಕಳ್ಳತನ ಮಾಡಿದ್ದರು.
ಕನ್ನಡಪ್ರಭವಾರ್ತೆ ಕೆರೂರ
ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯ ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯಲ್ಲಿದ್ದ ₹ 40 ಸಾವಿರ ಮೌಲ್ಯದ ಕೇಬಲ್ ಕಳ್ಳತನ ಪ್ರಕರಣ ಭೇದಿಸಿರುವ ಕೆರೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಸೋನಿಯಾ ಉರ್ಫ ಸೋಹನ ಕಿಶೋರ ಮಚಲಿ. ಸಾಗರ ಶೇರಸಿಂಗ್ ಮಚಲಿ ಅವರನ್ನು ಬಂಧಿಸಿದ್ದು, ರಾಹುಲ್ ಕಿಶೋರ ಮಚಲಿ, ಮಹೇಶ ಉರ್ಫ ಚಿನ್ನು ಕಿಶೋರ ಮಚಲಿ ಪರಾರಿಯಾಗಿದ್ದು, ಶೋಧ ನಡೆಸಿದ್ದಾರೆ.
ಪ್ರಕರಣ ಹಿನ್ನೆಲೆ: ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ₹ 40 ಸಾವಿರ ಬೆಲೆಬಾಳುವ 500 ಫೂಟ ಉದ್ದದ ಕೇಬಲ್ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದಾಗ, ಇದನ್ನು ನೋಡಿ ಚೀರಿದ ವ್ಯಕ್ತಿಯ ಬಾಯಿಮುಚ್ಚಿ ಆತನ ಜೇಬಿನಲ್ಲಿದ್ದ ₹ 4 ಸಾವಿರ ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಾಗಲಕೋಟೆ ಎಸ್.ಪಿ. ಅಮರನಾಥರೆಡ್ಡಿ ,ಸಿ.ಪಿ.ಐ. ಡಿ.ಡಿ. ಧೂಳಖೇಡ ಮಾರ್ಗದರ್ಶನದಲ್ಲಿ ಆರೋಪಿತರ ಪತ್ತೆಗೆ ತಂಡ ರಚಿಸಿದ್ದರು. ಪಿಎಸ್ಐಗಳಾದ ಕುಮಾರ ಹಿತ್ತಲಮನಿ, ಬಿ.ಎಸ್. ಕುಪ್ಪಿ ನೇತೃತ್ವದ ತಂಡ ಕಳ್ಳತನವಾಗಿದ್ದ ಕೇಬಲ್ ದರೋಡೆಯಾಗಿದ್ದ ಹಣ, ಸಹಿತ ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಪರಶುರಾಮ ಸೋರಕಟ್ಟಿ, ಅಮರೇಶ ಶಿರಹಟ್ಟಿ, ಮುತ್ತುರಾಜ ಭಾವಿಕಟ್ಟಿ, ಮಲ್ಲು ಪೂಜಾರಿ, ಮುದ್ದಪ್ಪ ಸೋಮನಕಟ್ಟಿ, ಎಚ್.ಬಿ.ಗೌಡರ, ಚಂದ್ರಶೇಖರ ಆಕಳವಾಡಿ, ಮಂಜುನಾಥ ಎತ್ತಿನಮನಿ, ಅರ್ಜುನ ಭಜಂತ್ರಿ ಪಾಲ್ಗೊಂಡಿದ್ದರು.