ಪರ್ಸ್ ವಾಪಸ್ ಮರಳಿಸಿದ ಪೊಲೀಸ್

| Published : Jan 05 2024, 01:45 AM IST

ಸಾರಾಂಶ

ಗೋಕರ್ಣದ ರಾಮತೀರ್ಥದ ಬಳಿ ಮಹಾರಾಷ್ಟ್ರದ ಪ್ರವಾಸಿಗರು ಬಿಟ್ಟು ಹೋಗಿದ್ದ ಪರ್ಸನ್ನು ಪೊಲೀಸ್‌ ಸಿಬ್ಬಂದಿ ಅವರನ್ನು ಹುಡುಕಿ ಮರಳಿಸಿದ್ದಾರೆ. ಈ ಮೂಲಕ ಪೊಲೀಸ್‌ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಗೋಕರ್ಣ:

ಇಲ್ಲಿನ ರಾಮತೀರ್ಥದ ಬಳಿ ಪ್ರವಾಸಿಗರು ಬಿಟ್ಟು ಹೋಗಿದ್ದ ಪರ್ಸನ್ನು ಪೊಲೀಸ್‌ ಸಿಬ್ಬಂದಿ ವಾರಸುದಾರನ್ನು ಹುಡುಕಿ ಅವರಿಗೆ ಮರಳಿ ನೀಡಿದ ಘಟನೆ ಗುರುವಾರ ನಡೆದಿದೆ.

ಬುಧವಾರ ರಾಮಾತೀರ್ಥದ ಹತ್ತಿರ ಪರ್ಸ್ ಪೊಲೀಸ್‌ ಸಿಬ್ಬಂದಿಗೆ ಸಿಕ್ಕಿತ್ತು. ಸ್ನಾನಕ್ಕೆ ಬಂದವರು ಯಾರು ಬಿಟ್ಟಿದ್ದಾರೆ ಎಂದು ಸುತ್ತಲು ಹುಡುಕಾಡಿದ್ದಾರೆ. ಆದರೆ ಯಾರು ಸಿಗಲಿಲ್ಲ. ನಂತರ ಪರ್ಸ್‌ನಲ್ಲಿದ್ದ ಇದ್ದ ಆಧಾರ್ ಕಾರ್ಡ್‌ನಲ್ಲಿದ್ದ ವಿಳಾಸ ಪತ್ತೆ ಹಚ್ಚಿ ಮಹಾರಾಷ್ಟ್ರದ ಕೊಲ್ಲಾಪುರದವರೆಂದು ತಿಳಿದಿದೆ. ನಂತರ ಅಲ್ಲಿನ ವ್ಯಾಪ್ತಿಯ ಸಬ್ ಇನ್‌ಸ್ಪೆಕ್ಟರ್‌ ಮೊಬೈಲ್ ನಂಬರ್‌ ಹುಡುಕಿ ಸಂಪರ್ಕಿಸಿದ್ದು ಮಾಹಿತಿ ನೀಡಿದ್ದಾರೆ. ಅವರು ಈ ವ್ಯಕ್ತಿಯ ಮೊಬೈಲ್ ನಂಬರ್ ಇಲ್ಲಿನ ಸಿಬ್ಬಂದಿಗೆ ನೀಡಿದ್ದಾರೆ. ಪರ್ಸ್‌ ಕಳೆದುಕೊಂಡ ವ್ಯಕ್ತಿ ಜೋಗದಲ್ಲಿ ಇರುವುದಾಗಿ ತಿಳಿಸಿದ್ದಾರೆ. ವಾಪಸ್ ತೆರಳುವ ವೇಳೆ ಮರಳಿ ತೆಗೆದುಕೊಳ್ಳುತ್ತೇನೆ ಎಂದಿದ್ದು ಅದರಂತೆ ಗುರುವಾರ ಗೋಕರ್ಣಕ್ಕೆ ಬಂದು ಪರ್ಸ್‌ ಪಡೆದುಕೊಂಡಿದ್ದಾರೆ. ಪರ್ಸ್‌ನಲ್ಲಿ ಹಣ ಮತ್ತಿತರ ದಾಖಲೆ ಪತ್ರಗಳು ಇದ್ದವು.

ಪೊಲೀಸ್‌ ಸಿಬ್ಬಂದಿ ಬಸವರಾಜ ಕಂಬಳಿ ಮತ್ತು ಮಹಮ್ಮದ್‍ಅಲಿ ದಾದರ್ ಮಟ್ಟಿ ಅವರಿಗೆ ದೊರೆತ ಪರ್ಸ್‌ನ್ನು ಹವಾಲ್ದಾರ್ ಅನುರಾಜ್ ನಾಯ್ಕ್ ಮುಖೇನ ವಾರುಸುದಾರ ಪವನ ಬಾಬಾಸಾಹೇಬ್ ಪಾಟೀಲ ಅವರಿಗೆ ನೀಡಿದ್ದಾರೆ.