ಮಹಾ ಶಿವರಾತ್ರಿ ಅಂಗವಾಗಿ ಮಂಡ್ಯದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಸಾರ್ವಜನಿಕ ದರ್ಶನಕ್ಕೆ ತೆರೆದಿಟ್ಟಿರುವ ೨೧ ಅಡಿ ಎತ್ತರದ ಶಿವಲಿಂಗ, ಸಹಸ್ರಲಿಂಗ, ಸ್ವರ್ಗದ ಪರಿಕಲ್ಪನೆ, ಸಂಸಾರ ಮತ್ತು ಮಾಹೆ ಕುರಿತ ಭೂಲ್ ಬುಲಯ್ಯ ಚಿತ್ರಣಗಳು ಜನಮೆಚ್ಚುಗೆಗೆ ಪಾತ್ರವಾದವು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಾ ಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಸಾರ್ವಜನಿಕ ದರ್ಶನಕ್ಕೆ ತೆರೆದಿಟ್ಟಿರುವ ೨೧ ಅಡಿ ಎತ್ತರದ ಶಿವಲಿಂಗ, ಸಹಸ್ರಲಿಂಗ, ಸ್ವರ್ಗದ ಪರಿಕಲ್ಪನೆ, ಸಂಸಾರ ಮತ್ತು ಮಾಹೆ ಕುರಿತ ಭೂಲ್ ಬುಲಯ್ಯ ಚಿತ್ರಣಗಳು ಜನಮೆಚ್ಚುಗೆಗೆ ಪಾತ್ರವಾದವು.ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲೇ ವಿಶಾಲವಾದ ಜಾಗದಲ್ಲಿ ಮಹಾ ಶಿವರಾತ್ರಿಯ ಸಂದೇಶವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ೨೧ ಅಡಿ ಎತ್ತರದ ನಿರಾಕಾರ ಜ್ಯೋತಿ ಸ್ವರೂಪದ ಅತ್ಯಾಕರ್ಷಕ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದು, ಧಾರಾಪಾತ್ರೆಯಿಂದ ನಿತ್ಯಾಭಿಷೇಕ ಮಾಡಲಾಗುತ್ತಿದೆ. ಶಿವಲಿಂಗದ ಎದುರು ಆಕರ್ಷಕ ನಂದಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ಶಿವನ ಮೂಲಕ ರಚಿಸಲ್ಪಡುತ್ತಿರುವ ಸ್ವರ್ಗದ ಸೃಷ್ಟಿ ಮನೋಹರವಾಗಿದೆ. ಅದರೊಳಗೆ ಹೊಕ್ಕರೆ ಬೇರೆ ಲೋಕದಲ್ಲಿರುವಂತೆ ಭಾಸವಾಗುತ್ತದೆ. ಅಷ್ಟೊಂದು ರಮಣೀಯವಾಗಿ ಸ್ವರ್ಗದ ಕಿರುದರ್ಶನ ಮಾಡಿಸಲಾಗಿದೆ. ಒಂದೇ ಸ್ಥಳದಲ್ಲಿ ನಿಂತು ಚಿಕ್ಕದಾದ ಗಾಜಿನೊಳಗೆ ಏಕಕಾಲಕ್ಕೆ ಸಹಸ್ರಲಿಂಗ ಸುಂದರವಾಗಿ ಕಾಣುವಂತೆ ಮಾಡಿರುವುದು. ಪ್ರಾಪಂಚಿಕ ಕೆಲಸ ಕಾರ್ಯದಲ್ಲಿ ವ್ಯಸ್ತನಾಗಿ ತನ್ನನ್ನು ತಾನು ಮರೆತುಹೋಗಿರುವ ಮನುಷ್ಯ ರಾಜಯೋಗ ಧ್ಯಾನದ ಮೂಲಕ ಎಲ್ಲಾ ಸಮಸ್ಯೆಗಳ ಸುಳಿಯಿಂದ ಹೇಗೆ ಹೊರಬರಲು ಸಾಧ್ಯ ಎಂಬ ಅರಿವು ಮೂಡಿಸುವ ಭೂಲ್‌ಬುಲಯ್ಯ ಉತ್ತಮವಾಗಿ ತೋರಿಸಲಾಗಿದೆ.ಇಂದು ಮನಸ್ಸು ಒತ್ತಡದಿಂದ ನಿಶ್ಯಕ್ತವಾಗಿದ್ದು ಮತ್ತು ವ್ಯರ್ಥ ಸಂಕಲ್ಪಗಳಲ್ಲಿ ಸಿಲುಕಿದೆ. ಮನಸ್ಸನ್ನು ಶಕ್ತಿಶಾಲಿಗೊಳಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಆಡಿಯೋ-ವೀಡಿಯೋ ಮೂಲಕ ಐದು ನಿಮಿಷಗಳ ಧ್ಯಾನದ ಅನುಭವ ಮಾಡಿಸುವ ವಿಶೇಷ ಪ್ರಯತ್ನವನ್ನು ಮೈಂಡ್ ಸ್ಪಾ ಮೂಲಕ ಮಾಡಲಾಗಿದೆ.
ಭಾನುವಾರ ರಜಾದಿನವಾಗಿದ್ದರಿಂದ ನೂರಾರು ಸಂಖ್ಯೆಯಲ್ಲಿ ಜನರು ಸರದಿ ಸಾಲಿನಲ್ಲಿ ನಿಂತು ಮಹಾಶಿವರಾತ್ರಿ ಮಹೋತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದುದು ಕಂಡುಬಂದಿತು.ಶ್ರೀತಾಂಡವೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೊಳಲು ಗ್ರಾಮದ ಶಿವನ ದೇವಸ್ಥಾನಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂಅನ್ನಸಂರ್ಪಣೆ ಕಾರ್ಯಕ್ರಮ ಭಾನುವಾರ ಸಂಜೆ ಹಾಗೂ ಸೋಮವಾರ ನಡೆಯಲಿದೆ.
ಶ್ರೀತಾಂಡವಪುರ ಸ್ವಾಮಿ ದೇವಸ್ಥಾನದಲ್ಲಿ ಶ್ರೀತಾಂಡವೇಶ್ವರ ಸ್ವಾಮಿಯ ಮೂರ್ತಿಗೆ ಬೆಳಗ್ಗೆಯಿಂದಲೇ ವಿಶೇಷ ಕ್ಷೀರಾಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು. ದೇವರನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.ಸಂಜೆ ೭ ಗಂಟೆಗೆ ಶ್ರೀ ತಾಂಡೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಹೋಮ-ಹವನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.