ಭೂ ಮಾಪಕರು , ಸೂಪರ್ ವೈಸರ್ ಹುದ್ದೆಗಳಿಲ್ಲದೆ ಇಡೀ ಇಲಾಖೆ ಕಾರ್ಯಗಳಿಗೆ ಹಿನ್ನಡೆ
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಮಾಪಕರು ಮತ್ತು ಸೂಪರ್ ವೈಸರ್ ಹುದ್ದೆಗಳ ಖಾಲಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಮಹತ್ವಕಾಂಕ್ಷಿ ಯೋಜನೆಗಳು ವಿಳಂಬವಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ.ಚಿಕ್ಕಮಗಳೂರು ಜಿಲ್ಲೆಗೆ ಅನುಮೋದಿತ ಭೂ ಮಾಪಕ ಹುದ್ದೆಗಲ ಪೈಕಿ ಬರೋಬ್ಬರಿ ಮೂರನೇ ಒಂದು ಭಾಗದಷ್ಟು ಅಧಿಕಾರಿ ಸಿಬ್ಬಂದಿ ಹುದ್ದೆ ಖಾಲಿ ಖಾಲಿ ಒಂದು ಕಡೆಯಾದರೆ ಕಾರ್ಯ ಒತ್ತಡದ ನಡುವೆ ಭೂ ಮಾಪಕರು ನಡೆಸಿದ ಸರ್ವೇ ಕಾರ್ಯ ವನ್ನು ಪರಿಶೀಲಿಸಬೇಕಾದ ಸೂಪರ್ ವೈಸರ್ ಹುದ್ದೆಗಳು ಖಾಲಿ ಇರುವುದು ಇಡೀ ಇಲಾಖೆ ಕಾರ್ಯವೈಖರಿಗೆ ಹಿನ್ನಡೆ ಉಂಟು ಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸದ್ಯ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳಿಗೆ ಭೂಮಿಯೇ ದೊರೆಯುತ್ತಿಲ್ಲ. ಇರುವ ಸರ್ಕಾರಿ ಜಮೀನು ಗುರುತಿಸುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು ನಗರದಲ್ಲಿ ಕೇಂದ್ರ ಸರ್ಕಾರದ ನಕ್ಷಾ ಸರ್ವೇ, ಸ್ವಾಮಿತ್ವ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರಿಗೆ ಡ್ರೋನ್ ತಂತ್ರಜ್ಞಾನದ ಮೂಲಕ ಆಸ್ತಿ ಸಮೀಕ್ಷೆ ನಡೆಸಿ, ಡಿಜಿಟಲ್ ''''''''ಆಸ್ತಿ ಕಾರ್ಡ್'''''''' ಅಥವಾ ಹಕ್ಕು ಪತ್ರವನ್ನು ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಚಾಲ್ತಿಯಲ್ಲಿದೆ. ಹೀಗೆ ಹಲವು ಕಾರ್ಯಕ್ರಮಗಳನ್ನು ಭೂಮಾಪನ ಇಲಾಖೆಯಿಂದ ಸರ್ವೇ ಆಗಬೇಕಾಗಿದೆ.
ಇದರೊಂದಿಗೆ ಜಮೀನುಗಳ ಸಮೀಕ್ಷೆ, ನಕ್ಷೆ ತಯಾರಿಕೆ ಮತ್ತು ದಾಖಲೆಗಳ ನಿರ್ವಹಣೆ (ಆರ್‌ಟಿಸಿ, ಮ್ಯುಟೇಶನ್), ರೈತರ ಜಮೀನಿನ ನಕ್ಷೆ, ಪಹಣಿ (ಆರ್‌ಟಿಸಿ) ಹಾಗೂ ಇನ್ನಿತರ ದಾಖಲೆ ಸಿದ್ದಪಡಿಸುವುದು. ಜತೆಗೆ ಕಂದಾಯ ಜಮೀನು, ಗೋಮಾಳ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗೆ ಸೇರಿದ ಜಮೀನು ಸರ್ವೇ ಮಾಡಿ ವರದಿ ನೀಡುವ ಕಾರ್ಯ ಮಾಡಲಿದೆ.
ಭೂ ಮಾಪನ ಇಲಾಖೆಯ ಭೂ ಮಾಪಕರು ಸರ್ವೇ ಮಾಡಿ ವರದಿ ನೀಡಿಲ್ಲ ಎಂದರೆ, ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಸಾಧ್ಯವಾಗುವುದಿಲ್ಲ. ಇನ್ನು ಜಮೀನಿನ ಅಳತೆಗೆ ಸಂಬಂಧಿಸಿದ ವ್ಯಾಜ್ಯಗಳು ಪರಿಹಾರವಾಗುವುದಿಲ್ಲ. ಹೀಗಾಗಿ, ಹಲವು ಕಾರ್ಯಕ್ಕೆ ಭೂಮಾಪಕರ ಹುದ್ದೆ ಖಾಲಿ ಇರುವುದು ದೊಡ್ಡ ಸವಾಲಾಗಿದೆ.38 ಭೂ ಮಾಪಕರು, 9 ಸೂಪರ್ ವೈಸರ್ ಖಾಲಿ
ಜಿಲ್ಲೆಗೆ 103 ಭೂ ಮಾಪಕರು ಹಾಗೂ 22 ಸೂಪರ್ ವೈಸರ್ ಗಳ ಹುದ್ದೆಯನ್ನು ಮಂಜೂರು ಮಾಡಲಾಗಿದೆ. ಆದರೆ, ಈ ಪೈಕಿ 65 ಮಂದಿ ಭೂ ಮಾಪಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 38 ಹುದ್ದೆಗಳು ಖಾಲಿ ಇವೆ. ಇನ್ನೂ 13 ಸೂಪರ್ ವೈಸರ್ ಮಾತ್ರ ಕೆಲಸ ಮಾಡುತ್ತಿದ್ದು, 9 ಹುದ್ದೆ ಖಾಲಿ ಇವೆ. ಹೀಗಾಗಿ, ಸಿಬ್ಬಂದಿಗೆ ನಿಗದಿತ ಅವಧಿಯಲ್ಲಿ ಕಾರ್ಯ ಪೂರ್ಣಗೊಳಿ ಸುವುದಕ್ಕೆ ಸಾಧ್ಯವಾಗುತ್ತಿಲ್ಲ.ಮಲೆನಾಡು ತಾಲೂಕಿನಲ್ಲಿ ಹೆಚ್ಚು ಖಾಲಿಕೊಪ್ಪ ತಾಲೂಕಿನಲ್ಲಿ ಮಂಜೂರಾದ 10 ಭೂ ಮಾಪಕ ಹುದ್ದೆ ಪೈಕಿ 8 ಹುದ್ದೆ ಖಾಲಿ ಇವೆ. ಶೃಂಗೇರಿಯಲ್ಲಿ 9 ಹುದ್ದೆಯಲ್ಲಿ 7 ಖಾಲಿ, ಎನ್‌ಆರ್ ಪುರದಲ್ಲಿ 8 ಹುದ್ದೆಯಲ್ಲಿ 7 ಹುದ್ದೆ ಖಾಲಿ ಇವೆ. ಚಿಕ್ಕಮಗಳೂರು ತಾಲೂಕಿನಲ್ಲಿ 22 ರಲ್ಲಿ 12 ಖಾಲಿ, ಮೂಡಿಗೆರೆಯಲ್ಲಿ 12 ರಲ್ಲಿ 6 ಖಾಲಿ, ತರಿಕೆರೆಯಲ್ಲಿ 20 ಹುದ್ದೆ ಪೈಕಿ 6, ಕಡೂರಿನಲ್ಲಿ 20ರಲ್ಲಿ 4 ಖಾಲಿ, ಹೀಗಾಗಿ, ಒಟ್ಟು 38 ಹುದ್ದೆ ಖಾಲಿ ಇವೆ.
ಮೂರು ತಾಲೂಕಿನಲ್ಲಿ ಸೂಪರ್ ವೈಸರ್‌ಯೇ ಇಲ್ಲಕೊಪ್ಪ, ಶೃಂಗೇರಿ, ಎನ್‌ಆರ್ ಪುರ ತಾಲೂಕಿನಲ್ಲಿ ಒಬ್ಬರೇ ಒಬ್ಬ ಸೂಪರ್ ವೈಸರ್‌ಗಳಿಲ್ಲ ಮಂಜೂರಾದ ಎಲ್ಲಾ ಹುದ್ದೆಗಳು ಖಾಲಿ ಇವೆ. ಮೂಡಿಗೆರೆಯಲ್ಲಿ 3ರಲ್ಲಿ 2 ಖಾಲಿ ಇವೆ. ಚಿಕ್ಕಮಗಳೂರಿನಲ್ಲಿ 4ರ ಪೈಕಿ ಒಂದು ಖಾಲಿ ಇದೆ. ತರೀಕೆರೆ ಮತ್ತು ಕಡೂರಿನಲ್ಲಿ ಮಾತ್ರ ಎಲ್ಲ ಹುದ್ದೆ ಭರ್ತಿಯಾಗಿವೆ.
-- ಬಾಕ್ಸ್ --ಇಲಾಖೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ
ಚಿಕ್ಕಮಗಳೂರು ಜಿಲ್ಲೆಯ ಭೂ ಮಾಪನ ಇಲಾಖೆಗೆ ಒಟ್ಟು 215 ಹುದ್ದೆ ಮಂಜೂರು ಮಾಡಲಾಗಿದೆ. ಈ ಪೈಕಿ 101 ಹುದ್ದೆಯಲ್ಲಿ ಮಾತ್ರ ಅಧಿಕಾರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ 114 ಹುದ್ದೆಗಳು ಖಾಲಿ ಇವೆ. ಈ ಪ್ರಕಾರ ಶೇ.50ಕ್ಕಿಂತ ಅಧಿಕ ಹುದ್ದೆ ಖಾಲಿ ಇವೆ.----ಬಾಕ್ಸ್---ಜಿಲ್ಲೆಯ ಭೂಮಾಪನ ಇಲಾಖೆ ಹುದ್ದೆ ಖಾಲಿ ವಿವರ
ಸ.ನಿ.ಕಚೇರಿಮಂಜೂರುಕಾರ್ಯಖಾಲಿಚಿಕ್ಕಮಗಳೂರು452718
ಮೂಡಿಗೆರೆ26917ಕೊಪ್ಪ19316
ಶೃಂಗೇರಿ18513ತರೀಕೆರೆ382018
ಕಡೂರು402317ಎನ್‌ಆರ್‌ಪುರ1734
ಚಿಕ್ಕಮಗಳೂರು(ಉ,ನಿ.ಕ)12111ಒಟ್ಟು215101114
-- ಕೋಟ್ --ಕಳೆದ 10 ವರ್ಷಕ್ಕೆ ಹೋಲಿಕೆ ಮಾಡಿದರೆ, ಭೂ ಮಾಪನ ಇಲಾಖೆಗೆ ಸಾಕಷ್ಟು ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡ ಲಾಗಿದೆ. ವರ್ಗಾವಣೆ ಸಮಯ ಆಗಿರುವುದರಿಂದ ಹೆಚ್ಚಿನ ಭೂ ಮಾಪಕರ ನಿಯೋಜನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಎನ್.ಎಂ.ನಾಗರಾಜ್, ಜಿಲ್ಲಾಧಿಕಾರಿ, ಚಿಕ್ಕಮಗಳೂರು(ಫೋಟೋ ಇದೆ)ಫೋಟೋಸಾಂದರ್ಭೀಕ ಫೋಟೋ ಎಂದು ಕಡ್ಡಾಯವಾಗಿ ಹಾಕುವುದು.