ಸಾರಾಂಶ
ಸಾಗರ: ಸಾಹಿತ್ಯ ಕ್ಷೇತ್ರದಲ್ಲಿ ಯುವ ಪ್ರತಿಭೆಗಳ ತಾಕತ್ತು ಅಗಾಧವಾಗಿದೆ. ಇದನ್ನು ನೋಡಿದರೆ ಹಿರಿಯರು ಜಾಗ ಬಿಟ್ಟುಕೊಡುವ ಕಾಲ ಬಂದಿದೆ ಎಂದು ಖ್ಯಾತ ಕಾದಂಬರಿಕಾರ ಗಜಾನನ ಶರ್ಮ ಹುಕ್ಲಕೈ ಅಭಿಪ್ರಾಯಪಟ್ಟರು.
"ನನ್ನ ಪಕ್ಕದ ಸೀಟು " ಪುಸ್ತಕ ಬಿಡುಗಡೆ ಮಾಡಿದ ಗಜಾನನ ಶರ್ಮಾ
ಸಾಗರ: ಸಾಹಿತ್ಯ ಕ್ಷೇತ್ರದಲ್ಲಿ ಯುವ ಪ್ರತಿಭೆಗಳ ತಾಕತ್ತು ಅಗಾಧವಾಗಿದೆ. ಇದನ್ನು ನೋಡಿದರೆ ಹಿರಿಯರು ಜಾಗ ಬಿಟ್ಟುಕೊಡುವ ಕಾಲ ಬಂದಿದೆ ಎಂದು ಖ್ಯಾತ ಕಾದಂಬರಿಕಾರ ಗಜಾನನ ಶರ್ಮ ಹುಕ್ಲಕೈ ಅಭಿಪ್ರಾಯಪಟ್ಟರು.ಪಟ್ಟಣದ ನೃತ್ಯಭಾಸ್ಕರ ಸಭಾಂಗಣದಲ್ಲಿ ಬನಜಾಲಯ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯುವ ಬರಹಗಾರ ಕೌಂಡಿನ್ಯ ಕೊಡ್ಲುತೋಟ ಅವರ ಮೊದಲ ಕಥಾ ಸಂಕಲನ `ನನ್ನ ಪಕ್ಕದ ಸೀಟು'''' ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೃತಿಯು ಜೀವನದ ತಾತ್ವಿಕ ಅರ್ಥವನ್ನು ಮನದಟ್ಟು ಮಾಡಿಸುತ್ತದೆ ಎಂದು ಶ್ಲಾಘಿಸಿದರು.`ನನ್ನ ಪಕ್ಕದ ಸೀಟು'''''''' ಕಥಾಸಂಕಲನದ ಮೂಲಕ ಕೌಂಡಿನ್ಯ ಕೊಡ್ಲುತೋಟ ಸಾಕಷ್ಟ ಭರವಸೆಗಳನ್ನು ಮೂಡಿಸಿದ್ದಾರೆ ಎಂದರಲ್ಲದೆ ಖರೀದಿಸಿದ ಪುಸ್ತಕದ ದರಕ್ಕೆ ನ್ಯಾಯ ಒದಗಿಸುವ ಕಥಾನಕವಿದು ಎಂದು ಹೇಳಿದರು.
ಕನ್ನಡ ಉಪನ್ಯಾಸಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಪುಸ್ತಕದ ಕುರಿತು ಮಾತನಾಡಿ, ಕಥೆ ಯಾವತ್ತೂ ಕಥೆಗಾರನಿಂದ ಶುರುವಾಗಿ ತನ್ನ ಅಂತ್ಯವನ್ನು ತಾನೇ ನಿರ್ದೇಶಿಸುವಂತಿರಬೇಕು. ಕಥೆಯು ಅನಿರೀಕ್ಷಿತ ತಿರುವು, ಅಂತ್ಯರೂಪದ್ದಾಗಿಯೂ ಕಥೆ ಗಮನ ಸೆಳೆಯಬೇಕು. ಅಂತಹ ಎಲ್ಲ ಅಂಶಗಳನ್ನು ಕೌಂಡಿನ್ಯ ಅವರ ಕಥೆಗಳಲ್ಲಿವೆ ಎಂದರು. ಅಷ್ಟಾವದಾನಿ ಪ್ರಶಾಂತ್ ಮಧ್ಯಸ್ಥ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಚಿನ್ಮಯ ಪ್ರಕಾಶನದ ನವೀನ್ ಪುರುಷೋತ್ತಮ್, ಪತ್ರಕರ್ತ ಮಾ.ವೆಂ.ಸ. ಪ್ರಸಾದ್, ಕಥೆಗಾರ ಕೌಂಡಿನ್ಯ ಕೊಡ್ಲುತೋಟ ಇದ್ದರು.ಉಮೇಶ್ ಕೊಡ್ಲುತೋಟ ಸ್ವಾಗತಿಸಿದರು. ರಮೇಶ್ ವಂದಿಸಿದರು. ಬಿ.ಟಿ. ಅರುಣ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಂವತ್ಸರ, ಶ್ರೀರಂಜನಿ, ಶ್ರೀಧರ ಶಾನಭಾಗ್ರಿಂದ ಗಾಯನ ನಡೆಯಿತು. ನಿಖಿಲ್ ಕುಂಸಿ ತಬಲಾ ಸಾತ್ ನೀಡಿದರು.