ಖಾಸ್ಗತೇಶ್ವರ ಕರ್ತೃ ಗದ್ದುಗೆಯ ಶಕ್ತಿ ಅಪಾರ: ಚನಮಲ್ಲಶ್ರೀ

| Published : Mar 10 2024, 01:46 AM IST

ಖಾಸ್ಗತೇಶ್ವರ ಕರ್ತೃ ಗದ್ದುಗೆಯ ಶಕ್ತಿ ಅಪಾರ: ಚನಮಲ್ಲಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಿವರಾತ್ರಿ ಹಿನ್ನಲೆ ಶ್ರೀಖಾಸ್ಗತೇಶ್ವರ ಮಠಕ್ಕೆ ಮ.ಘ.ಚ ಚನ್ನಮಲ್ಲ ಶಿವಾಚಾರ್ಯರು ಭೇಟಿ ನೀಡಿದರು.

ತಾಳಿಕೋಟೆ: ಶ್ರೀಖಾಸ್ಗತೇಶ್ವರ ಮಠ ಅನೇಕ ಜ್ಞಾನಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಮಠವಾಗಿದ್ದು, ವಿರಕ್ತ ಶ್ರೀಗಳ ಕತೃಗದ್ದುಗೆಯಲ್ಲಿ ಅಪಾರ ಶಕ್ತಿ ಅಡಗಿದೆ ಎಂದು ಗಚ್ಚಿನ ಹಿರೇಮಠದ ಮ.ಘ.ಚ ಚನ್ನಮಲ್ಲ ಶಿವಾಚಾರ್ಯರು ನುಡಿದರು.

ಶಿವರಾತ್ರಿ ಅಂಗವಾಗಿ ಶ್ರೀಖಾಸ್ಗತೇಶ್ವರ ಮಠಕ್ಕೆ ಆಗಮಿಸಿದ್ದ ಶ್ರೀಗಳು, ಖಾಸ್ಗತೇಶ ಹಾಗೂ ವಿರಕ್ತಶ್ರೀಗಳ ಕತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶ್ರೀಗಳು, ಶ್ರೀ ಖಾಸ್ಗತರು ಅಪಾರ ಪಾಂಡಿತ್ಯ ಹೊಂದಿದವರು. ಮಳೆ ಇಲ್ಲದೇ ಜನರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾಗ ವರುಣನ ಕೃಪೆಗೈದು ಸಂಪತದ್ಭರಿತ ಫಸಲನ್ನು ಬೆಳೆಯುವಂತೆ ಮಾಡಿದ್ದರು. ಸಿದ್ದಲಿಂಗ ದೇವರು ಮುಂದೊಂದು ದಿನ ದೇಶದಲ್ಲಿಯೇ ಭಕ್ತರ ದಂಡು ಶ್ರೀಮಠದ ಕಡೆಗೆ ನೋಡಲಿದೆ. ಅಂತಹ ಅದ್ಭುತ ಶಕ್ತಿಯನ್ನು ಹೊಂದಿರುವ ಶ್ರೀ ಖಾಸ್ಗತೇಶ್ವರ ಮಠಕ್ಕೆ ಶಿವರಾತ್ರಿಯ ನಿಮಿತ್ಯ ಭೇಟಿ ನೀಡಿದ್ದಾಗಿ ತಿಳಿಸಿದರು.

ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ವಿದ್ಯಾಶ್ರೀ ವಿರಕ್ತಮಠ ಜೊತೆ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಖಾಸ್ಗತೇಶ್ವರ ಮಠದ ವೇ.ವಿಶ್ವನಾಥ ವಿರಕ್ತಮಠ, ಶ್ರೀಶೈಲ ಹಿರೇಮಠ, ಬಸನಗೌಡ ಫೀರಾಪೂರ, ಸುರೇಶ ಪುಲಸ್, ಅಕ್ಕಮಹಾದೇವಿ ವಿರಕ್ತಮಠ, ದ್ರಾಕ್ಷಾಯಿಣಿ ದೀನಾ, ಕುಮಾರ ವಿರಕ್ತಮಠ, ಮಹಾಂತೇಶ ವಿರಕ್ತಮಠ, ಭಂಟನೂರ ಶರಣಮ್ಮ, ಇದ್ದರು.