ಸಾರಾಂಶ
ಫೆ.16ರ ಸಂಜೆ 7ಕ್ಕೆ ಚಾಮರಾಜನಗರದ ಶಾಂತಲಾ ಕಲಾವಿದರಿಂದ ಅಶ್ವಘೋಷ ನಾಟಕವು ಚಿತ್ರಾ ವೆಂಕಟರಾಜು ಪ್ರದರ್ಶನವಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕದಂಬ ರಂಗ ವೇದಿಕೆ ವತಿಯಿಂದ ಫೆ.15 ರಿಂದ 17 ರವರೆಗೆ ನಗರದ ಕಲಾಮಂದಿರದ ಆವರಣದಲ ಕಿರು ರಂಗಮಂದಿರದಲ್ಲಿ ಕದಂಬ ರಂಗಹಬ್ಬ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.ಈ ಕಾರ್ಯಕ್ರಮವನ್ನು ಫೆ.15ರ ಸಂಜೆ 6.30ಕ್ಕೆ ಹಿರಿಯ ನಟ ಶಂಕರ್ ಅಶ್ವಥ್ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ರಂಗಸಮಾಜ ಸದಸ್ಯ ಎಚ್.ಎಸ್. ಸುರೇಶ್ ಬಾಬು ಅತಿಥಿಯಾಗುವರು. ಬಳಿಕ ಸಂಜೆ 7ಕ್ಕೆ ವೈ.ಎಂ. ಪುಟ್ಟಣ್ಣಯ್ಯ ಮತ್ತು ತಂಡದವರಿಂದ ರಂಗಗೀತೆ ಕಾರ್ಯಕ್ರಮವಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಫೆ.16ರ ಸಂಜೆ 7ಕ್ಕೆ ಚಾಮರಾಜನಗರದ ಶಾಂತಲಾ ಕಲಾವಿದರಿಂದ ಅಶ್ವಘೋಷ ನಾಟಕವು ಚಿತ್ರಾ ವೆಂಕಟರಾಜು ಪ್ರದರ್ಶನವಿದೆ. ಹಾಗೂ ಫೆ.17ರ ಸಂಜೆ 7ಕ್ಕೆ ಸಂಚಲನ ಮೈಸೂರು ತಂಡದಿಂದ ಚಿತ್ರತುರಗ ನ್ಯಾಯ ಅರ್ಥಾತ್ ಕೀರ್ತಿಯ ಅವಾಂತರ ನಾಟಕವು ದಿಗ್ವಿಜಯ ಹೆಗ್ಗೋಡು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮೂರು ದಿನ ಕಲಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ಅವರು ವಿವರಿಸಿದರು.ವೇದಿಕೆಯ ಉಪಾಧ್ಯಕ್ಷ ಯು.ಎಸ್. ರಾಮಣ್ಣ, ಖಜಾಂಚಿ ಡಿ. ತಿಪ್ಪಣ್ಣ, ಸದಸ್ಯರಾದ ಅಶ್ವಥ್ ಕದಂಬ, ಡಿ. ನಾಗೇಂದ್ರಕುಮಾರ್ ಇದ್ದರು.