ಅಂತರಂಗ ಶುದ್ಧಿ ಪ್ರೇರಣೆಯೇ ಎಲ್ಲ ಧರ್ಮಗಳ ಉದ್ದೇಶ

| Published : Dec 26 2024, 01:00 AM IST

ಸಾರಾಂಶ

ಎಲ್ಲ ಧರ್ಮಗಳ ಉದ್ದೇಶ ಬಹಿರಂಗದಿಂದ ಅಂತರಂಗ ಶುದ್ಧಿಯ ಕಡೆಗೆ ಕರೆದೊಯ್ಯುವುದಾಗಿದೆ. ಯಾವುದೇ ಧರ್ಮದ ಉದ್ದೇಶ ಕೆಟ್ಟವರನ್ನು ಕೊಲ್ಲುವ ಬದಲಿಗೆ, ಅವರಿಗೆ ಅವಕಾಶ ನೀಡಿ, ಒಳ್ಳೆಯ ಹಾದಿಗೆ ಕರೆತರುವುದಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೆಹಳ್ಳಿ ಪಟ್ಟಾಧ್ಯಕ್ಷರಾದ ಡಾ.ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಜಗಳೂರಲ್ಲಿ ನುಡಿದಿದ್ದಾರೆ.

- ಪ್ರೇರಣಾ ಸಮಾಜ ಸೇವಾ ಸಂಸ್ಥೆ ಚರ್ಚ್‌ನಲ್ಲಿ ಸಮಾರಂಭದಲ್ಲಿ ಸಾಣೆಹಳ್ಳಿ ಶ್ರೀ - - - ಕನ್ನಡಪ್ರಭ ವಾರ್ತೆ ಜಗಳೂರು

ಎಲ್ಲ ಧರ್ಮಗಳ ಉದ್ದೇಶ ಬಹಿರಂಗದಿಂದ ಅಂತರಂಗ ಶುದ್ಧಿಯ ಕಡೆಗೆ ಕರೆದೊಯ್ಯುವುದಾಗಿದೆ. ಯಾವುದೇ ಧರ್ಮದ ಉದ್ದೇಶ ಕೆಟ್ಟವರನ್ನು ಕೊಲ್ಲುವ ಬದಲಿಗೆ, ಅವರಿಗೆ ಅವಕಾಶ ನೀಡಿ, ಒಳ್ಳೆಯ ಹಾದಿಗೆ ಕರೆತರುವುದಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೆಹಳ್ಳಿ ಪಟ್ಟಾಧ್ಯಕ್ಷರಾದ ಡಾ.ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆ ಚರ್ಚ್‌ನಲ್ಲಿ ಬುಧವಾರ ನಡೆದ ಸರ್ವಧರ್ಮ ಸಮನ್ವಯ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸ್ವಾಮೀಜಿ ವಚನಕ್ರಾಂತಿ ಬಸವಣ್ಣನವರು ನೀಡಿರುವ ಏಳುಸೂತ್ರಗಳನ್ನು ಪಾಲನೆ ಮಾಡಿದಾಗ ಮಾತ್ರ ಅಂತರಂಗವು ಬಹಿರಂಗ ಶುದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.

ಮತ್ತೆ ಮತ್ತೆ ತಪ್ಪು ಮಾಡದೇ ಇರುವುದು ಪ್ರಾಯಶ್ಚಿತವಾಗಿದೆ. ಆದರೆ, ಇಂದಿನ ಕೆಲವಷ್ಟು ಜನ ತಪ್ಪಿನ ಪಾಪವನ್ನ ತೊಳೆಯುತ್ತೇವೆಂದು ಧರ್ಮದ ಕಟ್ಟೆ ಮೇಲೆ ಕುಳಿತು ಮೌಢ್ಯ, ಕಂದಾಚಾರ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಮನಸ್ಸಿನ ಮಾತುಕೇಳಿ. ಮನಸ್ಸಿಗೆ ಅಂಜಿ ನಡೆಯುವವ ಮಾತ್ರ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ. ನಾವು ಗೌರವಿಸಬೇಕಾಗಿರುವುದು ಜನ್ಮ ನೀಡಿದ ತಂದೆ- ತಾಯಿಯನ್ನೇ ಹೊರತು, ಗುಡಿಯಲ್ಲಿನ ದೇವರುಗಳಲ್ಲ. ಯೇಸುವಿನ ತಾಳ್ಮೆ, ಶಾಂತಿ, ಅಹಿಂಸೆ ಹಾಗೂ ಜನಹಿತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಧರ್ಮಗುರು ಹಾಗೂ ನಿಕಟಪೂರ್ವ ಪ್ರಾಂತ್ಯಾಧಿಕಾರಿ ವಂ.ಫಾದರ್ ಆರ್ಚಿ ಬಾಲ್ಡ್ ಗೊನ್ಸಾಲ್ವಿಸ್, ಇಹ್ಸಾನ್ ಮಾಝಿನ್ ಹೇರಿಟೇಜ್‌ನ ಮೌಲಾನಾ ಮಹಮ್ಮದ್ ಇಸ್ಹಾಖ್ ಸಖಾಫಿ, ವಂ.ಫಾದರ್‌, ಸಿಲ್ವೆಸ್ಟರ್‌ ಪಿರೇರಾ, ರಾಜಾಯೋಗಿನಿ ಬ್ರಹ್ಮಕುಮಾರಿ ಅಕ್ಕ ಭಾರತಿಜೀ, ಸಭೆ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ, ಗಾಯನ, ಭರತನಾಟ್ಯ ಮತ್ತಿತರ ವಿವಿಧ ಮನೋರಂಜನೆಗಳು ಜನರ ಕಣ್ಮನ ಸೆಳೆದವು. ಡಾನ್ ಬಾಸ್ಕೋ ನಿರ್ದೇಶಕ ಫಾದರ್ ರೆಜಿ ಜೇಕಬ್, ದಾವಣಗೆರೆ ಜಿಲ್ಲಾ ಜಾಗೃತಿ ಸದಸ್ಯ ಪಿ.ಎಸ್. ಅರವಿಂದನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ, ಹಿರಿಯ ನಾಗರೀಕರ ಸಂಘ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಜನಜಾಗೃತಿ ವೇದಿಕೆ ಸದಸ್ಯರಾದ ಮೆದಿಕೇರನಹಳ್ಳಿ ಮಲ್ಲಿಕಾರ್ಜುನ್, ವಕಿಲರಾದ ಕರಿಬಸಯ್ಯ, ದೇವಿಕೆರೆ ಎಲ್‌ಐಸಿ ತಿಪ್ಪೇಸ್ವಾಮಿ, ರೊನಾಲ್ಡ್ದರ್ಯೋಮಸ್ಜಥಳ ಸಂಸ್ಥೆ ಯೋಜನಾಧಿಕಾರಿ ಗಣೇಶ್, ಆಲ್ ಫಾತಿಮಾ ಸಂಸ್ಥೆ ಕಾರ್ಯದರ್ಶಿ ಶಾಹಿನಾ ಬೇಗಂ, ತಪಸ್ಸು ಟ್ರಸ್ಟ್ ಸಂಸ್ಥಾಪಕ ಮಂಜುನಾಥ ಗುರೂಜಿ, ಕರವೇ ಅಧ್ಯಕ್ಷ ಮಹಾಂತೇಶ್, ಇಂದಿರಾ ಗುರುಸ್ವಾಮಿ ಇತರರು ಉಪಸ್ಥಿತರಿದ್ದರು.

- - - -25ಜೆಜಿಎಲ್.ಆರ್1:

ಸರ್ವ ಸಮನ್ವಯ ಸಮಾರಂಭಕ್ಕೆ ಡಾ.ಪಂಡಿತಾರಾಧ್ಯ ಶಿವಚಾರ್ಯ ಸ್ವಾಮಿಗಳು ಕೇಕ್‌ ಕತ್ತರಿಸುವ ಮೂಲಕ ಚಾಲನೆ ನೀಡಿದರು.