ಮಕ್ಕಳು ವರ್ಷವಿಡೀ ಕಲಿತಿದ್ದನ್ನು ಪ್ರದರ್ಶಿಸುವುದೇ ಕಲಿಕಾ ಹಬ್ಬದ ಉದ್ದೇಶ: ಮಂಜುಳಾ

| Published : Feb 21 2025, 12:47 AM IST

ಮಕ್ಕಳು ವರ್ಷವಿಡೀ ಕಲಿತಿದ್ದನ್ನು ಪ್ರದರ್ಶಿಸುವುದೇ ಕಲಿಕಾ ಹಬ್ಬದ ಉದ್ದೇಶ: ಮಂಜುಳಾ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಮಕ್ಕಳು ವರ್ಷವಿಡೀ ಕಲಿತಿರುವ ಶಿಕ್ಷಣವನ್ನು ಪೋಷಕರ ಎದುರು ಪ್ರದರ್ಶನ ಮಾಡಿ ಹಬ್ಬದಂತೆ ಸಂಭ್ರಮಿಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದು ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕಿ ಮಂಜುಳಾ ತಿಳಿಸಿದರು.

ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೆಟ್ಟಿಕೊಪ್ಪ ಕ್ಲಸ್ಠರ್ ಮಟ್ಟದ ಕಲಿಕಾ ಹಬ್ಬ। ಸಭಾಂಗಣ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಕ್ಕಳು ವರ್ಷವಿಡೀ ಕಲಿತಿರುವ ಶಿಕ್ಷಣವನ್ನು ಪೋಷಕರ ಎದುರು ಪ್ರದರ್ಶನ ಮಾಡಿ ಹಬ್ಬದಂತೆ ಸಂಭ್ರಮಿಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದು ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕಿ ಮಂಜುಳಾ ತಿಳಿಸಿದರು.

ಗುರುವಾರ ಕಡಹಿನಬೈಲು ಗ್ರಾಮ ಪಂಚಾಯಿತಿ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೆಟ್ಟಿಕೊಪ್ಪ ಕ್ಲಸ್ಠರ್ ಮಟ್ಟದ ಕಲಿಕಾ ಹಬ್ಬ ಹಾಗೂ ₹6 ಲಕ್ಷ ವೆಚ್ಚದ ಸಭಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಪರೀಕ್ಷೆಗೆ ಮುಂಚೆ ನಡೆಯುವ ಕಲಿಕಾ ಹಬ್ಬದಲ್ಲಿ 7 ವಿವಿಧ ಸ್ಪರ್ಧೆ ನಡೆಯುತ್ತದೆ. ಮಕ್ಕಳ ಶಿಕ್ಷಣಕ್ಕೆ ಕಲಿಕಾ ಹಬ್ಬ ತಳಪಾಯ ಇದ್ದಂತೆ. ಗುಣಮಟ್ಟದ ಶಿಕ್ಷಣ ಸಿಕ್ಕಿದೆಯೇ ಎಂಬುದು ಸಹ ಕಲಿಕಾ ಹಬ್ಬದಲ್ಲಿ ತಿಳಿಯಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ಕಲಿಕಾ ಹಬ್ಬದ ಜೊತೆಗೆ ₹6 ಲಕ್ಷ ವೆಚ್ಚದ ಸಭಾಂಗಣ ಉದ್ಘಾಟನೆಯಾಗಿದೆ. ಶಾಸಕ ಟಿ.ಡಿ.ರಾಜೇಗೌಡರು ತಮ್ಮ ಅನುದಾನದಲ್ಲಿ ನಲಿ ,ಕಲಿ ಕೊಠಡಿಗೆ ₹2 ಲಕ್ಷ , ಶಾಲಾ ಕೊಠಡಿ ದುರಸ್ಥಿಗೆ ₹2 ಲಕ್ಷ ನೀಡಿದ್ದಾರೆ. ಸಭಾಂಗಣಕ್ಕೆ₹ 4 ಲಕ್ಷ, ಇಂಟರ್ ಲಾಕ್‌ ಗೆ ₹2 ಲಕ್ಷ ಬಂದಿದ್ದು 3 ವರ್ಷದ ಅವಧಿಯಲ್ಲಿ ಶಾಲೆ ಅಭಿವೃದ್ದಿಗೆ ₹10 ಲಕ್ಷ ನೀಡಿದ್ದಾರೆ. ಅನುದಾನ ಬರುವಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೇರ್ ಬೈಲು ನಟರಾಜ್ ಪ್ರಯತ್ನವೂ ಸೇರಿದೆ ಎಂದರು.

ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಕಲಿಸಿರುವುದನ್ನು ಕಲಿಕಾ ಹಬ್ಬದ ಮೂಲಕ ಮಕ್ಕಳು ಪ್ರದರ್ಶನ ಮಾಡಲಿದ್ದಾರೆ. ಈ ಏಳು ಸ್ಪರ್ಧೆಗಳಲ್ಲಿ ಗೆಲ್ಲುವುದೇ ಮುಖ್ಯವಲ್ಲ. ಮಕ್ಕಳು ಭಾಗವಹಿಸುವುದು ಸಹ ಮುಖ್ಯ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಆಡುವಳ್ಳಿ ಗ್ರಾಪಂ ಸದಸ್ಯ ಗೇರ್ ಬೈಲು ನಟರಾಜ್ ಸಭಾಂಗಣ ಉದ್ಘಾಟಿಸಿದರು. ಸಭೆ ಅಧ್ಯಕ್ಷತೆಯನ್ನು ಸೂಸಲ ವಾನಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗೇಶ್ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಚಂದ್ರಶೇಖರ್‌, ಎ.ಬಿ. ಮಂಜುನಾಥ್, ಲಿಲ್ಲಿ ಮಾತುಕುಟ್ಟಿ, ವಾಣಿ ನರೇಂದ್ರ, ಪೂರ್ಣಿಮ, ಶೈಲಾ ಮಹೇಶ್, ಎಸ್‌.ಡಿ.ಎಂ.ಸಿ. ಮಾಜಿ ಅಧ್ಯಕ್ಷ ದೇವಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾ ನಾಯಕ್, ರಾಜ್ಯ ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ಅಶೋಕ್‌, ತಾ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಸಿ.ಆರ್‌.ಪಿ. ತಿಮ್ಮಮ್ಮ, ಶಾಲಾ ಮುಖ್ಯೋಪಾಧ್ಯಾಯ ರಾಜಪ್ಪ, ಬಿ.ಐ.ಇ.ಆರ್.ಟಿ. ತಿಮ್ಮೇಶಪ್ಪ, ಶಿಕ್ಷಣ ಸಂಯೋಜಕ ರಂಗಪ್ಪ, ಶಿಕ್ಷಕರ ಸಂಘದ ಮಂಗಳಗೌರಮ್ಮ, ದೇವರಾಜ್‌, ಸರ್ಕಾರಿ ನೌಕರರ ಸಂಘದ ರಾಜಾನಾಯಕ್, ಕಲಿಕಾ ಹಬ್ಬದ ನೋಡಲ್ ಅಧಿಕಾರಿ ಓಂಕಾರಪ್ಪ, ಸಿ.ಆರ್.ಪಿ. ಗೀತ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ಆಡುವಳ್ಳಿ ಗ್ರಾಪಂ ಸದಸ್ಯ ಗೇರ್‌ ಬೈಲು ನಟರಾಜ, ಸೂಸಲವಾನಿ ಶಾಲೆಯ ಮುಖ್ಯ ಶಿಕ್ಷಕ ರಾಜಪ್ಪ, ಸಹ ಶಿಕ್ಷಕಿ ಪ್ರಮೀಳಾ, ಸಿ.ಆರ್‌.ಪಿ. ತಿಮ್ಮಮ್ಮ ಅವರನ್ನು ಸನ್ಮಾನಿಸಲಾಯಿತು. 9 ಶಾಲೆಯ ಮಕ್ಕಳು 7 ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.