ಹ್ಯಾಂಡ್‌ ಪೋಸ್ಟ್‌ ನಲ್ಲಿ ತಂಪು ಮಾಡಿದ ಮಳೆರಾಯ

| Published : May 04 2024, 12:41 AM IST

ಸಾರಾಂಶ

ಸಂಜೆ ಪ್ರಾರಂಭವಾದ ಮಳೆ ಒಂದು ಗಂಟೆಗೆ ಹೆಚ್ಚು ಕಾಲ ಸುರಿಯಿತು. ಎಚ್.ಡಿ. ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಲ್ಲಿ ತೆಂಗಿನ ಮರಕ್ಕೆಸಿಡಿಲು ಬಡಿದು, ಹೊತ್ತಿ ಉರಿಯಿತು. ಇದರಿಂದ ಭಯಬೀತರಾಗಿದ್ದ ಜನರು, ತಕ್ಷಣವೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದರು.

---------

ಕನ್ನಡಪ್ರಭ ವಾರ್ತೆ ಹ್ಯಾಂಡ್ ಪೋಸ್ಟ್

ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದ ಜನತೆಗೆ ಶುಕ್ರವಾರ ಸಂಜೆ ಸುರಿದ ಮಳೆ ತಂಪು ಮಾಡಿದೆ.

ಮಳೆ ಇಲ್ಲದೆ ರೈತರು ಮತ್ತು ಜನರು ಬಿಸಿಲಿನ ತಾಪ ತಡೆಯದೆ, ಎಲ್ಲೆಂದರೆ ಅಲ್ಲಿ ಆಕಾಶದತ್ತ ನೋಡುತ್ತಿದ್ದ ಜನತೆಗೆ ಇಂದು ಎಚ್‌.ಡಿ. ಕೋಟೆ ತಾಲೂಕಿನ ಬಹುತೇಕ ಕಡೆ ಮಳೆಯಾಗಿದ್ದು, ಜನರಲ್ಲಿ ಹರ್ಷ ಬಂದಿದೆ.

ಸಂಜೆ ಪ್ರಾರಂಭವಾದ ಮಳೆ ಒಂದು ಗಂಟೆಗೆ ಹೆಚ್ಚು ಕಾಲ ಸುರಿಯಿತು. ಎಚ್.ಡಿ. ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಲ್ಲಿ ತೆಂಗಿನ ಮರಕ್ಕೆಸಿಡಿಲು ಬಡಿದು, ಹೊತ್ತಿ ಉರಿಯಿತು. ಇದರಿಂದ ಭಯಬೀತರಾಗಿದ್ದ ಜನರು, ತಕ್ಷಣವೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದರು. ಹಲವು ಕಡೆಗಳಲ್ಲಿ ರಸ್ತೆಗೆ ಮತ್ತು ಜಮೀನುಗಳಲ್ಲಿ ಮರಗಳು ಧರೆಗೆ ಉರುಳಿವೆ.