ಅಖಂಡ ಭಾರತದ ಕನಸು ನನಸಾದಾಗಲೇ ನಿಜವಾದ ಸ್ವಾತಂತ್ರ್ಯೋತ್ಸವ

| Published : Aug 15 2024, 01:52 AM IST

ಸಾರಾಂಶ

ಯುವಕರಲ್ಲಿ ದೇಶಭಕ್ತಿ ಗಟ್ಟಿಗೊಳ್ಳಬೇಕಾದರೆ ಭಾರತದ ಇತಿಹಾಸ ಅವರ ಅರಿವಿಗೆ ಬರಬೇಕು ಎಂದು ಹಾರಿಕಾ ಮಂಜುನಾಥ ಹೇಳಿದರು.

ಹಾನಗಲ್ಲ: ವಿಕಸಿತ ಭಾರತವಾಗಲು ಸಂಕಲ್ಪಿಸುವುದು ಭಾರತೀಯರ ಆದ್ಯತೆಯಾಗಬೇಕಲ್ಲದೆ, ನರಮೇಧದೊಂದಿಗೆ ವಿಭಜಿತವಾದ ಭಾರತದ ಇತಿಹಾಸವನ್ನು ಎಲ್ಲ ಭಾರತಿಯರು ಅರಿಯಬೇಕು. ಅಖಂಡ ಭಾರತದ ಕನಸು ನನಸಾದಗಾಲೇ ನಿಜವಾದ ಸ್ವಾತಂತ್ರ್ಯೋತ್ಸವ ಎಂದು ಖ್ಯಾತ ಯುವ ವಾಗ್ಮಿ, ಬೆಂಗಳೂರಿನ ಹಾರಿಕಾ ಮಂಜುನಾಥ ತಿಳಿಸಿದರು

ಹಾನಗಲ್ಲಿನಲ್ಲಿ ಹಿಂದೂ ಜಾಗರಣ ವೇದಿಕೆ ಶಂಕರಮಠದ ಆವರಣದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಮುಖ್ಯ ವಕ್ತಾರರಾಗಿ ಮಾತನಾಡಿದರು.ಭಾರತ ಸ್ವತಂತ್ರವಾಗುವ ಮೊದಲು ಅಖಂಡ ಭಾರತವೇ ನಮ್ಮ ಧ್ಯೇಯ ಎಂದ ನಾಯಕರು ತುಂಡಾದ ಭಾರತವನ್ನು ಪಡೆದು ಕುಬ್ಜ ಮನೋಸ್ಥಿತಿಯಲ್ಲಿ ಎಲ್ಲವನ್ನೂ ಒಪ್ಪಿಕೊಂಡರು. ಆಗ ಹಿಂದುಗಳ ಮೇಲೆ ನಡೆದ ಅನ್ಯಾಯ, ಅತ್ಯಾಚಾರದ ಬಗ್ಗೆ ನಮ್ಮ ನಾಯಕರು ಚಕಾರವನ್ನೂ ಎತ್ತಲಿಲ್ಲ. ಹಿಂದುಗಳು ಸಿಂಹ ಎಂಬುದನ್ನು ಮರೆಯುವುದು ಬೇಡ. ಯುವಕರಲ್ಲಿ ದೇಶಭಕ್ತಿ ಗಟ್ಟಿಗೊಳ್ಳಬೇಕಾದರೆ ಭಾರತದ ಇತಿಹಾಸ ಅವರ ಅರಿವಿಗೆ ಬೆರಬೇಕು. ವಂದೇ ಮಾತರಂ ತುಂಡಾದ ಕಥೆ ಎಲ್ಲ ಭಾರತೀಯರಿಗೆ ತಿಳಿಯಬೇಕಾಗಿದೆ. ತ್ರಿಖಂಡ ಭಾರತ ಅಖಂಡವಾದಾಗಲೇ ನಿಜವಾದ ಅಖಂಡ ಭಾರತದ ಕನಸು ನನಸಾದಂತೆ. ಉಗ್ರಗಾಮಿಗಳನ್ನು ಸಂರಕ್ಷಿಸುವ ನಾಯಕರ ದಂಡು ನಮ್ಮಲ್ಲಿರುವುದೇ ದೊಡ್ಡ ದುರಂತ. ಭಾರತದ ೯ ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರು ಎಂದರು.

ನಮ್ಮ ಭಾರತಿ ಈಗ ವಿಶ್ವಭಾರತಿಯಾಗಿದ್ದಾಳೆ. ಆದರೆ, ಹಿಂದು ರಾಷ್ಟ್ರದಲ್ಲಿ ಹಿಂದುಗಳಿಗೇ ಹಿನ್ನಡೆಯಾಗುತ್ತಿದೆ. ನಾವೆಲ್ಲ ಹಿಂದು ಎಂದು ಹೆಮ್ಮೆ ಪಡೋಣ. ಬಾಂಗ್ಲಾದೇಶದಲ್ಲಿ ಹಿಂದುಗಳ ನರಮೇಧವನ್ನು ಮೆಟ್ಟಿ ನಿಂತಿದ್ದಾರೆ. ಈಗ ಭಾರತದಲ್ಲಿ ಹಿಂದುಗಳ ನಿರ್ಲಕ್ಷ್ಯದಿಂದ ಹಿಂದುಗಳಿಗೆ ಪೆಟ್ಟು ಬೀಳುತ್ತಿದೆ. ಈ ನೆಲದ ಹೆಣ್ಣು ಮಕ್ಕಳು ಈಗ ಎಚ್ಚೆತ್ತು ಕಾಳಿ ದುರ್ಗಿಯರಾಗಬೇಕಾಗಿದೆ. ಹಿಂದು ಜಾಗೃತವಾಗಲೇಬೇಕಾದ ಕಾಲ ಇದು. ಉದ್ಯಮಿ ಬಿ. ಶಿವಬಸವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಂಜಿನ ಮೆರವಣಿಗೆ:

ಕಾರ್ಯಕ್ರಮಕ್ಕೂ ಮೊದಲು ಸಂಜೆ ೭ ಗಂಟೆಯಿಂದ ೮.೩೦ರ ವರೆಗೆ ಪಟ್ಟಣದ ಮಹಾತ್ಮಾಗಾಂಧೀ ವೃತ್ತದಿಂದ ಶಂಕರಮಠದ ವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಭಗವಾಧ್ವಜದೊಂದಿಗೆ ಪಂಜಿನ ಮೆರವಣಿಗೆ ನಡೆಯಿತು.