ಸಾರಾಂಶ
ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಸಮರ ಸಾರಿ ಮೊದಲ ಗೆಲುವು ಸಾಧಿಸಿದ ದಿನ ಅ.೨೩ ಈ ಐತಿಹಾಸಿಕ ವಿಜಯಕ್ಕೀಗ ೨೦೦ ವರ್ಷ ಪೂರ್ಣಗೊಂಡಿದ್ದು. ಇದರ ಜ್ಞಾಪಕಾರ್ತವಾಗಿ ಕೇಂದ್ರ ಸರ್ಕಾರ ಚನ್ನಮ್ಮನವರ ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ನಾಡಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವಿಧಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ ಅಭಿನಂದನೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಸಮರ ಸಾರಿ ಮೊದಲ ಗೆಲುವು ಸಾಧಿಸಿದ ದಿನ ಅ.೨೩ ಈ ಐತಿಹಾಸಿಕ ವಿಜಯಕ್ಕೀಗ ೨೦೦ ವರ್ಷ ಪೂರ್ಣಗೊಂಡಿದ್ದು. ಇದರ ಜ್ಞಾಪಕಾರ್ತವಾಗಿ ಕೇಂದ್ರ ಸರ್ಕಾರ ಚನ್ನಮ್ಮನವರ ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ನಾಡಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವಿಧಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ ಅಭಿನಂದನೆ ಸಲ್ಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.೨೩ ರಂದು ಕೇಂದ್ರ ಸರ್ಕಾರ ವೀರರಾಣಿ ಕಿತ್ತೂರು ಚನ್ನಮ್ಮ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದು, ಈ ಮೂಲಕ ಭಾರತದ ಮೊದಲ ಮಹಿಳಾ ಹೋರಾಟಗಾರ್ತಿ ಅಪ್ಪಟ ದೇಶಪ್ರೇಮಿ ರಾಷ್ಟ್ರರಕ್ಷಣೆಗಾಗಿ ತನ್ನ ಸಾಮ್ರಾಜ್ಯ ಮತ್ತು ಜೀವವನ್ನು ಕಳೆದುಕೊಂಡ ಕೆಚ್ಚದೆಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮಗೆ ಮತ್ತು ಕನ್ನಡ ನಾಡಿಗೆ ಅಭೂತಪೂರ್ವ ಗೌರವ ಸಲ್ಲಿಸುತ್ತಿದೆ. ಕಿತ್ತೂರು ಕರ್ನಾಟಕ ಭಾಗ, ಸಮಗ್ರ ಕರ್ನಾಟಕ ಹೆಮ್ಮೆ ಪಡುವಂತ ವಿಷಯ ಎಂದು ತಿಳಿಸಿದರು.
ಕಳೆದ ನಾಲ್ಕೈದು ದಿನಗಳ ಹಿಂದಷ್ಟೆ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಿತ್ತೂರು ಕರ್ನಾಟಕ ಭಾಗದ ಜನಪ್ರತಿನಿಧಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೇಂದ್ರ ಸರ್ಕಾರ ಕಿತ್ತೂರು ರಾಣಿ ಚನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ತ್ವರಿತ ನಿರ್ಣಯ ಕೈಗೊಂಡಿದ್ದು ಬ್ರಿಟಿಷರ ವಿರುದ್ಧ ಮೊದಲ ಗೆಲುವು ಸಾಧಿಸಿದ ಐತಿಹಾಸಿಕ ದಿನದಂದೇ ಬಿಡುಗಡೆಗೊಳಿಸುತ್ತಿರುವುದು ಹೆಮ್ಮೆಯ ವಿಷಯ. ಈ ಶೀಘ್ರ ನಿರ್ಣಯ ಕೈಗೊಂಡ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ಸರ್ಕಾರದ ಸಂಪುಟದ ಸಚಿವರಿಗೆ ಹಾಗೂ ರಾಜ್ಯದ ಸಂಸದರಿಗೆ ಹತ್ಪೂರ್ವಕ ಅಭಿನಂದನೆಗಳು.-ಹಣಮಂತ ಆರ್.ನಿರಾಣಿ,
ವಿಧಾನ ಪರಿಷತ್ತಿನ ಸದಸ್ಯರು.