ಅಡಕೆ, ತೆಂಗು, ಮಾವಿನ ಮರ ನಾಶ । ತೋಟದಲ್ಲಿದ್ದ ನೀರಿನ ಪೈಪ್, ಡ್ರಿಪ್ ಪೈಪ್ಸ್ ವಾಲ್ವ್ಗಳ ನಾಶ
ಕನ್ನಡಪ್ರಭ ವಾರ್ತೆ, ತರೀಕೆರೆತಾಲೂಕಿನ ಲಿಂಗದಹಳ್ಳಿ ಹೋಬಳಿ ಬಳ್ಳಾವರ ಮತ್ತು ಗಂಗೂರು ಗ್ರಾಮಗಳ ಸುತ್ತಲಿನ ಜಮೀನು ತೋಟಗಳ ಸಮೀಪದ ಕಾಡಿನಿಂದ ಕಾಡಾನೆಗಳು ನುಗ್ಗಿ ಫಸಲು ಬಿಡುತ್ತಿರುವ ತೆಂಗು, ಅಡಕೆ ಮತ್ತು ಮಾವಿನ ಮರಗಳನ್ನು ಮನಸೋ ಇಚ್ಚೆ ತುಳಿದು ಮುರಿದು ನಾಶ ಪಡಿಸುತ್ತಿವೆ ಎಂದು ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಉಸ್ತುವಾರಿ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್ ತಿಳಿಸಿದ್ದಾರೆ.ಶುಕ್ರವಾರ ರಾತ್ರಿ ಕಾಡಾನೆಗಳು ಗಂಗೂರು, ಬಳ್ಳಾವರ ಸ.ನಂ.54, 55 ರಲ್ಲಿ ಫಸಲು ಬಿಡುತ್ತಿದ್ದ ಅಡಕೆ ತೆಂಗು ಮತ್ತು ಮಾವಿನ ಮರಗಳನ್ನು ಬುಡ ಸಹಿತ ಉರುಳಿಸಿದೆ. ಫಸಲು ಬಿಡುತ್ತಿದ್ದ ದೊಡ್ಡ ದೊಡ್ಡ ಮಾವಿನ ಮರಗಳ ಟೊಂಗೆಗಳೆಲ್ಲವನ್ನು ಮುರಿದಿವೆ. ತೋಟದಲ್ಲಿ ನೀರು ಹಾಯಿಸುವ ವಾಲ್ವ್ ಮತ್ತು ಪೈಪುಗಳನ್ನು ತುಳಿದು ನಾಶ ಪಡಿಸಿವೆ. ಸಂಜೆ ಹೊತ್ತಿನಲ್ಲೇ ಆನೆಗಳು ತೋಟಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಜನಗಳನ್ನು ಕಾಡಾನೆ ಅಟ್ಟಿಸಿಕೊಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಕಾಡಾನೆ ಕಾಟ ತುಂಬಾ ಹೆಚ್ಚಾಗಿದ್ದು ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಬಹು ವಾರ್ಷಿಕ ಬೆಳೆಗಳನ್ನು ಕ್ಷಣಮಾತ್ರದಲ್ಲಿ ದ್ವಂಸ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಈಗ 6-7 ವರ್ಷಗಳಿಂದ ನಮ್ಮ ತೋಟದಲ್ಲೇ ಅಂದಾಜು 35 ತೆಂಗು, 50 ಅಡಕೆ ಮರಗಳು, 20 ಮಾವಿನ ಮರಗಳು ನಾಶವಾಗಿವೆ ಎಂದು ತಿಳಿಸಿದ್ದಾರೆ.
ಆನೆಗಳು ಕಾಡಿನಿಂದ ದಾಟಿ ಬಾರದಂತೆ ಸ್ಟ್ರಂಚ್ ತೋಡುವ ಕಾಮಗಾರಿ ಕೂಡಲೇ ನಿರ್ವಹಿಸಬೇಕೆಂದು ಇಲಾಖೆಯನ್ನು ಒತ್ತಾಯಿಸಿದ್ದಾರೆ.30ಕೆಟಿಆರ್.ಕೆ.15ಃಬಳ್ಳಾವರ ಗಂಗೂರು ಗ್ರಾಮ ಸುತ್ತಮುತ್ತ ತೋಟಗಳಿಗೆ ಕಾಡಾನೆಗಳು ನುಗ್ಗಿ ತೆಂಗಿನ ಮರಗಳನ್ನು ನಾಶ ಪಡಿಸಿರುವುದು.
30ಕೆಟಿಆರ್.ಕೆ.16ಃ
ಬಳ್ಳಾವರ ಗಂಗೂರು ಗ್ರಾಮ ಸುತ್ತಮುತ್ತ ತೋಟಗಳಿಗೆ ಕಾಡಾನೆಗಳು ಮಾವಿನ ಮರಗಳನ್ನು ನಾಶ ಪಡಿಸಿರುವುದು.