ಉಡುಪಿ: ನಿರೀಕ್ಷೆ ಮೀರಿದ ಪಶ್ಚಿಮ ಬಂಗಾಳದ ಗೆಲುವು ದೇಶ ಗೆದ್ದ ಅನುಭವ ಕೊಟ್ಟಿದೆ. ದೀದಿ ಸರ್ಕಾರ, ಕೇವಲ ಬಿಜೆಪಿ ಮತ್ತು ಮೋದಿ ವಿರೋಧಿಯಾಗಿರಲಿಲ್ಲ, ಬದಲಾಗಿ ರಾಷ್ಟ್ರ ವಿರೋಧಿಯಾಗಿತ್ತು. ಸ್ತ್ರೀ ವಿರೋಧಿ, ಹಿಂದೂ ವಿರೋಧಿ, ದೇಶವಿರೋಧಿ ಸರ್ಕಾರವೊಂದರ ನಿರ್ಗಮನ ದೇಶ ಮೊದಲು ಎಂಬ ರಾಷ್ಟ್ರ ಭಕ್ತರು ನಿಟ್ಟಿಸಿರು ಬಿಡುವಂತಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅಸ್ಸಾಂ, ಪುದುಚೇರಿಯ ಗೆಲುವು ತಮಿಳುನಾಡು, ಕೇರಳದ ಫಲಿತಾಂಶ ಏನೇ ಆದರೂ ಎನ್.ಡಿ.ಎ ತಮ್ಮ ಶಕ್ತಿ ವೃದ್ಧಿಸಿಕೊಂಡಿದೆ ಎಂದು ಕೋಟ ಹೇಳಿದ್ದಾರೆ.

ಕರ್ನಾಟಕದ ಫಲಿತಾಂಶದ ಬಗ್ಗೆ ಮಾತನಾಡಿದ ಅವರು ಆಡಳಿತ ಪಕ್ಷ ಗೆದ್ದಿದೆ ಎನ್ನುವುದಕ್ಕಿಂತ ಹಣಬಲ ಗೆದ್ದಿದೆ ಎಂದು ವರದಿಗಳು ತಿಳಿಸುತ್ತಿವೆ. ಒಟ್ಟಾರೆ ಫಲಿತಾಂಶವನ್ನು ಗೌರವಿಸುತ್ತೇವೆ. ಹಾಗೂ ಇಂದಿನ ಚುನಾವಣೆ ಭಾರತೀಯ ಜನತಾ ಪಕ್ಷದ ಸಂಘಟನಾ ಶಕ್ತಿ ಹೆಚ್ಚಿಸಲಿದೆ ಎಂದಿದ್ದಾರೆ.