ಜಾನಪದದಲ್ಲಿದೆ ಕನ್ನಡದ ಸಿರಿವಂತಿಕೆ

| Published : Mar 05 2025, 12:33 AM IST

ಸಾರಾಂಶ

ನಮ್ಮ ಮನೆಯ ಕಾರ್ಯಕ್ರಮಕ್ಕೆ ಬಂದಂತಹ ಕ್ಷಣ ಇದು. ಹಳ್ಳಿಗೆ ಹೋಗಲು ಆಗದ ಕಾಲದಲ್ಲಿ ಹಳ್ಳಿ ಸುತ್ತಾಡಿ ಹಳ್ಳಿ ಹಾಡು ಕೇಳಿದ್ದಾರೆ. ಅದನ್ನು ಸಂಶೋಧನೆಗೆ ತರುತ್ತಾರೆ

ಹೊನ್ನಾವರ: ತಾಲೂಕಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಜಾನಪದ ಪ್ರತಿಷ್ಠಾನ ಹೊನ್ನಾವರ ಹಾಗೂ ಎಸ್ಡಿಎಂ ಪದವಿ ಕಾಲೇಜಿನ ಕನ್ನಡ ವಿಭಾಗ ಸಹಯೋಗದಲ್ಲಿ ಜಾನಪದ ದೀಪಾರಾಧನೆ ೪೪ ಹಾಗೂ ೪೫ ಕಾರ್ಯಕ್ರಮ ಜರುಗಿತು.

ಖ್ಯಾತ ಪರಿಸರ ತಜ್ಞ ಶಿವಾನಂದ ಕಳವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಮನೆಯ ಕಾರ್ಯಕ್ರಮಕ್ಕೆ ಬಂದಂತಹ ಕ್ಷಣ ಇದು. ಹಳ್ಳಿಗೆ ಹೋಗಲು ಆಗದ ಕಾಲದಲ್ಲಿ ಹಳ್ಳಿ ಸುತ್ತಾಡಿ ಹಳ್ಳಿ ಹಾಡು ಕೇಳಿದ್ದಾರೆ. ಅದನ್ನು ಸಂಶೋಧನೆಗೆ ತರುತ್ತಾರೆ. ಕ್ಷೇತ್ರ ಕಾರ್ಯ ಮಾಡಿ ಪುಸ್ತಕ ಬರೆದಿದ್ದಾರೆ‌. ಯಾವತ್ತು ಇಷ್ಟಪಟ್ಟು ಮಾಡಿದ ಕೆಲಸ ಫಲ ನೀಡುತ್ತದೆ. ಜಾನಪದ ಶಕ್ತಿಯಾಗಿ ಉತ್ತರ ಕನ್ನಡ ನಿಲ್ಲುತ್ತದೆ. ಕನ್ನಡದ ಸಿರಿವಂತಿಕೆ ಜಾನಪದದಲ್ಲಿದೆ. ಹಳ್ಳಿಯಲ್ಲಿ ಮಾತ್ರ ಜನಪದ ತಾಕತ್ತು ಕಾಣುತ್ತದೆ. ಶಬ್ದದ ಬಗ್ಗೆ ಅರಿವಾಗಲು ಜನಪದದಲ್ಲಿ ಮಿಂದೆಳಬೇಕು. ಜನಪದ ಮಣ್ಣಲ್ಲಿ ಅಡಗಿದೆಯೇ ಹೊರತು, ಈಗೀನ ಕಾಂಕ್ರೀಟ್ ನಲ್ಲಲ್ಲ. ಕೌಶಲ್ಯ ಅಣಕಿಸುವ ಕೆಲಸ ಆಗ್ತಿದೆ‌ ನಮ್ಮಲ್ಲಿಗ ಸುಧಾರಣೆಗಿಂತ ಬದಲಾವಣೆಗೆ ನಾವು ಸಾಗುತ್ತಿದ್ದೇವೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕೃಷ್ಣಮರ‍್ತಿ ಭಟ್,ಶಿವಾನಿ, ಡಾ.ಎನ್.ಆರ್.ನಾಯಕರದ್ದು ಅದ್ಭುತ ವ್ಯಕ್ತಿತ್ವ.ಹಾಗೂ ಎನ್.ಆರ್. ನಾಯಕ್ ಪ್ರಾಚಾರ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಂಸ್ಥೆ ನನಗೇನು ಕೊಟ್ಟಿದೆ ಎಂದು ಕೇಳುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಡಾ. ಎನ್.ಆರ್.ನಾಯಕ್. ಡಾ. ಎನ್.ಆರ್. ನಾಯಕರ ಮಾರ್ಗದರ್ಶನದಲ್ಲಿ ನಾವು ಮುಂದುವರಿಸುತ್ತಿದ್ದೇವೆ. ಹಿಂದಿನ ಮಹನೀಯರ ತ್ಯಾಗದಿಂದ ಸಂಸ್ಥೆ ಬೆಳೆದಿದೆ. ಜನಪದ ದೀಪಾರಾಧನೆ ಪ್ರತಿ ವರ್ಷ ಎಸ್.ಡಿ.ಎಂ. ಕಾಲೇಜು ಮಾಡುತ್ತದೆ ಎಂದು ಭರವಸೆ ನೀಡಿದರು.

ಡಾ. ಎನ್.ಆರ್. ನಾಯಕ ಶಿಸ್ತು, ನಡೆ, ನುಡಿ ಎಲ್ಲವೂ ಕಾಲೇಜಿನಲ್ಲಿ ಪ್ರಭಾವ ಬೀರಿದೆ ಎಂದರು.

ಡಾ. ಶ್ರೀಪಾದ ಭಟ್, ಧಾರೇಶ್ವರ ಹಾಗೂ ಕೃಷ್ಣಮೂರ್ತಿ ಭಟ್, ಶಿವಾನಿಗೆ ಕುವೆಂಪು ದೀಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಿವಾನಂದ ಕಳವೆ, ಶಿರಸಿ ಮತ್ತು ಶರಣ್ಯ ರಾಮಪ್ರಕಾಶ, ಬೆಂಗಳೂರು ಇವರಿಗೆ ಕಾರಂತ ದೀಪ ಪ್ರಶಸ್ತಿ ಹಾಗೂ ಯಶೋಧಾ ಮರಾಠಿ, ಅಂಕೋಲಾ, ಕಾರ್ತಿಕ ನಾಯಕ, ಅಂಕೋಲಾ ಇವರಿಗೆ ದೇವಮ್ಮ ನಾಯಕ ಪ್ರಶಸ್ತಿ, ಋತ್ವಿಕ್ ಮೇಸ್ತ, ಹೊನ್ನಾವರ ಇವರಿಗೆ ವಿದ್ಯಾರ್ಥಿ ದೀಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಡಾ. ಶ್ರೀಪಾದ್ ಭಟ್, ಕಾಲೇಜಿನ ದಿನಗಳನ್ನು ನೆನೆಯುತ್ತಾ, ಎನ್.ಆರ್. ನಾಯಕ ಮಾಡಿದ ಸಹಾಯ ನೆನಪಿಸಿಕೊಂಡರು. ಅಲ್ಲದೆ ನನಗೆ ಹಲವಾರು ಪ್ರಶಸ್ತಿ ದೊರಕಿದೆ. ಆದರೆ ಅದೆಲ್ಲ ಪ್ರಶಸ್ತಿಗಳಿಗಿಂತ ದೊಡ್ಡದು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಮಾತನಾಡಿ, ಜನಪದ ದೀಪಾರಾಧನೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ರೂವಾರಿ ಹಾಗೂ ಕಳೆದ ೪೩ ವರ್ಷಗಳಿಂದ ನಿರಂತರವಾಗಿ ಜನಪದ ದೀಪಾರಾಧನೆ ನಡೆಸುತ್ತಾ ಬಂದಿರುವ ಡಾ. ಎನ್.ಆರ್. ನಾಯಕ ಮಾತನಾಡಿ, ತಾವು ಕೆಲಸ ಮಾಡಿದ ಸಂಸ್ಥೆಯ ಬಗ್ಗೆ ಮಾತನಾಡಿದರು.

ಎಂಪಿಇ ಸೊಸೈಟಿ ನನಗೆ ಎಲ್ಲವನ್ನು ನೀಡಿದೆ. ಸಂಸ್ಥೆ ಎಂದರೆ ಹೇಗಿರಬೇಕು ಅನ್ನೋದನ್ನು ಎಸ್.ಡಿ.ಎಂ.ಕಾಲೇಜು ನೋಡಿ ಕಲಿಯಬೇಕು. ನಾನು ಈಗ ಜೀವನದ ಕೊನೆಗಾಲದಲ್ಲಿದ್ದೇನೆ. ಈ ವೇಳೆ ನಮ್ಮ ಸಂಸ್ಥೆ , ಕಾಲೇಜು ಬೆಳೆದು ನಿಂತಿರುವುದನ್ನ ನೋಡಿ ಸಂತಸಪಡುತ್ತೇನೆ ಎಂದರು.

ಇದೇ ವೇಳೆ ಎನ್.ಆರ್. ನಾಯಕ್ ಬರೆದ ಕೊಮಾರ ಪಂಥದ ಜಾನಪದ ಸಾಹಿತ್ಯ ಪುಸ್ತಕ ಲೋಕಾರ್ಪಣೆಗೊಂಡಿತು. ಈ ಪುಸ್ತಕದ ಬಗ್ಗೆ ಶ್ರೀಧರ ನಾಯ್ಕ ಮಾತನಾಡಿದರು.

ಡಾ. ಶಾಂತಿ ನಾಯಕ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸವಿತಾ ನಾಯ್ಕ ಸ್ವಾಗತಿಸಿದರು. ಸಂಗೀತಾ ನಾಯ್ಕ ಪ್ರಾರ್ಥಿಸಿದರು. ನಾಗರಾಜ್ ಹೆಗಡೆ,ಅಪಗಾಲ್ ವಂದಿಸಿದರು. ಪ್ರಶಾಂತ್ ಹೆಗಡೆ ನಿರೂಪಿಸಿದರು. ಬಳಿಕ ಡಾ. ಎನ್.ಆರ್. ನಾಯಕ್ ದಂಪತಿಗಳ ಕ್ಷೇತ್ರ ಕಾರ್ಯದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ವೀಕ್ಷಿಸಲಾಯಿತು.