ಸಾರಾಂಶ
-ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸಾಧಕರ ಸನ್ಮಾನ
-----ಕನ್ನಡಪಭ ವಾರ್ತೆ ಶಹಾಪುರನಮ್ಮ ನಾಡು-ನುಡಿ, ಸಂಸ್ಕೃತಿಗೆ ದೊಡ್ಡ ಪರಂಪರೆ ಇದೆ. ಅದನ್ನು ಉಳಿಸಿ-ಬೆಳೆಸಲು ಕಂಕಣಬದ್ಧರಾಗಬೇಕು. ನಾಡು-ನುಡಿಯ ಸಂರಕ್ಷಣೆ ಸಂಘ-ಸಂಸ್ಥೆಗಳ ಹೊಣೆಯಾಗಿದೆ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ ಹೇಳಿದರು.
ನಗರದ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕಲ್ಯಾಣ ಮಂಟಪದಲ್ಲಿ ಭುವನೇಶ್ವರಿ ಬುರ‍್ರಕಥಾ ಜಾನಪದ ಕಲಾವಿದರ ಸಂಘದ ವತಿಯಿಂದ ಜರುಗಿದ ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವೈವಿಧ್ಯಮಯ ಕಲೆ, ನಾಟಕ, ನೃತ್ಯ, ಕಥನಗೀತೆ, ಭಾಷೆ, ಸಂಗೀತ ಮುಂತಾದವನ್ನು ಒಳಗೊಂಡಿರುವ ಬುಡ್ಗಜಂಗಮ ಸಮುದಾಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಬುಡ್ಗಜಂಗಮ ಸಮುದಾಯದ ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರ ನೀಡಲಾಗುವುದು. ಬಡತನ ಪರಿಸ್ಥಿತಿಯಲ್ಲಿರುವ ಈ ಸಮುದಾಯ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ ಎಂದು ಹಲವು ನಿರ್ದೇಶನಗಳ ಮೂಲಕ ತಿಳಿಸಿದರು.
ಸಾಹಿತಿ ಹಾಗೂ ಪತ್ರಕರ್ತ ರಾಘವೇಂದ್ರ ಹಾರಣಗೇರಾ ಮಾತನಾಡಿ, ಬುಡ್ಗಜಂಗಮ ಜನಾಂಗಕ್ಕೆ ಸೇರಿದ ಜನರು ತಮ್ಮ ಕಲೆಯ ಮೂಲಕ ಪ್ರದರ್ಶನ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾಗಿರುವ ಬುಡ್ಗಜಂಗಮ ಸಮುದಾಯವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರತಿಯೊಂದು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಲು ಸಮುದಾಯ ಸಹಭಾಗಿತ್ವದಲ್ಲಿ ನಾಡಿನ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಂದ್ರನಾಥ ಎಸ್. ಹೊಸ್ಮನಿ ಅವರು ಅಲೆಮಾರಿ ಸಮುದಾಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ನಾರಾಯಣ ಸಗರ, ಶರಣು ಗದ್ದುಗೆ, ಪ್ರಕಾಶ ದೊರೆ, ಮಂಜುನಾಥ್ ಬಿರಾದಾರ್ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಸಾನಿಧ್ಯವನ್ನು ಸಿದ್ದರಾಮೇಶ್ವರ ಮಹಾಸ್ವಾಮಿಗಳು ವೀರಭದ್ರೇಶ್ವರ ಸಂಸ್ಥಾನ ಮಠ ನಾಗನಟಗಿ ವಹಿಸಿದ್ದರು. ಅಧ್ಯಕ್ಷತೆಯನ್ನು ವೆಂಕಟರೆಡ್ಡಿ ಪಾಟೀಲ್ ವಹಿಸಿದ್ದರು. ದೇಸಾಯಪ್ಪ ದೇಸಾಯಿ ಹಳಿಸಗರ, ಗೃಹಕ್ಷಕದಳ ಅಧಿಕಾರಿ ಮಾರ್ಥಂಡಪ್ಪ ಮುಂಡಾಸ, ರಾಘವೇಂದ್ರ ಹಾರಣಗೇರಾ, ಬಸವರಾಜ ಸಿನ್ನೂರು, ಸಾಯಿಬಣ್ಣ ಪುರ್ಲೆ, ಹನುಮಂತರಾಯಗೌಡ ರಾಖಂಗೇರಾ, ಮಾಜಿ ನಗರಸಭೆ ಅಧ್ಯಕ್ಷ ಹನುಮಂತರಾಯ, ಭೀಮರಾಯ ಕದ್ರಾಪುರ, ಶರಣು ದೋರನಹಳ್ಳಿ, ಯಮನಪ್ಪ ರೇವಲ್, ಬಸವರಾಜ, ಮರೆಪ್ಪ ವಿಭೂತಿ, ಸಂಘದ ಅಧ್ಯಕ್ಷೆ ಲಕ್ಷ್ಮಿಬಾಯಿ ರೇವಲ್, ಕಾರ್ಯದರ್ಶಿ ವಿಜಯಲಕ್ಷ್ಮಿ ವೈ. ರೇವಲ್ ಮುಂತಾದವರಿದ್ದರು.ಮಲ್ಲಯ್ಯ ಸಿ. ಹಿರೇಮಠ ಸುಗಮ ಸಂಗೀತ, ಬೂದಯ್ಯ ಜಿ. ಹಿರೇಮಠ ಸಂಗೀತ ಗಾಯನ, ನೀಲಪ್ಪ ಡಿ. ಚೌದರಿ ಜಾನಪದ ಗಾಯನ, ಸಿದ್ರಾಮಪ್ಪ ಮಾಸ್ತರ್ ವಚನ ಗಾಯನ, ಮಲ್ಲಿಕಾರ್ಜುನ್ ತಬಲವಾದಕರು, ಪ್ರಾಣೇಶ್ ಶಂಕು, ಹಾರ್ಮೋನಿಯಂ, ಆನಂದ ರೆವಲ್ ಡ್ಯಾನ್ಸ್ ಮತ್ತು ಗಾಯನ, ಅಂಜಲಿ ಭರತನಾಟ್ಯ, ಸ್ನೇಹ ಪಾಟೀಲ್ ಭಕ್ತಿ ಗೀತೆ, ಭಾಗ್ಯಲಕ್ಷ್ಮಿ ಕಲಾತಂಡದಿಂದ ನೃತ್ಯ, ಗಾಯನ ಶರಣಮ್ಮ ಕೆ. ಸಾಂಪ್ರದಾಯಿಕ ಪದಗಳ ಪ್ರಸ್ತುತ ಪಡಿಸಿದರು. ಮಲ್ಲಯ್ಯ ಸ್ವಾಮಿ ನಿರೂಪಿಸಿ, ವಂದಿಸಿದರು.
----22ವೈಡಿಆರ್4: ಶಹಾಪುರ ನಗರದ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.