ಸಂಸ್ಕಾರ, ಸಂಸ್ಕೃತಿ ಬಿತ್ತುವ ಗುರುವಿನ ಪಾತ್ರ ಬಹುಮುಖ್ಯ

| Published : Apr 17 2024, 01:19 AM IST

ಸಂಸ್ಕಾರ, ಸಂಸ್ಕೃತಿ ಬಿತ್ತುವ ಗುರುವಿನ ಪಾತ್ರ ಬಹುಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಂಧಕಾರ ಹೊಡೆದೋಡಿಸಿ ಸಂಸ್ಕಾರ ಮತ್ತು ಸಂಸ್ಕೃತಿ ಬಿತ್ತುವ ಗುರುವಿನ ಪಾತ್ರ ಬಹುಮುಖ್ಯವಾಗಿದೆ ಎಂದು ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧಿಪತಿ ಜಗದ್ಗುರು ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮನುಷ್ಯನ ಬದುಕಿಗೆ ಗುರುವಿನ ಸನ್ಮಾರ್ಗದರ್ಶನ ಅವಶ್ಯವಾಗಿದ್ದು, ಅಂಧಕಾರ ಹೊಡೆದೋಡಿಸಿ ಸಂಸ್ಕಾರ ಮತ್ತು ಸಂಸ್ಕೃತಿ ಬಿತ್ತುವ ಗುರುವಿನ ಪಾತ್ರ ಬಹುಮುಖ್ಯವಾಗಿದೆ ಎಂದು ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧಿಪತಿ ಜಗದ್ಗುರು ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸುಕ್ಷೇತ್ರ ಹುಣಸಿಹಡಗಿಲ ಗ್ರಾಮದಲ್ಲಿರುವ ದಿಗಂಬರ ಜೈನ ಮಹಾಸಭಾ ಲಕ್ನೋ ಇವರ ಸಹಯೋಗದಿಂದ ಜೀರ್ಣೋದ್ಧಾರವಾದ ಪುರಾತನ ತ್ರಿಕೂಟ ಜಿನಮಂದಿರದ 1008 ಶ್ರೀ ಶಾಂತಿನಾಥ ಭಗವಾನ ಮಂದಿರದ ಧಾಮ ಸಂಪ್ರೋಕ್ಷಣ ಹಾಗೂ ಜಿನಬಿಂಬ ಶುದ್ಧ 1008 ಶ್ರೀ ಮುನಿಸುವ್ರತನಾಥ ಭಗವಾನರ ಹಾಗೂ 1008 ಶ್ರೀ ಮಹಾವೀರ ಭಗವಾನರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಮೂರನೇ ದಿನದ ರಾಜಾಭಿಷೇಕ ಸಮಾರಂಭದ ನೇತೃತ್ವ ವಹಿಸಿ ಸದ್ಭಕ್ತಾದಿಗಳು ಭಕ್ತಿಪೂರ್ವಕವಾಗಿ ಸಮರ್ಪಿಸಿ ತುಲಾಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.

ಪ್ರಜ್ಞಾಶ್ರಮಣ ಸಾರಸತ್ವಾಚಾರ್ಯ ಪರಮಪೂಜ್ಯ ಶ್ರೀ 108 ಶ್ರೀ ದೇವನಂದಿ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಪರಮಪೂಜ್ಯ 108 ಶ್ರೀ ಸಕಲಕೀರ್ತಿ ಮುನಿಮಹಾರಾಜರ ಹಾಗೂ 105 ಪರಮಪೂಜ್ಯ ಅರ್ಕಕೀರ್ತಿ ಕ್ಷುಲ್ಲಕರು ಇವರುಗಳ ದಿವ್ಯ ಸಾನಿಧ್ಯದಲ್ಲಿ ಹುಬ್ಬಳ್ಳಿಯ ನವಗ್ರಹ ತೀರ್ಥ ಕ್ಷೇತ್ರದ ಶ್ರೀ ಪರಮಪೂಜ್ಯ ಸ್ವಸ್ತಿಶ್ರೀ ಧರ್ಮಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಪವಿತ್ರ ಸಮಾರಂಭದಲ್ಲಿ ಜೈನ ಸಮಾಜದ ಮುಖಂಡರುಗಳು ಹಾಗೂ ಹುಣಸಿಹಡಗಿಲ ಟ್ರಸ್ಟ್‍ನ ಪದಾಧಿಕಾರಿಗಳಾದ ವಿಜಯಕುಮಾರ ಕಿವಡೆ, ನೇಮಿನಾಥ ಬೆಳಕೇರಿ, ಪ್ರಕಾಶ ಜೈನ್, ವಜ್ರಕುಮಾರ ಪಾಟೀಲ, ಅರಿಹಂತ ಪಾಟೀಲ, ರಾಜಕುಮಾರ ಕಿವಡೆ, ಅಜೀತ ಕಾಸರ, ಸುರೇಶ ತಂಗಾ, ಮಹಾವೀರ ಬಪ್ಪಣಕರ್, ಅನೀಲ ಭಸ್ಮೆ, ರಾಜೇಂದ್ರ ಕುಣಚಗಿ, ಅನೀಲ ಜಂಬಗೆ, ರತನಕುಮಾರ ಹೊಸಳ್ಳೆ, ಜೀತು ಚಿಂದೆ, ಕಿರಣ ಪಂಡಿತ, ರಮೇಶ ಬೆಳಕೇರಿ ಮತ್ತು ಸಕಲ ಹುಣಸಿಹಡಗಿಲ ಗ್ರಾಮಸ್ಥರು ಹಾಗೂ ಕಲಬುರಗಿ ಜಿಲ್ಲಾ ಸಕಲ ಜೈನ ಸಮಾಜ ಬಾಂಧವರು, ಹುಣಸಿಹಡಗಿಲ ಟ್ರಸ್ಟ್‍ನ ಸಮಸ್ತರು ಪಂಚಕಲ್ಯಾಣ ಮಹೋತ್ಸವದ ಪದಾಧಿಕಾರಿಗಳು, ಸಾವಿರಾರು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.