ಸಾರಾಂಶ
ನೆಲಮಂಗಲ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವ ಹೊಣೆ ಪತ್ರಿಕೆಗಳ ಮೇಲಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಕೆಲಸದ ಒತ್ತಡಗಳ ನಡುವೆ ಆರೋಗ್ಯದ ಕಡೆ ಗಮನ ಹರಿಸಬೇಕು. ತಾಲೂಕಿನಲ್ಲಿ 3 ಪತ್ರಕರ್ತರ ಸಂಘಟನೆಗಳಿದ್ದರೂ ಒಗ್ಗೂಡಿ ಕಾರ್ಯಕ್ರಮಕ್ಕೆ ಭಾಗವಹಿಸಿರುವುದು ಹಾಗೂ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾದ್ಯಕ್ಷ ಶ್ರೀನಿವಾಸ್ ಮಾತನಾಡಿ, ಕಳೆದ 1932ರಲ್ಲಿ ಡಿವಿ ಗುಂಡಪ್ಪ ಸ್ಥಾಪನೆ ಮಾಡಿದ ಸಂಘ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ. ಅಧಿಕಾರ ಶಾಶ್ವತವಲ್ಲ, ಅಧಿಕಾರದ ಅವಧಿಯಲ್ಲಿ ಮಾಡಿರುವ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದರು.
ನೂತನ ಪದಾಧಿಕಾರಿಗಳು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಟಿ.ಕೃಷ್ಣಪ್ಪ (ಬೂದಿಹಾಲ್‍ಕಿಟ್ಟಿ), ಗೌರವಾಧ್ಯಕ್ಷರಾಗಿ ಎನ್.ಜಿ.ಗೋಪಾಲ್, ಉಪಾಧ್ಯಕ್ಷರಾಗಿ ಆರ್.ರಂಗನಾಥ್, ರುದ್ರೇಶ್, ಹೊನ್ನೇನಹಳ್ಳಿ, ಖಜಾಂಚಿಯಾಗಿ ಎನ್.ಸುಮಿತ್ರಾದೇವಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ವಿಜಯ್‍ಕುಮಾರ್ (ವೀಳ್ಯದೆಲೆ) ಕಾರ್ಯದರ್ಶಿಯಾಗಿ ಎಚ್.ಪಿ.ಮಹೇಶ್, ಎಂ.ಹರೀಶ್ ಸೇರಿದಂತೆ 13 ಸದಸ್ಯರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ನೆ.ಯೋ. ಪ್ರಾಧಿಕಾರ ಅದ್ಯಕ್ಷ ಎಂ.ನಾರಾಯಣ್‍ಗೌಡ, ನಗರಸಭೆ ನಿಕಟಪೂರ್ವ ಅದ್ಯಕ್ಷೆ ಪೂರ್ಣಿಮಾಸುಗ್ಗರಾಜು, ಸದಸ್ಯ ಎನ್.ಗಣೇಶ್, ಮಾಜಿ ನಾಮ ನಿರ್ದೇಶಿತ ಸದಸ್ಯ ಕೆ.ವಸಂತ್, ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್, ಒಕ್ಕಲಿಗರ ಸಂಘದ ಅದ್ಯಕ್ಷ ಬಿ.ಕೆ.ತಿಮ್ಮರಾಜು, ಕುವೆಂಪು ಪತ್ತಿನ ಸಹಕಾರ ಸಂಘದ ಅದ್ಯಕ್ಷ ಬಿ.ಕೆ.ನಟರಾಜು, ಮಾಜಿ ಅದ್ಯಕ್ಷ ಹೆಚ್.ಜಿ.ರಾಜು, ವಕೀಲ ಮನುಗೌಡ, ಬಿ.ಟಿ.ಮೋಹನ್‍ಕುಮಾರ್, ಇನ್ನರ್ ವೀಲ್ಹ್ ಮಾಜಿ ಅದ್ಯಕ್ಷ ಮಂಜುಳಾಸಿದ್ದರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಜಿಲ್ಲಾ ನಿರ್ದೇಶಕ ಜಿ.ಕೆ.ಸುಗ್ಗರಾಜು ಇತರರಿದ್ದರು.
ಪೋಟೋ 9 :ನೆಲಮಂಗಲದ ಪವಾಡ ಬಸವಣ್ಣ ದೇವರ ಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮವನ್ನು ಸಿದ್ದಲಿಂಗ ಸ್ವಾಮೀಜಿ, ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಹಾಗೂ ಗಣ್ಯರು ಉದ್ಘಾಟಿಸಿದರು.