ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದ ರಾಜೀವ್ ನಗರ ದ ಕರವೇ ಘಟಕವನ್ನು ವೇದಿಕೆ ಅಧ್ಯಕ್ಷ ಎಂ.ಎಸ್. ಶ್ರೀನಿವಾಸ್ ಉದ್ಘಾಟಿಸಿದರು.ಪಟ್ಟಣದ ವಾರ್ಡ್ ನಂ.೨ ರ ರಾಜೀವ್ ನಗರದಲ್ಲಿ ನೂತನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನ್ಯಭಾಷಿಕರೇ ತುಂಬುತ್ತಿರುವ ಕರ್ನಾಟಕ ರಾಜ್ಯದಲ್ಲಿ ಕನ್ನಡ ಉಳಿದಿರಬೇಕಾದರೆ ಕನ್ನಡ ಪರ ಸಂಘಟನೆಗಳ ಪಾತ್ರವೇ ಹಿರಿದು ಎಂದರು.
ನಾಮಫಲಕದಲ್ಲಿ ಕನ್ನಡ ಕಡ್ಡಾಯವರ್ಷಪೂರ್ತಿ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ಪ್ರವೃತ್ತಿ ಹೊಂದಿರುವ ಕನ್ನಡ ಪರ ಸಂಘಟನೆಗಳ ಹೋರಾಟ ರಾಜ್ಯದಲ್ಲಿ ಕನ್ನಡದ ಕಂಪು ಹರಡುವಂತೆ ಮಾಡಿದೆ. ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯದಲ್ಲಿ ಕರವೇ ಗಟ್ಟಿಯಾಗಿದ್ದು,೧೮ ಸಾವಿರ ಶಾಖೆ,೭೦ ಲಕ್ಷ ಸದಸ್ಯರನ್ನು ಹೊಂದಿದೆ. ರಾಜ್ಯಾದ್ಯಂತ ಶೇ.೬೦ ರಷ್ಟು ಕನ್ನಡ ನಾಮಫಲಕ ಆಳವಡಿಸುವಂತೆ ಮಾಡಿದ ಬೃಹತ್ ಹೋರಾಟದಿಂದ ಸರ್ಕಾರವು ಎಚ್ಚೆತ್ತು ಐಟಿಬಿಟಿ ಕಂಪನಿಗಳು ಮಾಲ್ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟುಗಳಲ್ಲಿ ಶೇ.೬೦ ರಷ್ಟು ಕಡ್ಡಾಯ ಎಂದ ಸರ್ಕಾರ ಆದೇಶ ಮಾಡಿದೆ ಎಂದರು.
ತಾಲೂಕಿನಲ್ಲೂ ಕನ್ನಡ,ಕನ್ನಡಿಗರ ದನಿಯಾಗಿ ಕೆಲಸ ಮಾಡುವುದಾಗಿ ಹೇಳಿದ ಶ್ರೀನಿವಾಸ್ ಅವರು ಸಂಘಟನೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದರು.ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷ ಲತಾಬಾಯಿ ಮಾಡಿಕ್ , ಕರವೇ ಜಿಲ್ಲಾ ಉಪಾಧ್ಯಕ್ಷ ಎನ್.ವಿ.ಮುರಳಿಧರ್, ಯುವ ಘಟಕ ಅಧ್ಯಕ್ಷ ಸಂತೋಷ್, ತಾಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ ,ತೊರ್ನಹಳ್ಳಿ ರಾಮಕೃಷ್ಣಪ್ಪ ,ಎಂ.ಸಿ. ರವಿ, ಜಬ್ಬೀವುಲ್ಲಾ, ಹುಲ್ಕೂರು ತಿಮ್ಮರಾಯಪ್ಪ, ಶಿವಾಚಾರಿ, ಆನಂದ್ ಯಾದವ್, ರಾಮಣ್ಣ, ಘಟಕದ ಅಧ್ಯಕ್ಷ ಎಂ.ಜಿ. ನಾಗೇಶ್ ,ಎಂ.ಕೆ.ರಾಜಪ್ಪ,ಅಂಬರೀಶ್ ,ಹರೀಶ್, ನಾರಾಯಣಸ್ವಾಮಿ, ವಿಜಯಕುಮಾರ್, ಪ್ರೇಮ್ ,ಮಣಿ, ಮಹೇಶ್, ಮನೋಜ್, ಅನಿಲ್ , ಶ್ರೀಕಾಂತ್, ಸುಬ್ರಮಣಿ ಇನ್ನಿತರರು ಇದ್ದರು.