ಕನ್ನಡಪರ ಸಂಘಟನೆಗಳ ತ್ಯಾಗ ದೊಡ್ಡದು, ಅವರ ಕನ್ನಡಪರ ಸಂಘಟನೆಗಳ ನಿರಂತರ ಹೋರಾಟದಿಂದಲೇ ಇಂದು ಕನ್ನಡ ಉಳಿಯಲು ಸಾಧ್ಯವಾಗಿದೆ. ಕನ್ನಡಪರ ಸಂಘಟನೆಗಳ ಎಲ್ಲಾ ಹೋರಾಟಗಳಿಗೂ ಕನ್ನಡಾಭಿಮಾನಿಗಳು ಬೆಂಬಲ ನೀಡುವ ಮೂಲಕ ಅವರನ್ನು ಬೆಳೆಸಬೇಕು .
ದಾಬಸ್‍ಪೇಟೆ: ಮಾತೃಭಾಷೆ ಉಳಿಸಿ, ಬೆಳೆಸುವಲ್ಲಿ ಹಾಗೂ ಕನ್ನಡಿಗರಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡುವ ಮೂಲಕ ನ್ಯಾಯ ಒದಗಿಸುತ್ತಿರುವ ಕರುನಾಡ ವಿಜಯಸೇನೆ ಸೇರಿದಂತೆ ಇನ್ನಿತರೆ ಕನ್ನಡಪರ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಮಾರುತಿ ಮಹಲ್ ಪಕ್ಕದ ಮೈದಾನದಲ್ಲಿ ವಿಜಯಸೇನೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಕನ್ನಡ ಹಬ್ಬ- ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕನ್ನಡ ನೆಲ, ಜಲ, ಭಾಷೆಯ ಉಳಿವಿಗೆ ಕನ್ನಡಪರ ಸಂಘಟನೆಗಳ ಪಾತ್ರ ಮಹತ್ವದ್ದು. ಅವರು ಕನ್ನಡದ ಸೈನಿಕರಾಗಿ ಕೆಲಸ ಮಾಡುತ್ತಿರುವುದರಿಂದಲೇ ಇಂದು ನಮ್ಮ ಕನ್ನಡ ಭಾಷೆ ಉಳಿಯಲು ಸಾಧ್ಯವಾಗಿದ್ದು, ಕನ್ನಡಪರ ಸಂಘಟನೆಗಳ ಜೊತೆಗಿದ್ದು, ಸಹಕಾರ ನೀಡುತ್ತೇನೆ ಎಂದರು.
ಮುಖಂಡ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ಕನ್ನಡಪರ ಸಂಘಟನೆಗಳ ತ್ಯಾಗ ದೊಡ್ಡದು, ಅವರ ಕನ್ನಡಪರ ಸಂಘಟನೆಗಳ ನಿರಂತರ ಹೋರಾಟದಿಂದಲೇ ಇಂದು ಕನ್ನಡ ಉಳಿಯಲು ಸಾಧ್ಯವಾಗಿದೆ. ಕನ್ನಡಪರ ಸಂಘಟನೆಗಳ ಎಲ್ಲಾ ಹೋರಾಟಗಳಿಗೂ ಕನ್ನಡಾಭಿಮಾನಿಗಳು ಬೆಂಬಲ ನೀಡುವ ಮೂಲಕ ಅವರನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಅಂಚೆಮನೆ ವಿನಯ್, ಜಿಲ್ಲಾಧ್ಯಕ್ಷ ಸುಚೀಂದ್ರನ್, ರಾಜ್ಯ ಸಂಚಾಲಕ ವಿಜಯ್‍ಕುಮಾರ್, ತಾಲೂಕು ಅಧ್ಯಕ್ಷ ವಸಂತಕುಮಾರ್, ಸೋಂಪುರ ಹೋಬಳಿ ಅಧ್ಯಕ್ಷ ಭರತ್, ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್, ಪದಾಧಿಕಾರಿಗಳಾದ ಮಾರುತಿ, ಚಂದನ್, ಮನುಪ್ರಸಾದ್ ಸೇರಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.