ಸಾರಾಂಶ
ಕೊಟ್ಟೂರು: ಸದಾ ಜಾತ್ಯತೀತ, ಧರ್ಮಾತೀತವಾಗಿ ಸರ್ವರನ್ನು ಏಕಮನೋಭಾವನೆಯಿಂದ ಪರಿಗಣಿಸುತ್ತಾ ಬಂದಿರುವ ವೀರಶೈವ ಧರ್ಮದ ಪಂಚಪೀಠಗಳು ನಾಡಿನ ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ನಿರಂತರವಾಗಿ ಬೆಂಬಲವಾಗಿ ನಿಂತಿರುವುದು ಮಾದರಿಯಾಗಿದೆ ಎಂದು ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.ತಾಲೂಕಿನ ಉಜ್ಜಯನಿ ಸದ್ಧರ್ಮ ಪೀಠದಲ್ಲಿ ಶನಿವಾರ ರಾತ್ರಿ ಆಯೋಜಿಸಿದ ಲಿಂ.ಜ.ಮರುಳಸಿದ್ದ ರಾಜದೇಶಿಕೇಂದ್ರ ಶಿವಾಚಾರ್ಯರ 13ನೇ ವರ್ಷದ ಸಂಸ್ಮರಣೋತ್ಸವ ಮತ್ತು ಸ್ವಾಮಿಯ ಲಕ್ಷದೀಪೋತ್ಸವದ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದರ ಜೊತೆಗೆ ಅಜ್ಞಾನವನ್ನು ಹೊಡೆದೋಡಿಸಿ ಸುಜ್ಞಾನದ ಬೆಳಕನ್ನು ಪಸರಿಸುವುದೇ ಲಕ್ಷದೀಪೋತ್ಸವದ ಸಂದೇಶ ಎಂದರು.ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಪಂಚಪೀಠಗಳಿಗೆ ಸಂಬಂಧಿಸಿದಂತೆ ನಾಲ್ಕು ಮಠಗಳು ಹೊನ್ನಾಳಿ ಕ್ಷೇತ್ರದಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಶಾಸಕ ದೇವೇಂದ್ರಪ್ಪ, ಕಲ್ಯಾಣ ಸ್ವಾಮೀಜಿ, ಪ್ರಶಾಂತ ಸಾಗರ ಶಿವಾಚಾರ್ಯ, ವರಸದೋಜಾತ, ನಂದಿಪುರ ಮಹೇಶ್ವರ ಸ್ವಾಮೀಜಿ ಮಾತನಾಡಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಜ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಐ.ದಾರುಕೇಶ್, ಕೊಟ್ಟೂರು ಪಪಂ ಮಾಜಿ ಉಪಾಧ್ಯಕ್ಷ ಸಿದ್ದಲಿಂಗನಗೌಡ ಇದ್ದರು.
ಎಂ.ಗುರುಸಿದ್ದನಗೌಡ, ಉಜ್ಜಯನಿ ಲೋಕಪ್ಪ, ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಇದ್ದರು.ಅರವಿಂದ ಬಸಾಪುರ್ ಕಾರ್ಯಕ್ರಮ ನಿರೂಪಿಸಿದರು.