ಸಾರಾಂಶ
ದಾಬಸ್‍ಪೇಟೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ದೊಡ್ಡದು, ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೇ ತಾಕೀತು ಮಾಡುತ್ತಿರುವುದು ಬೇಸರ ತರಿಸುತ್ತಿದೆ ಎಂದು ನಿವೃತ್ತ ಶಿಕ್ಷಕ ಪಂಚಾಕ್ಷರಿ ಹೇಳಿದರು.
ದಾಬಸ್‍ಪೇಟೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ದೊಡ್ಡದು, ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೇ ತಾಕೀತು ಮಾಡುತ್ತಿರುವುದು ಬೇಸರ ತರಿಸುತ್ತಿದೆ ಎಂದು ನಿವೃತ್ತ ಶಿಕ್ಷಕ ಪಂಚಾಕ್ಷರಿ ಹೇಳಿದರು.
ತ್ಯಾಮಗೊಂಡ್ಲುವಿನ ಮಾಕನಕುಪ್ಪೆ ತಿಮ್ಮೇಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ 1997-98ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುಗಳ ಸೇವೆ ಸ್ಮರಿಸುವುದು ಮತ್ತು ಅವರಿಗೆ ಗುರುವಂದನೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಇದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ನಮ್ಮ ಜೀವನದ ಅವಿಸ್ಮರಣೀಯ ದಿನವಾಗಿದೆ ಎಂದರು.ಹಿರಿಯ ವಿದ್ಯಾರ್ಥಿ ರಮೇಶ್ ಮಾತನಾಡಿ, ಪಾಠ ಹೇಳಿ, ಬದುಕಿಗೆ ಬೆಳಕಾದ ಶಾಲೆ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಜೀವನದ ಕೊನೆಕ್ಷಣದವರೆಗೂ ಅವರಿಗೆ ಋಣಿಗಳಾಗಬೇಕು ಎಂದರು.
ನಿವೃತ್ತ ಶಿಕ್ಷಕ ಸಿ.ಜಿ.ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಶ್ರೇಷ್ಠ ಮಟ್ಟದಲ್ಲಿರಬೇಕು ಎಂಬ ಕಾರಣಕ್ಕೆ ಗುರುಗಳು ದಂಡಿಸುತ್ತಾರೆ. ಬಾಲ್ಯದಲ್ಲಿ ತಿದ್ದದೇ, ತಪ್ಪಿಗೆ ಶಿಕ್ಷೆ ನೀಡದೆ ಕಲಿಸುವ ಶಿಕ್ಷಣ ನಿಜವಾದ ಶಿಕ್ಷಣವೇ ಅಲ್ಲ. ಪ್ರಸ್ತುತ ದಿನಗಳಲ್ಲಿ ಶಿಕ್ಷಕ-ಪಾಲಕರ ಸಂಬಂಧ ಉನ್ನತೀಕರಣಗೊಳ್ಳಬೇಕು ಎಂದರು.ನಿವೃತ್ತ ಶಿಕ್ಷಕರಾದ ಪಂಚಾಕ್ಷರಿ, ನಂಜುಂಡಯ್ಯ, ಹನುಮಂತರಾಯಪ್ಪ, ವೀರಭದ್ರಯ್ಯ, ಕುಮಾರಸ್ವಾಮಿ, ನಾಗವೇಣಿ, ಚನ್ನಬಸವರಾಜು ಅವರನ್ನು ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಮೇಶ್, ನಾರಾಯಣ್, ದೇವರಾಜು, ಪ್ರಕಾಶ್, ಮಂಗ ಳಗೌರಿ, ಸರೋಜ, ಸುಮಿತ್ರಾ, ರೂಪ, ಹನುಮೇಗೌಡ, ಮೂರ್ತಿ, ಹನುಮಂತರಾಜು, ಉಪಪ್ರಾಂಶುಪಾಲರಾದ ಪದ್ಮಾವತಿ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪೋಟೋ 3 :
ತ್ಯಾಮಗೊಂಡ್ಲುವಿನ ಮಾಕನಕುಪ್ಪೆ ತಿಮ್ಮೇಗೌಡ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು.