ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಅಮರೇಶ ಪಾಟೀಲ್

| Published : Sep 06 2024, 01:12 AM IST

ಸಾರಾಂಶ

ಒಂದು ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು.

ಕಾರಟಗಿಯ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಕಾರಟಗಿ

ಒಂದು ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು. ಗುರು ಇದ್ದರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಮುಖ್ಯಗುರು ಅಮರೇಶ ಪಾಟೀಲ್ ಹೇಳಿದರು.

ಇಲ್ಲಿನ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲು ಗುರು. ನಮ್ಮ ಜೀವನದಲ್ಲಿ ತಂದೆ-ತಾಯಿ ಮೊದಲ ಗುರು. ಶಾಲೆಯಲ್ಲಿ ಗುರುಗಳ ಕಲಿಸಿದ ಜ್ಞಾನ ಮಕ್ಕಳಲ್ಲಿ ಅಗಾಧ ಬದಲಾವಣೆ ತರುತ್ತದೆ. ಪ್ರತಿಯೊಂದು ಮಗುವಿಗೆ ತಾಯಿ ಹೇಗೆ ಮುಖ್ಯವಾಗುತ್ತಾಳೆ. ಹಾಗೆಯೇ ಪ್ರತಿ ಮಗುವಿನ ಜೀವನದಲ್ಲಿ ಶಿಕ್ಷಕ ಸಹ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾನೆ. ಭವಿಷ್ಯವನ್ನು ರೂಪಿಸಿ ಮಾರ್ಗದರ್ಶಕರಾಗಿ ಶಿಕ್ಷಕರು ಇರುತ್ತಾರೆ. ಗುರು ಕಲಿಸಿದ ಅಕ್ಷರ ಮಕ್ಕಳ ಜೀವನವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ. ಒಬ್ಬ ವಿದ್ಯಾರ್ಥಿ ಪ್ರಾಥಮಿಕ ಶಾಲೆಯಿಂದ ಪದವೀಧರನಾಗುವವರೆಗೂ ನೂರಾರು ಶಿಕ್ಷಕರು ಅಕ್ಷರ, ಜೀವನ ಪಾಠ ಹೇಳಿಕೊಟ್ಟಿರುತ್ತಾರೆ. ಕನಿಷ್ಠ ಹತ್ತು ಜನ ಶಿಕ್ಷಕರನ್ನಾದರೂ ಮಕ್ಕಳು ಸ್ಮರಿಸಬೇಕು ಎಂದು ಹೇಳಿದರು.

ಈ ವೇಳೆ ಮುಖ್ಯಗುರು ವೀರೇಶ್ ಮ್ಯಾಗೇರಿ ಮತ್ತು ಶಿಕ್ಷಕ ಜಗದೀಶ್ ಭಜಂತ್ರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿದೇರ್ಶಕ ಮಲ್ಲಿಕಾರ್ಜುನ ಹಿಂದಪುರ, ಮುಖ್ಯಗುರು ಮಹಾಂತೇಶ್ ಗದ್ದಿ, ಶರಣಮ್ಮ ಅಂಗಡಿ, ದೇವೇಂದ್ರಪ್ಪ, ಲಿಂಗರಾಜ, ಜಗದೀಶ್ ಹಳ್ಳೂರು, ಮಹೇಶ್, ದೇವರಾಜ, ಪಂಪಾಪತಿ, ನಾಗಭೂಷಣ, ಮಂಜುನಾಥ, ಗಿರೀಶ್, ಬಸವರಾಜ, ಗುರುಸ್ವಾಮಿ, ಪ್ರಕಾಶ್, ಮಹೆಬೂಬ್ ಕಿಲ್ಲೇದಾರ ಹಾಗೂ ಮಕ್ಕಳು ಇದ್ದರು.