ಸಮಾಜ ಸುಧಾರಣೆಯಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರ ದೊಡ್ಡದು

| Published : Feb 01 2024, 02:02 AM IST

ಸಾರಾಂಶ

ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಮಾಜ ಸುಧಾರಣೆಯಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರ ಹಿರಿದಾಗಿದ್ದು, ಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಧನೆ ಮಾಡಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಅವರು ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ನವದೆಹಲಿಯ ಸಾವಿತ್ರಿಬಾಯಿ ಫುಲೆ ರಾಷ್ಟ್ರಿಯ ಶಿಕ್ಷಕಿಯರ ಪೆಡರೇಶನ್, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ, ತಾಲೂಕು ಘಟಕ ಬೈಲಹೊಂಗಲ ಇವುಗಳ ಆಶ್ರಯದಲ್ಲಿ ಬುಧವಾರ ನಡೆದ ಮಾತೆ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ, ಶೈಕ್ಷಣಿಕ ಕಾರ್ಯಾಗಾರ ಮತ್ತು ಶಿಕ್ಷಣ ಕ್ಷೇತ್ರದ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರ ಅಭಿವೃದ್ಧಿಯತ್ತ ಸಾಗಬೇಕಾದರೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳನ್ನು ದೇಶದ ಶಿಲ್ಪಿಗಳನ್ನಾಗಿಸಲು ಪ್ರಯತ್ನಿಸಬೇಕು ಎಂದರು.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷ್ಯೆ ಡಾ.ಲತಾ ಮುಳ್ಳೂರು ಮಾತನಾಡಿ, ಶಿಕ್ಷಕರಲ್ಲಿ ಒಗ್ಗಟ್ಟು ಮೂಡಿಸುವುದರೊಂದಿಗೆ ಸಾಧಕರನ್ನು ಗುರಿತಿಸಿ ಪುರಸ್ಕಾರ ನೀಡಿ ಪ್ರೋತ್ಸಾಹಿಸುವುದಕ್ಕಾಗಿ ರಾಷ್ಟ್ರಾದ್ಯಂತ ಮಾತೆ ಸಾವಿತ್ರಿಭಾಯಿ ಫುಲೆ ಸಂಘಟಣೆಯನ್ನು ಹುಟ್ಟು ಹಾಕಲಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.

ಕರ್ನಾಟಕ ಸಾವಿತ್ರಿಬಾಯಿ ಫುಲೆಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷ್ಯೆ ಮೀನಾಕ್ಷಿ ಸುತಗಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೆಪಿಸಿಸಿ ಸದಸ್ಯ ರೋಹಿಣಿ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಪ್ರಕಾಶ ಮೆಳವಂಕಿ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಡಿ.ಗಂಗಣ್ಣವರ, ಕಸಾಪ ಜಿಲ್ಲಾಧ್ಯಕ್ಷ್ಯೆ ಮಂಗಳಾ ಮೆಟಗುಡ್ಡ, ಕದಳಿ ಮಹಿಳಾ ವೇದಿಕೆಯ ತಾಲೂಕಧ್ಯಕ್ಷ್ಯೆ ಮೀನಾಕ್ಷಿ ಕುಡಸೋಮನ್ನವರ, ಕ.ರಾ.ಸ.ನೌ.ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮನ್ನವರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಐ.ಮಿರ್ಜನ್ನವರ, ಕ.ರಾ.ಶಿ.ಸಂಘಗಳ ಪರಿಷತ್ತಿನ್ ರಾಜ್ಯ ಪ್ರ.ಕಾರ್ಯದರ್ಶಿ ಸಂಗಮೇಶ ಖನ್ನಿನಾಯ್ಕರ, ಅಹಿಂದ ನೌಕರರ ಸಂಘದ ಜಿಲ್ಲಾದ್ಯಕ್ಷ ಬಸವರಾಜ ತಮ್ಮಣ್ಣವರ, ಚಂದ್ರಶೇಖರ ಶಿಗಿಹಳ್ಳಿ, ಸಾವಿತ್ರಿಬಾಯಿ ಫುಲೆ ಸಂಘಟಣೆಯ ಜಿಲ್ಲಾಧ್ಯಕ್ಷ್ಯೆ ನಸ್ರೀನ್‌ಬಾನು ಕಾಶೀಮನವರ, ಮುಖ್ಯೋಪಾಧ್ಯಾಯರ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಎಸ್.ಫಕ್ಕೀರಸ್ವಾಮಿಮಠ, ತಾಲೂಕಾಧ್ಯಕ್ಷ ಇಸ್ಮಾಯಿಲ್ ತಿಗಡಿ, ನಾಗನೂರಿನ ಪಿಯು ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿರ್ಮಲಾ ಎಸ್. ಮುಂತಾದವರು ವೇದಿಕೆ ಮೇಲಿದ್ದರು.

ಕ.ರಾ.ಸ.ನೌ.ಸಂಘದ ಸದಸ್ಯರು, ಕ.ರಾ.ಪ್ರೌ.ಶಿ.ಸಂಘದ ಪದಾಧಿಕಾರಿಗಳು, ಕ.ರಾ.ಪ್ರಾ.ಶಾ.ಶಿ.ಸಂಘದ ಸದಸ್ಯರು, ಮುಖ್ಯೋಪಾಧ್ಯಾಯರ ಸಂಘದ ಸದಸ್ಯರು, ದೈಹಿಕ ಶಿಕ್ಷಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಶಿಕ್ಷಕಿ ಮೀನಾಕ್ಷಿ ಸುತಗಟ್ಟಿ ಸ್ವಾಗತಿಸಿದರು. ಶಿಕ್ಷಕಿ ಮುಬಸ್ರೀನ್ ಬಾಗೇವಾಡಿ, ಶಿಕ್ಷಕಿ ಪಿ.ಜಿ.ಕೆಮಲಾಪೂರೆ ನಿರೂಪಿಸಿದರು. ಕುಸುಮಾ ಗುರಿಕಾರ ವಂದಿಸಿದರು. ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಶೈಕ್ಷಣೀಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.