ಸರ್ವಜನಾಂಗದ ರೊಟ್ಟಿ ಪ್ರಸಾದವಾಗುವುದೇ ರೊಟ್ಟಿ ಜಾತ್ರೆ ವಿಶೇಷ

| Published : Feb 02 2024, 01:01 AM IST

ಸರ್ವಜನಾಂಗದ ರೊಟ್ಟಿ ಪ್ರಸಾದವಾಗುವುದೇ ರೊಟ್ಟಿ ಜಾತ್ರೆ ವಿಶೇಷ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ, ಮತ, ಧರ್ಮ, ಪಂಥ ಭೇದವಿಲ್ಲದೇ ಜಿಲ್ಲೆ ಮಾತ್ರವಲ್ಲದೇ ಸುತ್ತಲಿನ ಜಿಲ್ಲೆಗಳ ವಿವಿಧ ಗ್ರಾಮಗಳ ಸರ್ವಜನಾಂಗದವರು ರೊಟ್ಟಿ ತಯಾರಿಸಿ ಮಠಕ್ಕೆ ಕೊಡುತ್ತಾರೆ. ಅದು ಪ್ರಸಾದವಾಗಿ ಎಲ್ಲರೂ ಸೇವಿಸುವುದೇ ರೊಟ್ಟಿ ಜಾತ್ರೆ ವಿಶೇಷ ಎಂದು ಗದಗನ ಡಾ. ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.

ನರಗುಂದ: ಜಾತಿ, ಮತ, ಧರ್ಮ, ಪಂಥ ಭೇದವಿಲ್ಲದೇ ಜಿಲ್ಲೆ ಮಾತ್ರವಲ್ಲದೇ ಸುತ್ತಲಿನ ಜಿಲ್ಲೆಗಳ ವಿವಿಧ ಗ್ರಾಮಗಳ ಸರ್ವಜನಾಂಗದವರು ರೊಟ್ಟಿ ತಯಾರಿಸಿ ಮಠಕ್ಕೆ ಕೊಡುತ್ತಾರೆ. ಅದು ಪ್ರಸಾದವಾಗಿ ಎಲ್ಲರೂ ಸೇವಿಸುವುದೇ ರೊಟ್ಟಿ ಜಾತ್ರೆ ವಿಶೇಷ ಎಂದು ಗದಗನ ಡಾ. ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.

ತಾಲೂಕಿನ ಶಿರೋಳದ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ರೊಟ್ಟಿ ಪ್ರಸಾದವನ್ನು ಕೋಮು ಸೌಹಾರ್ದತೆಯಿಂದ ಒಂದೇ ಪಂಕ್ತಿಯಲ್ಲಿ ಸರ್ವಜನಾಂಗದ ಜನರು ಕುಳಿತು ಸವಿಯುತ್ತಾರೆ. ಸಹಸ್ರಾರು ಮಹಿಳೆಯರು ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸಿ ನೀಡಿದ್ದಾರೆ. ಅದಕ್ಕೆ ಕರಿಹಿಂಡಿ, ತರಹೇವಾರಿ ತರಕಾರಿ ಪಲ್ಯಗಳನ್ನು ತಯಾರಿಸಿ ಉಣಬಡಿಸುವ ಶ್ರೇಷ್ಠ ಕಾರ್ಯ ಇಲ್ಲಿ ನಡೆಯುತ್ತದೆ ಎಂದರು.

ಗದಗನ ತೋಂಟದಾರ್ಯ ಲಿಂ.ಸಿದ್ದಲಿಂಗ ಶ್ರೀಗಳು ಡಂಬಳದಲ್ಲಿ, ಶಿರೋಳದಲ್ಲಿ ರೊಟ್ಟಿ ಜಾತ್ರೆ ಆರಂಭಿಸಿದರು. ಆದರೆ ಲಿಂ.ಗುರುಬಸವ ಶ್ರೀಗಳು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿ ಈಗ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆಯಿತು. ಈಗ ನೂತನ ಪೀಠಾಧಿಪತಿ ಶಾಂತಲಿಂಗ ಶ್ರೀ ಗಳು ಇದನ್ನು ಇನ್ನಷ್ಟು ವಿಶಿಷ್ಟ ರೀತಿಯಲ್ಲಿ ಪ್ರಚುರ ಪಡಿಸಿ ಮಾದರಿ ಜಾತ್ರೆ ಮಾಡಿದ್ದಾರೆ ಎಂದು ಹೇಳಿದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಲಿಂ.ಸಿದ್ಧಲಿಂಗ ಶ್ರೀಗಳು ಆರಂಭಿಸಿದ ರೊಟ್ಟಿ ಜಾತ್ರೆ, ಲಿಂ. ಗುರುಬಸವ ಶ್ರೀಗಳು ಪ್ರಚಾರ ಪಡಿಸಿದರು ಎಂದರು.

ರಾತ್ರಿ 1 ಗಂಟೆಯವರೆಗೂ ರೊಟ್ಟಿ ಜಾತ್ರೆ ನಡೆದು ಸಾವಿರಾರು ಜನರು ಭಾಗವಹಿಸಿ ರೊಟ್ಟಿ ಸವಿದರು. ಹಿಂದಿನ ಶ್ರೀಗಳ ನೆನಪು ಮೆಲಕು ಹಾಕಿದರು‌.

ಈ ಸಂದರ್ಭದಲ್ಲಿ ಹೈದರಾಬಾದ್ ಗುರುಮಂಟಪದ ಶಿವ ಹಂಸ ರೋಡ ಶ್ರೀಗಳು, ದೇವರಶೀಗೆಹಳ್ಳಿಯ ಮಡಿವಾಳೇಶ್ವರ ಮಠದ ವೀರೇಶ್ವರ ಶ್ರೀಗಳ, ಸಿಂಧನೂರು ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯರು ಶ್ರೀಗಳು, ಮಾಜಿ ಸಚಿವ ಬಿ.ಆರ್‌. ಯಾವಗಲ್, ಪ್ರಕಾಶಗೌಡ ತಿರಕನಗೌಡ್ರ, ತೋಂಟದಾರ್ಯ ಜಾತ್ರಾ ಮಹೋತ್ಸವದ ಅಧ್ಯಕ್ಷ ಲಾಲಸಾಬ ಅರಗಂಜಿ, ಉಪಾಧ್ಯಕ್ಷ ಶರಣಪ್ಪ ಕಾಡಪ್ಪನವರ, ಕಾರ್ಯದರ್ಶಿ ವೀರಯ್ಯ ದೊಡ್ಮನಿ ಸಹಕಾರ್ಯದರ್ಶಿ ಉಮೇಶ್ ಮರಗುದ್ದಿ, ಬಿ.ಎಸ್. ಸಾಲಿಮಠ ಉಪಸ್ಥಿತರಿದ್ದರು.