ಸಾರಾಂಶ
ದಾಬಸ್‌ಪೇಟೆ: ಬ್ರಿಟೀಷರ ವಿರುದ್ಧ ಭಾರತಕ್ಕೆ ಸ್ವಾತಂತ್ರ‍್ಯ ದೊರೆಯಲು ಮನೆಗೊಬ್ಬ ಯುವಕನನ್ನು ಸೇನಾನಿಯಾಗಿ ಸಂಘಟಿಸಿ ಯುವಕರೇ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ‍್ಯ ಕೊಡಿಸುತ್ತೇನೆ ಎಂದು ಕರೆ ನೀಡಿದವರು ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಮುಖ್ಯಶಿಕ್ಷಕ ಆರ್.ಸಿದ್ದರಾಜಯ್ಯ ತಿಳಿಸಿದರು. ಶಿವಗಂಗೆ ಶ್ರೀ ಶಿವಗಂಗಾ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೇತಾಜಿ ಅವರ ದೂರದೃಷ್ಟಿ, ರಾಜಕೀಯ ಅನುಭವ ಮತ್ತು ಯುವಕರ ಬಗ್ಗೆ ಅವರು ಹೊಂದಿದ್ದ ದೃಷ್ಟಿಕೋನ ವಿಶಿಷ್ಟವಾದದ್ದು ಎಂದರು. ಶಿಕ್ಷಕರಾದ ಗಂಗಾಧರಯ್ಯ, ರುದ್ರಾರಾಧ್ಯ, ಚನ್ನಪ್ಪ, ತಮ್ಮಯ್ಯ, ರುದ್ರೇಗೌಡ, ನಾಗರಾಜು, ನವೀನ್, ಸರಳ ಉಪಸ್ಥಿತರಿದ್ದರು.ಪೋಟೋ 4 : ಶಿವಗಂಗೆ ಶ್ರೀ ಶಿವಗಂಗಾ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖ್ಯಶಿಕ್ಷಕ ಆರ್.ಸಿದ್ದರಾಜಯ್ಯ, ಶಿಕ್ಷಕರಾದ ಗಂಗಾಧರಯ್ಯ, ರುದ್ರಾರಾಧ್ಯ, ಚನ್ನಪ್ಪ, ತಮ್ಮಯ್ಯ, ರುದ್ರೇಗೌಡ, ನಾಗರಾಜು, ನವೀನ್, ಸರಳ ಉಪಸ್ಥಿತರಿದ್ದರು.