ಕನ್ನಡಪ್ರಭ ವಾರ್ತೆ ಬೈಲಹೊಂಗಲ ಇಂದು ಜಗತ್ತಿನ ಅತೀ ದೊಡ್ಡ ಸಂಘಟನೆ ಆರ್‌ಎಸ್ಎಸ್. ದೇಶ ನಮ್ಮದು ಅಂತಾ ಬದುಕಬೇಕು, ಮೊಗಲರಿಗೆ, ಬ್ರಿಟಿಷರಿಗೆ ಹಂತ ಹಂತವಾಗಿ ಭಾರತೀಯರು ಬಿಸಿ ಮುಟ್ಟಿಸಿದ್ದಾರೆ. ದೇಶ ಭಕ್ತಿ, ದೇಶದ ಘನತೆ ಸಾರಿದ 100 ವರ್ಷಗಳಿಂದ ಹಿಂದೂಗಳ ಒಗ್ಗೂಡುವಿಕೆ ಕಾರ್ಯವನ್ನು ಸಂಘ ಮಾಡಿದೆ ಎಂದು ಆರ್‌ಎಸ್‌ಎಸ್‌ನ ಬೆಳಗಾವಿ ವಲಯದ ಪ್ರಚಾರಕರಾದ ಸತೀಶ ಕುಮಾರ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಇಂದು ಜಗತ್ತಿನ ಅತೀ ದೊಡ್ಡ ಸಂಘಟನೆ ಆರ್‌ಎಸ್ಎಸ್. ದೇಶ ನಮ್ಮದು ಅಂತಾ ಬದುಕಬೇಕು, ಮೊಗಲರಿಗೆ, ಬ್ರಿಟಿಷರಿಗೆ ಹಂತ ಹಂತವಾಗಿ ಭಾರತೀಯರು ಬಿಸಿ ಮುಟ್ಟಿಸಿದ್ದಾರೆ. ದೇಶ ಭಕ್ತಿ, ದೇಶದ ಘನತೆ ಸಾರಿದ 100 ವರ್ಷಗಳಿಂದ ಹಿಂದೂಗಳ ಒಗ್ಗೂಡುವಿಕೆ ಕಾರ್ಯವನ್ನು ಸಂಘ ಮಾಡಿದೆ ಎಂದು ಆರ್‌ಎಸ್‌ಎಸ್‌ನ ಬೆಳಗಾವಿ ವಲಯದ ಪ್ರಚಾರಕರಾದ ಸತೀಶ ಕುಮಾರ ಹೇಳಿದರು.ಹಿಂದೂ ಸಮ್ಮೇಳನ ಸಂಚಾಲನ ಸಮಿತಿಯಿಂದ ನೇಸರಗಿಯಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದು ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ದೇಶದ 7000 ಗ್ರಾಮಗಳಲ್ಲಿ ಆರ್‌ಎಸ್‌ಎಸ್ ಕಾರ್ಯ ನಿರ್ವಹಿಸುತ್ತಿದೆ. ಹಿಂದೆ, ಭಾರತದ ಸಂತ ಪರಂಪರೆ ಆದರ್ಶವಾದದ್ದು. ಹಿಂದೂ ಜನರಲ್ಲಿ ಜಾಗೃತೆ ಬೆಳೆಸುವುದು, ಭಾರತದಲ್ಲಿ ತಾಯಿ ಭೂಮಿ, ಹಿಂದೂ ಭೂಮಿ, ಹಿಂದೂ ಸಮಾಜ ಎಲ್ಲರೂ ಒಗ್ಗೂಡಿ ಸಾಧು ಸಂತರ ನೇತೃತ್ವದಲ್ಲಿ ಕೆಲಸ ಆಗಬೇಕು. ಭಾರತೀಯ ಪರಂಪರೆ ಉಳಿಬೇಕು ಸನಾತನ ಪರಂಪರೆ ಉಳಿಬೇಕು. ಭಾರತೀಯ ಪರಂಪರೆಯನ್ನುಇಂದು ಎಲ್ಲರೂ ಸ್ಮರಿಸುಸ್ತಾರೆ. ಹಿಂದೂ ಧರ್ಮವನ್ನು ಒಗ್ಗೂಡಿಸಬೇಕು, ಬ್ರಿಟಿಷರು, ಮೊಘಲರು, ಶಾಹಿಗಳ ನಮ್ಮನ್ನು ತುಳಿಲಿಕ್ಕೆ ತೊಳಿಲಿಕ್ಕೆ ನೋಡಿದರು. ಆದರೂ ಇಂದಿಗೂ ಹಿಂದು ಧರ್ಮ ಗಟ್ಟಿಯಾಗಿ ನೆಲೆ ನಿಂತಿದೆ. ಅದಕ್ಕಾಗಿ ದೇಶದ ಹಿಂದುಗಳು ಒಂದಾಗಬೇಕೆಂದರು.
ವಿಜಯನಗರ ಪ್ರಾಂತ ಕಾರ್ಯದ ರಾಷ್ಟ್ರ ಸೇವಾ ಸಮಿತಿಯ ವೇದ ಕುಲಕರ್ಣಿ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಕೊಟ್ಟಂತ ಉನ್ನತ ಸ್ಥಾನವನ್ನು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ದೇಶವನ್ನೇ ತಾಯಿ ಅಂತ ಪೂಜಿಸುವ ಸಂಸ್ಕೃತಿ ನಮ್ಮದು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರರ ಸಂಭ್ರಮ ದೇಶದ ರಕ್ಷಣೆಗಾಗಿ ದೇಶದ ಅಭಿವೃದ್ಧಿಗಾಗಿ ರಾಷ್ಟ್ರ ಪ್ರೇಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿದ್ದ ಲಕ್ಷಾಂತರ ಕಾರ್ಯಕರ್ತರ ಒಂದು ಸಂಘಟನೆ ಆಗಿದೆ. ಹಿಂದೂ ಸಮ್ಮೇಳನ ಅಂದ್ರೆ ಹಿಂದೂ ಜನರ ಜಾಗೃತಿಯ ಸಲುವಾಗಿ ಈ ಸಮ್ಮೇಳನಗಳನ್ನ ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ನೇಸರಗಿ- ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಮಾತನಾಡಿದರು. ಸಾನಿಧ್ಯವನ್ನು ಕಿತ್ತೂರು ಕಲ್ಮಠ ಹಾಗೂ ದೇಶನೂರ ವಿರಕ್ತಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಸುತಗಟ್ಟಿ ಸಿದ್ದಲಿಂಗ ಮಹಾಸ್ವಾಮಿಗಳು, ಹಣಬರಹಟ್ಟಿಯ ಕೆಳದಿ ಮಠದ ಬಸವಲಿಂಗ ಶಿವಾಚಾರ್ಯರು, ನಿವೃತ್ತ ಶಿಕ್ಷಕ ಸಿ.ವಿ.ಕಟ್ಟಿಮನಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ, ವನ್ನೂರ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಸಮ್ಮೇಳನ ಸಂಚಾಲನ ಸಮಿತಿ ಅಧ್ಯಕ್ಷ ಈರಪ್ಪ ಸೋಮಣ್ಣವರ, ಶ್ರೀಕರ ಕುಲಕರ್ಣಿ, ಸಾವಿತ್ರಿ ಕೋಲಕಾರ, ಮಹಾಂತೇಶ ಕೂಲಿನವರ, ಶ್ರೀಶೈಲ ಕಮತಗಿ, ಅನೇಕ ಮುಖಂಡರು ಭಾಗವಹಿಸಿದ್ದರು.