ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬನ್ನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨೦೨೫-೨೬ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ಜರುಗಿತು.ಸಮಾರಂಭ ಉದ್ಘಾಟಿಸಿದ ಶಿಕ್ಷಣ ಸಂಯೋಜಕ ಬಾಲಕೃಷ್ಣ ಮಾತನಾಡಿ, ನಾವು ದೇವಾಲಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ವಿದ್ಯೆ ಕಲಿಯುವ ಶಾಲೆಗೂ ನೀಡಬೇಕು. ವ್ಯಕ್ತಿಯ ಮತ್ತು ದೇಶದ ಅಭಿವೃದ್ಧಿಗೆ ಶಾಲೆ ಜ್ಞಾನ ದೇಗುಲ. ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಹಲವು ಗಮನಾರ್ಹ ಸೌಲಭ್ಯಗಳಿವೆ. ಅರ್ಹತೆ ಆಧಾರಿತವಾದ ಸಮರ್ಥ ಶಿಕ್ಷಕರಿದ್ದಾರೆ. ಶಿಕ್ಷಕರು ಮತ್ತು ಸಮುದಾಯ ಸಮನ್ವಯ ಸಾಧಿಸುವ ಮೂಲಕ ಸರ್ಕಾರಿ ಶಾಲೆಗಳು ಪ್ರಗತಿಯತ್ತ ಮುನ್ನಡೆಯಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷರಾದ ಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಣ ಸಂಯೋಜಕರಾದ ನಂಜುಂಡಾಚಾರ್, ಪಾಲನೆ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ದ.ಕೋ.ಹಳ್ಳಿ, ನೇರಲೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ನೇರಲಕೆರೆ ಲೋಕೇಶ್, ಬನ್ನಹಳ್ಳಿ ಗ್ರಾಮದ ಶಿಕ್ಷಣಾಸಕ್ತರಾದ ಮಧು, ವಿಶ್ವ, ಪ್ರದೀಪ್ ಅತಿಥಿಗಳಾಗಿದ್ದರು.ಎಸ್‌ಡಿಎಂಸಿ ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಮಹೇಶ್, ರಾಜೇಶ್ , ಭಾರತಿ, ಪಲ್ಲವಿ, ಅನಿತಾ, ಶಿಲ್ಪ, ಮಕ್ಕಳ ಮನೆಯ ಶಿಕ್ಷಕಿ ನಾಗವೇಣಿ, ಸಹಾಯಕಿ ಸೌಮ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೊತ್ತತ್ತಿ ರಾಜು ಸ್ವಾಗತಿಸಿ, ನಿರೂಪಿಸಿದರು. ಹಿರಿಯ ಶಿಕ್ಷಕ ಮಂಜುನಾಥ್ ಆಶಯ ನುಡಿಗಳನ್ನಾಡಿದರು.
ಮಕ್ಕಳಿಂದ ನೃತ್ಯ, ಹಾಡು, ವಿನೋದ ಅಂಗನವಾಡಿಯ ಮಕ್ಕಳು ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಿನಿಮಾ ಹಾಗೂ ಜನಪದ ಗೀತೆಗಳಿಗೆ ನೃತ್ಯ ಮಾಡಿ ಪ್ರತಿಭೆ ಮೆರೆದರು. ಪ್ರಹಸನಗಳನ್ನು ಮಾಡಿ ತಮ್ಮ ಅಭಿನಯ ಕಲೆಯನ್ನೂ ಪ್ರದರ್ಶಿಸಿದರು. ತಮ್ಮ ಮಕ್ಕಳ ನೃತ್ಯ, ಹಾಡು, ವಿನೋದಗಳನ್ನು ಕಂಡು ಪೋಷಕರು ಹಾಗೂ ಗ್ರಾಮಸ್ಥರು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಪೋಷಕರಿಗೂ ಜ್ಞಾನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.