ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗದು: ಈರಣ್ಣ ದಡ್ಡಿ

| Published : Jun 13 2024, 12:50 AM IST

ಸಾರಾಂಶ

ಪೌರಕಾರ್ಮಿಕರು ನಾಡಿನ ಜೀವನಾಡಿ ಇದ್ದಂತೆ. ಬೆಳಗ್ಗೆ ಎದ್ದು ನಗರದ ಆರೋಗ್ಯದ ರಾಯಭಾರಿಗಳಂತೆ ಕೆಲಸ ನಿರ್ವಹಿಸುತ್ತಾರೆ ಎಂದು ಪುರಸಭೆ ಮುಖ್ಯಧಿಕಾರಿ ಈರಣ್ಣ ದಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪೌರಕಾರ್ಮಿಕರು ನಾಡಿನ ಜೀವನಾಡಿ ಇದ್ದಂತೆ. ಬೆಳಗ್ಗೆ ಎದ್ದು ನಗರದ ಆರೋಗ್ಯದ ರಾಯಭಾರಿಗಳಂತೆ ಕೆಲಸ ನಿರ್ವಹಿಸುತ್ತಾರೆ. ಪ್ರತಿ ನಿತ್ಯ ನಗರವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಉಂಟಾಗದಂತೆ ಜೀವದ ಹಂಗು ತೊರೆದು ಸೇವೆ ಮಾಡುತ್ತಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗದು ಎಂದು ಪುರಸಭೆ ಮುಖ್ಯಧಿಕಾರಿ ಈರಣ್ಣ ದಡ್ಡಿ ಹೇಳಿದರು.

ಸ್ಥಳೀಯ ಪುರಸಭೆ ಸಭಾಭವನದಲ್ಲಿ ನಡೆದ ನಿವೃತ್ತ ಪೌರ ಕಾರ್ಮಿಕರ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿ, ರೇಣುಕಾ ಕಲ್ಲೋಳಪ್ಪ, ಹಲಸಪ್ಪಗೊಳ ಅವರು 39 ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ನಮ್ಮೆಲ್ಲರಿಗೂ ಮನಸು ಭಾರವೆನಿಸುತ್ತಿದೆ. ಆದರೂ ಇದು ಎಲ್ಲ ನೌಕರರ ಜೀವನದಲ್ಲಿ ಬರುವ ಘಳಿಗೆ. ಅವರನ್ನು ಗೌರವ ಪೂರಕವಾಗಿ ಸನ್ಮಾನಿಸಿ ಹೃದಯ ಪೂರಕವಾಗಿ ಕಳಿಸಿಕೊಡುತ್ತಿದ್ದೇವೆ. ಅವರ ನಿವೃತ್ತಿ ಜೀವನ ಸುಖಮಯವಾಗಿರೆಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.

ಪುರಸಭೆ ಪೌರಕಾರ್ಮಿಕರ ನಗರ ಘಟಕದ ಅಧ್ಯಕ್ಷ ಮಾರುತಿ ದಳವಾಯಿ, ಪುರಸಭೆ ಅಧಿಕಾರಿಗಳಾದ ಎಸ್‌.ಎಂ. ಪಾಟೀಲ, ವಿ.ಜಿ. ಕುಲಕರ್ಣಿ, ಎಂ.ಎಂ. ಮುಗಳಖೋಡ, ಬಿ.ವೈ. ಮರದಿ, ಸಿ.ಎಸ್. ಮಠಪತಿ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಎಸ್.ಎಂ. ಕಲಬುರ್ಗಿ, ಎಸ್.ಎಂ. ಮುಲ್ಲಾ, ಚೆನ್ನಮ್ಮ ಪಟ್ಟಣಶೆಟ್ಟಿ, ದುರ್ಗಪ್ಪ ಹರಿಜನ, ಎಂ.ಡಿ. ಮಹಾಲಿಂಗ, ರವಿ ಹಲಸಪ್ಪಗೋಳ, ರಮೇಶ ಮಾಂಗ, ಮಹಾಲಿಂಗ ಮಾಂಗ, ಹನುಮಂತ ಮಾದರ ಸೇರಿ ಹಲವರು ಉಪಸ್ಥಿತರಿದ್ದರು.