ಸಮಾಜದಲ್ಲಿ ದಾದಿಯರ ಸೇವೆ ಅವಿಸ್ಮರಣೀಯ

| Published : Apr 29 2024, 01:33 AM IST

ಸಮಾಜದಲ್ಲಿ ದಾದಿಯರ ಸೇವೆ ಅವಿಸ್ಮರಣೀಯ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಸಮಾಜದಲ್ಲಿ ಸೇವಾ ವೃತ್ತಿಗಳು ಎಂದಿಗೂ ಶಾಶ್ವತ, ಆರೋಗ್ಯ ಸೇವೆಯ ದಾದಿಯರು ಶುಶ್ರೂಷೆ, ರೋಗಿಯ ಪಾಲಿನ ಅಮೃತ ಸಂಜೀವಿನಿ ಎಂದು ಸೌಂದರ್ಯ-ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರಮೇಶ್ ಸೌಂದರ್ಯ ಹೇಳಿದರು.

ದಾಬಸ್‌ಪೇಟೆ: ಸಮಾಜದಲ್ಲಿ ಸೇವಾ ವೃತ್ತಿಗಳು ಎಂದಿಗೂ ಶಾಶ್ವತ, ಆರೋಗ್ಯ ಸೇವೆಯ ದಾದಿಯರು (ನರ್ಸ್ಗಳ) ಶುಶ್ರೂಷೆ, ರೋಗಿಯ ಪಾಲಿನ ಅಮೃತ ಸಂಜೀವಿನಿ ಎಂದು ಸೌಂದರ್ಯ-ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರಮೇಶ್ ಸೌಂದರ್ಯ ಹೇಳಿದರು.

ಟಿ.ಬೇಗೂರು-ತ್ಯಾಮಗೊಂಡ್ಲು ರಸ್ತೆಯಲ್ಲಿರುವ ಅಂಬಿಕಾ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 26ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇರಳದ ನಾಗರಿಕರು ನರ್ಸಿಂಗ್‌ ಸೇವಾ ವೃತ್ತಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಹಲವಾರು ಆಸ್ಪತ್ರೆಗಳಲ್ಲಿ ನರ್ಸ್‌ಗಳು ಸಂಜೀವಿನಿಯಾಗಿ ಕೆಲಸ ನಿರ್ವಹಿಸುತ್ತಾರೆ. ನಮ್ಮಲ್ಲಿ ನರ್ಸಿಂಗ್ ಶಿಕ್ಷಣವನ್ನು ಗ್ರಾಮಾಂತರ ಜನತೆಗೆ ವಿಸ್ತರಿಸುವ ನಿಟ್ಟಿನಲ್ಲಿ 26 ವರ್ಷಗಳಿಂದ ಈ ಭಾಗದಲ್ಲಿ ಸೇವೆ ನೀಡುತ್ತಿದೆ. ಕೇರಳದ ಕರಾಟೆಯಲ್ಲಿ ಗಿನ್ನೀಸ್ ದಾಖಲೆ ಮಾಡಿದ ಅಭಿ ಮತ್ತು ತಂಡದ ಹಲವಾರು ಪ್ರದರ್ಶನಗಳು, ದೈಹಿಕ ಸಾಮರ್ಥ್ಯ ಮತ್ತು ಸ್ನಾಯುಗಳ ಗಟ್ಟಿಗೊಳಿಸುವಿಕೆ ತಿಳಿಸಿತು, ಕರಾಟೆ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ರಸಸಂಜೆಯನ್ನು ವಿದ್ಯಾರ್ಥಿಗಳಿಗೆ ನೀಡಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಭರತ್ ಸೌಂದರ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನರ್ಸಿಂಗ್ ಶಿಕ್ಷಣ ಕೌಶಲ್ಯಾಧಾರಿತವಾಗಿದೆ. ನಮ್ಮ ಸಂಸ್ಥೆಯಲ್ಲಿ ನೈತಿಕತೆ ತಳಹದಿ ಮೇಲೆ ನರ್ಸಿಂಗ್ ಶಿಕ್ಷಣ ನೀಡುತ್ತಿದ್ದೇವೆ, ಕೇರಳದ ಕೊಟ್ಟಾಯಂನ ಸಾಧಕರಾದ ಅಭಿ ಮತ್ತು ತಂಡ, ತೆಂಗಿನಕಾಯಿ ಹೊಡೆಯುವುದು, ಎಳನೀರು ಛಿದ್ರಗೊಳಿಸುವಿಕೆ, ಇತರ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿ ಎಂದರು.

ಈ ವೇಳೆ ಮುಖ್ಯ ನರ್ಸಿಂಗ್ ಧಿಕಾರಿ ಕ್ರಿಸ್ಟಿನೋ, ಮಣಿಪಾಲ್ ಆಸ್ಪತ್ರೆಯ ಆರೋಗ್ಯ ಶಿಕ್ಷಣ ಮುಖ್ಯಸ್ಥರಾದ ಜಿ.ಜೆ.ರಾಜನ್, ನರ್ಸಿಂಗ್ ಕಾಲೇಜಿನ ಸಿಇಒ ಜಿತೀನ್‌ ಜೋಸ್, ಪ್ರಾಂಶುಪಾಲ ಹೇಮರಾಜು, ರೀನಾ ಜೋಸೆಫ್, ನರ್ಸಿಂಗ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಹಾಜರಿದ್ದರು.ಪೋಟೋ 5 :

ಟಿ.ಬೇಗೂರು-ತ್ಯಾಮಗೊಂಡ್ಲು ರಸ್ತೆಯಲ್ಲಿರುವ ಅಂಬಿಕಾ ನರ್ಸಿಂಗ್ ಕಾಲೇಜಿನ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇರಳದ ಕರಾಟೆಯಲ್ಲಿ ಗಿನ್ನೀಸ್ ದಾಖಲೆ ಮಾಡಿದ ಅಭಿ ಅವರನ್ನು ಸಂಸ್ಥೆಯ ಸಂಸ್ಥಾಪಕ ರಮೇಶ್ ಸೌಂದರ್ಯ, ಭರತ್ ಸೌಂದರ್ಯ ಅಭಿನಂದಿಸಿದರು.