ಸಾರಾಂಶ
. ದೇಶದ ರಕ್ಷಣೆಗೆ ಅಮೂಲ್ಯ ಕಾಣಿಕೆ ನೀಡುವ ಸೈನಿಕರ ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಸೈನಿಕರು ಹಾಗೂ ರೈತರು ನಮ್ಮ ದೇಶದ ಬಲಗಳಾಗಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಮಂಜುನಾಥ ಚಲವಾದಿ ಹೇಳಿದರು.
ಲಕ್ಷ್ಮೇಶ್ವರ: ದೇಶದ ರಕ್ಷಣೆಗೆ ಅಮೂಲ್ಯ ಕಾಣಿಕೆ ನೀಡುವ ಸೈನಿಕರ ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಸೈನಿಕರು ಹಾಗೂ ರೈತರು ನಮ್ಮ ದೇಶದ ಬಲಗಳಾಗಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಮಂಜುನಾಥ ಚಲವಾದಿ ಹೇಳಿದರು.
ಶುಕ್ರವಾರ ಸಮೀಪದ ಗೊಜನೂರ ಗ್ರಾಪಂ ಎದುರು ನಡೆದ ೭೯ನೇ ಧ್ವಜಾರೋಹಣ ನೆರವೇರಿಸಿ ಸಸಿಗೆ ನೀರು ಉಣಿಸಿ ಹಾಗೂ ಗ್ರಾಮದ ದೇಶ ಸೇವೆಯಲ್ಲಿರುವ ಸೈನಿಕರನ್ನುಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಸೈನಿಕರ ಸೇವೆಗೆ ಬೆಲೆ ಕಟ್ಟಲಾಗದು. ದೇಶದ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದರಿಂದ ನಾವೆಲ್ಲ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ದೇಶದ ಕೋಟ್ಯಂತರ ಜನರ ಹಸಿವು ನಿಗಿಸುವ ಕಾಯಕ ಮಾಡುತ್ತಿರುವ ರೈತ ನಿಸ್ವಾರ್ಥ ಸೇವೆ ಸಲ್ಲಿಸಿದ್ದರಿಂದ ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗಿದೆ, ನಮ್ಮ ದೇಶದ ರಕ್ಷಣೆಗೆ ಆಪರೇಶನ್ ಸಿಂಧೂರ ಮೂಲಕ ಪಾಕಿಸ್ತಾನಿ ಸೈನಿಕರ ಸೊಕ್ಕು ಅಡಗಿಸಿದ ನಮ್ಮ ದೇಶದ ಹೆಮ್ಮೆಯ ಸೈನಿಕರು ಮಾಡಿದ ಸೇವೆ ಅಮೂಲ್ಯವಾಗಿದೆ ಎಂಬುದನ್ನು ನಾವು ಮರೆಯಬಾರದು ಎಂದು ಹೇಳಿದರು. ಈ ವೇಳೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಟ್ಟಿ ಹಾಗೂ ನಿವೃತ್ತ ಸೈನಿಕ ಬಸವರಾಜ ಗುಡ್ಡಳ್ಳಿ, ಗಿರೀಶಗೌಡ ಪಾಟೀಲ ಮಾತನಾಡಿ, ನಮ್ಮ ಗ್ರಾಮದ ಜನರ ಮುಂದೆ ನಾವು ಸನ್ಮಾನಗೊಳ್ಳುತ್ತಿರುವುದು ಅವಿಸ್ಮರಣೀಯ ಕ್ಷಣವಾಗಿದೆ. ದೇಶದ ರಕ್ಷಣೆಗೆ ನಮ್ಮ ಗ್ರಾಮದ ಪ್ರತಿ ಕುಟುಂಬವು ತಮ್ಮ ಮಕ್ಕಳನ್ನು ಕಳಿಸಿಕೊಡುವ ಕಾರ್ಯ ಮಾಡಬೇಕು. ದೇಶದ ಸೇವೆ ಮಾಡುವ ಸೌಭಾಗ್ಯ ನಮಗೆ ಸಿಕ್ಕಿದ್ದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು. ಸಭೆಯಲ್ಲಿ ನ್ಯಾಯವಾದಿ ಬಸವರಾಜ ಸಂಶಿ, ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಹಾಗೂ ಚಂದ್ರಗೌಡ ಪಾಟೀಲ ಮಾತನಾಡಿದರು.ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಮಹಾಂತಗೌಡ ಪಟೀಲ, ನೀಲವ್ವ ಪಾಟೀಲ, ನೀಲವ್ವ ಮಾದರ, ಗಂಗಾಧರ ಕರಿನಿಂಗಣ್ಣವರ, ನೀಲಪ್ಪ ಗುಡ್ಡಣ್ಣವರ, ಫಾತೀಮಾ ಮುಲ್ಲಾನವರ, ದ್ಯಾಮವ್ವ ಮೆಣಸಿನಕಾಯಿ, ನಾಗಪ್ಪ ವಡಕಣ್ಣವರ, ರಮೇಶ ದನದಮನಿ, ಚಂದ್ರುಗೌಡ ಪಾಟೀಲ, ಚಂದ್ರುಗೌಡ ದೊಡ್ಡಗೌಡರ, ಶಂಭುಲಿಂಗಪ್ಪ ಸೊರಟೂರ, ಮಾಂತಪ್ಪ ಹರಿಜನ, ಪುಟ್ಟವ್ವ ಲಮಾಣಿ, ಚಿನ್ನಕ್ಕ ಲಮಾಣಿ, ನಾಗನಗೌಡ ಪಾಟೀಲ, ಮುಖ್ಯೋಪಾಧ್ಯಾಯ ಎನ್.ಸಿ. ಹತ್ತಿಕಾಳ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಪೂಜಾರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಡುವಿನಮನಿ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಗಣ್ಯರು ಇದ್ದರು. ಈ ವೇಳೆ ಹಾಲಿ ಸೈನಿಕರನ್ನು ಹಾಗೂ ನಿವೃತ್ತ ಸೈನಿಕರನ್ನು, ತಂದೆ ತಾಯಿಗಳನ್ನು ಸನ್ಮಾನಿಸಲಾಯಿತು. ಸಭೆಯ ನಂತರ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಹಾಡುಗಳು, ಭಾಷಣ, ವೇಷಭೂಷಣ, ನೃತ್ಯ ಪ್ರದರ್ಶನ ಮೂಡಿ ಬಂದವು. ಪಿಡಿಓ ಶಿವಾನಂದ ಮಾಳವಾಡ ಕಾರ್ಯಕ್ರಮ ನಿರ್ವಹಿಸಿದರು.