ಹರಿಹರ: ಕರ್ನಾಟಕದ ಹೆಮ್ಮೆ, ವೀರನಾರಿ ಬೆಳವಡಿ ರಾಣಿ ಮಲ್ಲಮ್ಮ ಸ್ಮರಣಾರ್ಥ 2026–27ನೇ ಆಯವ್ಯಯದಲ್ಲಿ “ಬೆಳವಡಿ ರಾಣಿ ಮಲ್ಲಮ್ಮ ಪ್ರತಿಷ್ಠಾನ” ಘೋಷಣೆ ಮಾಡಿರುವುದು ನಿಜಕ್ಕೂ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಪೀಠದ ವಚನಾನಂದ ಶ್ರೀ ತಿಳಿಸಿದ್ದಾರೆ.
ಈ ಮಹತ್ವದ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅತ್ಯಂತ ಮುತುವರ್ಜಿಯಿಂದ ಶ್ರಮಿಸಿದ ಬೈಲಹೊಂಗಲದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಹೃತ್ಫೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.ಜೊತೆಗೆ ಬೆಳವಡಿಯ ಸಕಲ ಗ್ರಾಮಸ್ಥರು, ಹಿರಿಯರಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಹೃತ್ಫೂರ್ವಕ ಕೃತಜ್ಞತೆಗಳು. ಬೆಳವಡಿ ರಾಣಿ ಮಲ್ಲಮ್ಮನ ಮಹಾನ್ ಪರಾಕ್ರಮ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.
- - -- 06HRR.01: ವಚನಾನಂದ ಶ್ರೀ