ಪತ್ರಿಕೆಗಳು ಚುರಕಾದಷ್ಟೂ ಕಾನೂನಿಗೆ ಸುವ್ಯವಸ್ಥಿತ ನೆಲೆ: ಟಿ.ಬಿ.ಪ್ರಶಾಂತ ಕುಮಾರ್

| Published : Jul 27 2024, 12:57 AM IST

ಪತ್ರಿಕೆಗಳು ಚುರಕಾದಷ್ಟೂ ಕಾನೂನಿಗೆ ಸುವ್ಯವಸ್ಥಿತ ನೆಲೆ: ಟಿ.ಬಿ.ಪ್ರಶಾಂತ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾಳಕೊಪ್ಪ ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ನಡೆದ ಪತ್ರಿಕಾ ದಿನಾಚರಣೆಯ ಉಪನ್ಯಾಸದ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಸಮಾಜವನ್ನು ತಿದ್ದಿತೀಡುವ ಹಾಗೂ ಸಮಾಜವನ್ನು ಸರಿದಾರಿಗೆ ತರುವಂತಹ ಕಾರ್ಯವನ್ನು ಪತ್ರಿಕೆ ಹಾಗೂ ಶಿಕ್ಷಣ ಇಲಾಖೆ ಮಾಡುತ್ತಿವೆ. ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪತ್ರಿಕೆಯನ್ನು ನಾಲ್ಕನೇ ಆಧಾರ ಸ್ತಂಬ ಎಂದು ಕರೆಯಲಾಗುತ್ತಿದೆ ಎಂದು ನೂತನ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಟಿ.ಬಿ.ಪ್ರಶಾಂತ ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ನಡೆದ ಪತ್ರಿಕಾ ದಿನಾಚರಣೆಯ ಉಪನ್ಯಾಸದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು, ಯಾವ ದೇಶದಲ್ಲಿ ಪತ್ರಿಕೆಗಳು ಚುರುಕಾಗಿ ಕಾಯ ನಿರ್ವರ್ಹಿಸುತ್ತವೆಯೋ ಆ ದೇಶದಲ್ಲಿ ಕಾನೂನು ಸುವ್ಯವಸ್ಥಿತವಾಗಿರುತ್ತದೆ. ಯಾವ ದೇಶದಲ್ಲಿ ಪತ್ರಿಕೆ ಚುರುಕಾಗಿರುವುದಿಲ್ಲವೋ ಆದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುತ್ತದೆ ಎಂದರು.

ಹಾಗೆಯೇ ಯಾವ ದೇಶದ ಕಾನೂನು ಗಟ್ಟಿಯಾಗಿರುತ್ತದೆಯೋ ಆ ದೇಶದ ಬೆಳವಣಿಗೆ, ಅಭಿವೃದ್ಧಿ ಹೊಂದಿ ಕ್ಷೇಮವಾಗಿರುತ್ತವೆ. ಇಂದು ಸಮಾಜದಲ್ಲಿ ಪತ್ರಿಕೆ ಹಾಗೂ ಪೋಲೀಸ್ ಇಲಾಖೆ ಅವಿನಾಭಾವ ಸಂಬಂಧ ಹೊಂದಿವೆ. ನಾವಿಬ್ಬರೂ ಒಗ್ಗೂಡಿ ಕೆಲಸ ಮಾಡಿದಾಗ ಉತ್ತಮ ಸಮಾಜ ನಿಮಾರ್ಣವಾಗುತ್ತದೆ.

ಆದ್ದರಿಂದ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸೋಣ ಎಂದರು.

ಜಿಲ್ಲಾ ಪತ್ರಿಕಾ ಸಂಘದ ಉಪಾಧ್ಯಕ್ಷ ಹುಚ್ಚರಾಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನವನ್ನು ಬೆಳಸಿಕೊಳ್ಳಲು ಪತ್ರಿಕೆ ಸಹಕಾರಿ ಆಗುತ್ತದೆ. ಪಠ್ಯೇತರ ವಾಗಿ ಪತ್ರಿಕೆ ಕೊಂಡು ಓದಿರಿ. ನಿಮ್ಮ ತಂದೆ ತಾಯಿ ಹೊಲಗದ್ದೆ ಕೆಲಸ ಮಾಡಿ ನಿಮ್ಮನ್ನು ಓದಿಸುತ್ತಾರೆ. ಉತ್ತಮವಾಗಿ ಶಿಕ್ಷಣ ಪಡೆದು ಹೆಚ್ಚಿನ ಅಂಕದೊಂದಿಗೆ ಒಳ್ಳೆಯ ಕೆಲಸ ಕಾರ್ಯ ದೊರಕಿದರೆ ಅವರಿಗಿಂತ ಸಂತೋಷಪಡುವವರು ಯಾರೂ ಇರುವದಿಲ್ಲ,ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಪೋಷಕರಿಗೆ ಶಾಲೆಗೆ ಹೆಸರು ತರುವ ಕಾರ್ಯಮಾಡಿ ಎಂದು ಕಿವಿಮಾತು ಹೇಳಿದರು.

ತಾಲ್ಲೂಕ ಪತ್ರಿಕಾ ಸಂಘದ ಉಪಾಧ್ಯಕ್ಷ ನವೀನ ಕುಮಾರ್ ಮಾತನಾಡಿ, ಈ ಹಿಂದೆ ನಿಮ್ಮ ಶಾಲೆಯಲ್ಲಿ ಪತ್ರಿಕೆಯ ಬಗ್ಗೆ ತಿಳಿಸಲು ಶಾಲೆಯಲ್ಲಿ ಪತ್ರಿಕೆ ನಡೆಸ ಲಾಗುತ್ತಿತ್ತು. ವಿದ್ಯಾರ್ಥಿಗಳು ಮಾತನಾಡುವುದಿಲ್ಲ, ನೀವು ಮಾತನಾಡುವದನ್ನು ಕಲಿಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿ ಕೊಳ್ಳಬೇಕು. ನಿಮಗೆ ಏನೇ ಸಮಸ್ಯೆ ಬಂದರೂ ನಮಗೆ ಹೇಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೊರಬದ ಉಪನ್ಯಾಸಕ ಹಾಗೂ ಪತ್ರಕರ್ತ ಡಾ.ನಿಲೇಶ್ ವಿಶೇಷ ಉಪನ್ಯಾಸ ನೀಡಿದರು. ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ರಂಗರಾಜ್ ಡಿ.ಆರ್. ಮಾತನಾಡಿದರು.

ಕಾಯರ್ಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕ ಕಾರ್ಯನಿರತ ಪತ್ರಕತರ್ರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಎಸ್.ಡಿ. ಎಂ.ಸಿ. ಅಧ್ಯಕ್ಷ ಮೃತ್ಯುಂಜಯ ನಾಯಕ್, ಸಮಿತಿ ಸದಸ್ಯರಾದ ನಾಗರಾಜ್ , ಪರಮೇಶ್ವರ, ಶೇಷಗಿರಿ ಸೇರಿದಂತೆ ಹಾಜರಿದ್ದರು.ಶಿಕ್ಷಕ ನಾಗರಾಜ್ ಅವರು ಕಾರ್ಯಕ್ರಮ ನಿರೂಪಿಸಿ ಯಶಸ್ವಿ ಆಗಲು ಸಹಕರಿಸಿದರು. ಪತ್ರಕರ್ತ ಅರುಣ್‌ಕುಮಾರ್ ವಂದಿಸಿದರು.