ಸಾರಾಂಶ
ಜಗದ್ಗುರು ಕೊಟ್ಟೂರು ಶ್ರೀವಿರಕ್ತಮಠ ಬೂದಗುಂಪಾ ಶಾಖಾ ಮಠದ ಶ್ರೀ
ಕನ್ನಡಪ್ರಭ ವಾರ್ತೆ ಕಾರಟಗಿಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗೆ ಮಾತ್ರ ಕ್ರೀಡಾಕೂಟಗಳು, ಕ್ರೀಡಾ ಶಾಲೆಗಳು ಸೀಮೀತವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಅತೀ ಹೆಚ್ಚು ಪ್ರತಿಭೆಗಳಿದ್ದು, ಇಂಥ ಪ್ರತಿಭೆಗಳು ಹೊರಹೊಮ್ಮಲು ಹಳ್ಳಿಗಳಲ್ಲಿ ಕ್ರೀಡಾಕೂಟಗಳನ್ನು ನಡೆಸುವುದು ಅಗತ್ಯ ಎಂದು ಜಗದ್ಗುರು ಕೊಟ್ಟೂರು ಶ್ರೀವಿರಕ್ತಮಠ ಬೂದಗುಂಪಾ ಶಾಖಾ ಮಠದ ಸಿದ್ದೇಶ್ವರ ದೇವರು ಹೇಳಿದರು.
ಸಮೀಪದ ಬೂದುಗುಂಪಾ ಗ್ರಾಮದ ಶ್ರೀ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ತೀರ್ಪುಗಾರರು ಮಕ್ಕಳಿಗೆ ಅನ್ಯಾಯವಾಗದ ರೀತಿ ತೀರ್ಪು ನೀಡಬೇಕು. ಮುಖ್ಯವಾಗಿ ಮಕ್ಕಳು ಸೋಲು-ಗೆಲುವನ್ನು ಬದಿಗಿಟ್ಟು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸೋತ ಮಕ್ಕಳು ನಿರಾಶರಾಗುವ ಅಗತ್ಯವಿಲ್ಲ. ಗೆದ್ದ ಮಕ್ಕಳು ಬೀಗುವ ಅಗತ್ಯವೂ ಇಲ್ಲ. ಕ್ರೀಡೆ ಮುಗಿದ ಮೇಲೆ ಆ ಗುಂಗಿನಿಂದ ಹೊರಬನ್ನಿ ಎಂದರು.
ಶಾಲೆಯ ಕಾರ್ಯದರ್ಶಿ ಗುರುಸಿದ್ದಪ್ಪ ಯರಕಲ್ ಕ್ರೀಡಾಕೂಟ ಉದ್ಘಾಟಿಸಿದರು. ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜಪ್ಪ ಚಳ್ಳೂರು ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು. ಗ್ರಾಮದ ಪ್ರಮುಖರಾದ ಅಮರಗುಂಡಪ್ಪ ಕೋರಿ, ಪರಮೇಶಪ್ಪ ಕೊಂತನೂರು ಪೊ.ಪಾ., ತಿಮ್ಮಣ್ಣ ಸಿದ್ದಾಪುರ ಶಾಟ್‌ಪುಟ್ ಎಸೆಯುವ ಮೂಲಕ ಪಂದ್ಯಗಳಿಗೆ ಚಾಲನೆ ನೀಡಿದರು.ಗ್ರಾಮದ ಹಿರಿಯರಾದ ಬಸವರಾಜಪ್ಪ ಕುಲಕರ್ಣಿ, ಕರಿಸಿದ್ದನಗೌಡ ಮಾಲಿ ಪಾಟೀಲ್, ಮುತ್ತಣ್ಣ, ಸಿಆರ್‌ಪಿ ಮಂಜುನಾಥ್ ಚಿಕೇನಕೊಪ್ಪ, ಎನ್‌ಪಿಎಸ್ ಸಂಘದ ಅಧ್ಯಕ್ಷ ವೀರನಗೌಡ, ಶಂಕ್ರಮ್ಮ ಜಟಿಂಗರಾಯ ದಳವಾಯಿ, ಬಸವರಾಜ ಅವರಾದಿ, ಚಂದ್ರಶೇಖರ ಜಾಪಾಳ, ಪುನೀತ್ ಹಿರೇಮಠ, ರಾಚಯ್ಯ ಹಿರೇಮಠ, ಸಂತೋಷ್ ಯರಕಲ್ ಇದ್ದರು
ಜಿಲ್ಲಾಡಳಿತ, ಜಿಪಂ ಕೊಪ್ಪಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಾಯಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ಮತ್ತು ಶ್ರೀ ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ಶ್ರೀ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಬೂದಗುಂಪಾ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ನಡೆಯಿತು.