ಸಾರಾಂಶ
ಬ್ಯಾಡಗಿ: ಕೂಡಲೇ ರಾಜ್ಯ ಸರ್ಕಾರ ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಮೂಲಕ ರೈತರ ನೆರವಿಗೆ ಬರಬೇಕು, ಈ ಕುರಿತು ಕೇಂದ್ರ ಸರ್ಕಾರದ ಕಡೆಗೆ ಕೈತೋರುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ₹ 2400 ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಿದೆ. ಪ್ರಸಕ್ತ ವರ್ಷ ಅತೀವೃಷ್ಟಿಯಿಂದ ರೈತನ ಕೈಯಿಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಅದಾಗ್ಯೂ ಬೆಳೆದಂತಹ ಅಷ್ಟಿಷ್ಟು ಬೆಳೆ ಮಾರಾಟ ಮಾಡಲು ಹೋದರೆ ಖಾಸಗಿ ವರ್ತಕರು ಅರ್ಧ ದರಕ್ಕೆ ಕೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಲು ರಾಜ್ಯ ಸರ್ಕಾರಕ್ಕೇನೂ ನಷ್ಟ ಎಂದು ಪ್ರಶ್ನಿಸಿದರು?ಕೇಳುವುದರಲ್ಲಿ ತಪ್ಪೇನಿದೆ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗೋವಿನಜೋಳ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹ 600 ಸಹಾಯಧನ ನೀಡುವಂತೆ ರೈತರು ಕೇಳುವುದರಲ್ಲಿ ತಪ್ಪೇನಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ₹ 4 ಸಾವಿರ ನೀಡುತ್ತಿದ್ದ ಸಹಾಯಧನವನ್ನು ಪ್ರಸ್ತುತ ರಾಜ್ಯ ಸರ್ಕಾರ ನಿಲ್ಲಿಸಿದೆ. ಹೀಗಿರುವಾಗ ರೈತರು ಸಹಾಯಧನ ಕೇಳುತ್ತಿರುವುದು ಸರಿ ಹಾಗೂ ರಾಜ್ಯ ನೀಡುವುದರಲ್ಲಿ ತಪ್ಪೇನಿಲ್ಲ ಎಂದರು.ಸಮೀಕ್ಷೆ ಸರಿಯಾಗಿ ನಡೆದಿಲ್ಲ: ಬೆಳೆ ಪರಿಹಾರದ ಹಣ ರೈತರಿಗೆ ಕೊಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿದೆ. ರಾಜ್ಯದಲ್ಲಿ ಬೆಳೆಹಾನಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಹೀಗಾಗಿ ಮರು ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ತಾಲೂಕಾಧ್ಯಕ್ಷ ಎನ್. ಎಸ್. ಬಟ್ಟಲಕಟ್ಟಿ, ಪ್ರದೀಪ್ ಜಾಧವ, ಶಂಕ್ರಣ್ಣ ಮಾತನವರ, ವಿನಯ ಹಿರೇಮಠ, ಶಿವಯೋಗಿ ಶಿರೂರ, ಚಂದ್ರಣ್ಣ ಶೆಟ್ಟರ, ಸಂತೋಷ ಪಾಟೀಲ ಹಾಗೂ ಇನ್ನಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))