ಭದ್ರಾ, ವಿ.ವಿ.ಸಾಗರ ಡ್ಯಾಂಗೆ ಶರಾವತಿ ನೀರು ತರಲು ಹೋರಾಟ ಮುಖ್ಯ

| Published : Jul 21 2025, 01:30 AM IST

ಭದ್ರಾ, ವಿ.ವಿ.ಸಾಗರ ಡ್ಯಾಂಗೆ ಶರಾವತಿ ನೀರು ತರಲು ಹೋರಾಟ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ನದಿಯಿಂದ ಭದ್ರಾ ಮತ್ತು ವಾಣಿವಿಲಾಸಸಾಗರ ಜಲಾಶಯಕ್ಕೆ ನೀರು ತರಲು ದೊಡ್ಡಮಟ್ಟದಲ್ಲಿ ಹೋರಾಟ ಆರಂಭಿಸಿದರೆ ಭವಿಷ್ಯದ ಪೀಳಿಗೆಗೆ ಅನುಕೂಲವಾಗಲಿದೆ. ಹೋರಾಟಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ. ಶರಾವತಿ ನದಿ ನೀರಿಗಾಗಿ ಹೋರಾಟ ಆರಂಭಿಸಿದರೆ ಭವಿಷ್ಯದ ಪೀಳಿಗೆಗೆ ಅನುಕೂಲ ಆಗುತ್ತದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಹೇಳಿದ್ದಾರೆ.

- ವಿಶ್ವೇಶ್ವರಯ್ಯ ಜಲ ನಿಗಮ ತಜ್ಞರ ಸಮಿತಿ ಸದಸ್ಯ ಕಲ್ಲೇರುದ್ರೇಶ್

- - -

ಕನ್ನಡಪ್ರಭ ವಾರ್ತೆ ಜಗಳೂರು

ಶರಾವತಿ ನದಿಯಿಂದ ಭದ್ರಾ ಮತ್ತು ವಾಣಿವಿಲಾಸಸಾಗರ ಜಲಾಶಯಕ್ಕೆ ನೀರು ತರಲು ದೊಡ್ಡಮಟ್ಟದಲ್ಲಿ ಹೋರಾಟ ಆರಂಭಿಸಿದರೆ ಭವಿಷ್ಯದ ಪೀಳಿಗೆಗೆ ಅನುಕೂಲವಾಗಲಿದೆ. ಹೋರಾಟಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ. ಶರಾವತಿ ನದಿ ನೀರಿಗಾಗಿ ಹೋರಾಟ ಆರಂಭಿಸಿದರೆ ಭವಿಷ್ಯದ ಪೀಳಿಗೆಗೆ ಅನುಕೂಲ ಆಗುತ್ತದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವಿಭಾಜ್ಯ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ರಾಜಕೀಯ ಪಕ್ಷಗಳ ಸಂಸದರು, ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು, ವಿವಿಧ ಸಂಘಟನೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.

ಈ ಯೋಜನೆ ಜಾರಿಯಾದರೆ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆ ನೀರಿನ ತೊಂದರೆ ತಪ್ಪುತ್ತದೆ. ಶರಾವತಿ ನದಿಯು ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಅಂತರ ರಾಜ್ಯ ಸಮಸ್ಯೆ ಇರುವುದಿಲ್ಲ. ಮುಖ್ಯವಾಗಿ ಪರಿಸರ, ಅರಣ್ಯ ಇಲಾಖೆಯ ಸಮಸ್ಯೆ ಇರುತ್ತದೆ. ಪರಿಸರವಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಜಾರಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಮೊದಲು ೪೪೦/೨೨೦ ಪವರ್ ಸ್ಟೇಷನ್ ಬಗ್ಗೆ ೧೫ ವರ್ಷಗಳ ಹಿಂದೆಯೇ ಪ್ರಸ್ತಾಪಿಸಿದ್ದಾಗ ಅನೇಕರು ನಕ್ಕಿದ್ದರು. ಆದರೆ ಇದೀಗ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಬಳಿ ನಿರ್ಮಾಣವಾಗಿದೆ. ಇದರಿಂದ ಸುತ್ತಮುತ್ತಲಿನ ಜಮೀನುಗಳಿಗೆ ತುಂಬ ಬೇಡಿಕೆ ಹೆಚ್ಚಾಗಿದೆ. ೫೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಏತ ನೀರಾವರಿ ಯೋಜನೆಗಳು ಹೋರಾಟದಿಂದಲೇ ಜಾರಿಯಾಗಿವೆ ಎಂದರು.

ಈ ಸಂದರ್ಭ ಪ.ಪಂ. ಅಧ್ಯಕ್ಷ ನವೀನ್ಕುಮಾರ್, ಮುಖಂಡರಾದ ಓಬಳೇಶ್, ಗೋಡೆ ಸಿದ್ದೇಶ್, ಲಕ್ಷ್ಮಣ್, ಜಯರಾಜ್ ಸೇರಿದಂತೆ ಮತ್ತಿತರರಿದ್ದರು.

- - -

-19ಜೆ.ಜಿ.ಎಲ್.1.ಜೆಪಿಜಿ:

ವಿಶ್ವೇಶ್ವರಯ್ಯ ಜಲ ನಿಗಮ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.