ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜೆಂಬಗಿ ಕೆರೆಗೆ ನೀರು ಹರಿಸಬೇಕು ಎಂದು ರೈತರು ಕೈಗೊಂಡಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ.ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಜಂಬಗಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲೆಯ 2ನೇ ಅತೀ ದೊಡ್ಡ ಕೆರೆ ಜಂಬಗಿಯದಾಗಿದ್ದು, ಈ ವರ್ಷ ಭೀಕರ ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕೆರೆ ನೀರು ತುಂಬುವ ಯೋಜನೆಯಡಿ ತುಂಬಿಸಲು ಈಗಾಗಲೇ ಎರಡುಬಾರಿ ನೀರು ಹರಿಸಿ ಈಗ ಮೂರನೇ ಬಾರಿ ನೀರು ಹರಿಸಲಾಗುತ್ತಿದೆ. ಆದರೆ ಜಂಬಗಿ ಕೆರೆಗೆ ಒಂದು ಹನಿ ನೀರು ಹರಿಸದೇ ಕಳೆದ 10 ವರ್ಷಗಳಿಂದ ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಕೂಡಲೇ ಈ ಭಾಗದ ಕೆರೆ ತುಂಬಿಸಬೇಕು ಎಂದರು.
ಈ ಭಾಗದ ರೈತರಿಗೆ ನ್ಯಾಯ ಸಿಗಬೇಕಾದರೆ ಕೆರೆ ನೀರು ತುಂಬುವ ಯೋಜನೆಯಡಿ ಜಂಬಗಿ, ಹುಣಶ್ಯಾಳ ಮಾದಾಳ ಕೆರೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಈ ಭಾಗದ ಎಲ್ಲ ರೈತರು, ಮಹಿಳೆಯರು, ಮಕ್ಕಳು, ಜಾನುವಾರುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಿ ನೀರು ಹರಿಸುವ ವರೆಗೂ ಅಲ್ಲಿಯೇ ಸತ್ಯಾಗ್ರಹ ಮಾಡಬೇಕಾಗುತ್ತದೆ. ನಾವೂ ಜಿಲ್ಲೆಯ ಎಲ್ಲ ಸ್ವಾಮೀಜಿಯವರೊಂದಿಗೆ ಸಂಪೂರ್ಣ ಬೆಂಬಲ ನೀಡಿ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ರೈತ ಸಂಘದ ಮುಂಖಡ ಅನಮೇಶ ಜಮಖಂಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ತಾಲೂಕಾ ಉಪಾಧ್ಯಕ್ಷರಾದ ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಸದಸ್ಯರಾದ ಕಲ್ಲಪ್ಪ ಮಸೂತಿ, ರಾಜಾರಾಮಸಿಂಗ ಡೋಣೂರ, ರಾಮಸಿಂಗ ರಜಪೂತ, ಶ್ರೀಶೈಲ ಮುಡಗಿ, ನಾಗಪ್ಪ ಬೂತಿ, ಕಲ್ಲಪ್ಪ ತಳವಾರ, ವಿನೋದ ಬಡಿಗೇರ, ಭೀಮರಾಯ ಗೋರನಾಳ, ಬಸವಂತ ತೇಲಿ, ಸಂಗಮೇಶ ತೇಲಿ, ಜಯಸಿಂಗ ರಜಪೂತ, ಬಸವರಾಜ ಮಸೂತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.