ಸಾರಾಂಶ
ಈ ಸೂಪರ್ ಹುಣ್ಣಿಮೆಗಳಂದು ಬೆಳದಿಂಗಳೂ ಹೆಚ್ಚಿರುತ್ತದೆ. ಶರತ್‌ಕಾಲದ ರಾತ್ರಿಗಳಲ್ಲಿ ಸಾಧಾರಣವಾಗಿ ಆಕಾಶದಲ್ಲಿಯೂ ತಿಳಿಬಿಳಿ ತೇಲುವ ಮೋಡಗಳ ಮಧ್ಯೆ ಚಂದನೇ ಕಾಣಿಸಿಕೊಳ್ಳುವ ಚಂದ್ರಮನ ಬೆಳದಿಂಗಳು ಇನ್ನೂ ಚೆಂದ.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರತಿವರ್ಷ ಶರತ್‌ಕಾಲದ ಹುಣ್ಣಿಮೆಯಂದು ಆಕಾಶದಲ್ಲಿ ಸೂಪರ್ ಮೂನ್ ಅಂದರೆ ಚಂದ್ರ ಎಂದಿಗಿಂತ ದೊಡ್ಡವನಾಗಿ ಕಾಣಿಸಿಕೊಳ್ಳುತ್ತಾನೆ. ಈ ವರ್ಷ 3 ಹುಣ್ಣಿಮೆಗಳಂದು ಮೂನ್ ಸೂಪರ್ ಆಗಿ ಕಾಣಿಸಿಕೊಳ್ಳುತ್ತಿದ್ದಾನೆ. ಅ.7, ನ.5 ಹಾಗೂ ಡಿ.4ರ ಹುಣ್ಣಿಮೆಯಂದು ಸೂಪರ್ ಮೂನ್ ಕಾಣಿಸಿಕೊಳ್ಳಲಿದೆ.ಭೂಮಿ ಹಾಗೂ ಚಂದ್ರರ ನಡುವೆ ಸರಾಸರಿ 3.84 ಲಕ್ಷ ಕಿ.ಮೀ. ಅಂತರವಿದೆ. ಈ ಅಂತರ ಶರತ್‌ಕಾಲದ ಹುಣ್ಣಿಮೆಗಳಂದು ಸರಾಸರಿ 3.61 ಲಕ್ಷ ಕಿ.ಮೀ.ನಷ್ಟು ಕಡಿಮೆಯಾಗುತ್ತದೆ ಅಂದರೆ ಚಂದ್ರ ಸುಮಾರು 23 ಸಾವಿರ ಕಿ.ಮೀ.ನಷ್ಟು ಭೂಮಿಗೆ ಸಮೀಪ ಬಂದು ಭೂಮಿಯಲ್ಲಿರುವ ನಮಗೆ ಸುಮಾರು 18 ಅಂಶಗಳಷ್ಟು ದೊಡ್ಡದಾಗಿ ಕಾಣಿಸುತ್ತಾನೆ.ಈ ಸೂಪರ್ ಹುಣ್ಣಿಮೆಗಳಂತಹ ಬೆಳದಿಂಗಳೂ ಹೆಚ್ಚಿರುತ್ತದೆ. ಶರತ್‌ಕಾಲದ ರಾತ್ರಿಗಳಲ್ಲಿ ಸಾಧಾರಣವಾಗಿ ಆಕಾಶದಲ್ಲಿಯೂ ತಿಳಿಬಿಳಿ ತೇಲುವ ಮೋಡಗಳ ಮಧ್ಯೆ ಚಂದನೇ ಕಾಣಿಸಿಕೊಳ್ಳುವ ಚಂದ್ರಮನ ಬೆಳದಿಂಗಳು ಇನ್ನೂ ಚೆಂದ.ಅದರಲ್ಲೂ ಈಗ ಬಂದಿರುವ ಶರತ್‌ಕಾಲದಲ್ಲಿ ಇನ್ನೂ ಮಳೆ ಬರುತ್ತಿದೆ. ಆದ್ದರಿಂದ ಸೂಪರ್ ಚಂದ್ರನ ಸುತ್ತ ಹ್ಯಾಲೋ ಅಂದರೇ ಬಿಳಿ ಹಳದಿ ವರ್ತುಲ ಕೂಡ ಕಾಣ ಸಿಗಬಹುದು. ಪ್ರಕೃತಿಯ ವೈಭವವನ್ನು ಆರಾಧಿಸಿ, ಆಸ್ವಾದಿಸಿ ಎಂದು ಉಡುಪಿಯ ಖ್ಯಾತ ಖಗೋಳತಜ್ಞ ಡಾ. ಎ.ಪಿ. ಭಟ್ ತಿಳಿಸಿದ್ದಾರೆ.