ಸರ್ಕಾರಿ ಶಾಲಾ ಕಾಲೇಜುಗಳ ಉಳಿವು ನಮ್ಮೆಲ್ಲರ ಹೊಣೆ

| Published : Aug 04 2025, 11:45 PM IST

ಸಾರಾಂಶ

ಸರ್ಕಾರಿ ಶಾಲೆ ಕಾಲೇಜುಗಳ ಉಳಿವು ಪ್ರತಿಯೊಬ್ಬರ ಹೊಣೆಯಾಗಿದೆ. ಕೇವಲ ಖಾಸಗಿ ಶಾಲೆಗಳ ಹೆಸರಿಗೆ ಮಾರುಹೋಗಿ ಸರ್ಕಾರಿ ಶಾಲಾಕಾಲೇಜುಗಳನ್ನು ಕಡೆಗಣಿಸುತ್ತಿದ್ದು ಇದು ನಿಲ್ಲಬೇಕು ಅರಕಲಗೂಡು ಕ್ಷೇತ್ರದ ಶಾಸಕರಾದ ಎ ಮಂಜು ತಿಳಿಸಿದರು. ನಮ್ಮ ತಾಲೂಕಿನ ಸಾರ್ವಜನಿಕರು, ಪೋಷಕರು ಮತ್ತು ತಾಲೂಕಿನ ಸರ್ಕಾರಿ ವಿದ್ಯಾಲಯ, ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳನ್ನು ಸೇರಿಸಿ ಸರ್ಕಾರಿ ಶಾಲೆ ಕಾಲೇಜು ಉಳಿಸಬೇಕು. ಸಕಾರಿ ಶಾಲೆಗಳ ಉಳಿವು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಸರ್ಕಾರಿ ಶಾಲೆ ಕಾಲೇಜುಗಳ ಉಳಿವು ಪ್ರತಿಯೊಬ್ಬರ ಹೊಣೆಯಾಗಿದೆ. ಕೇವಲ ಖಾಸಗಿ ಶಾಲೆಗಳ ಹೆಸರಿಗೆ ಮಾರುಹೋಗಿ ಸರ್ಕಾರಿ ಶಾಲಾಕಾಲೇಜುಗಳನ್ನು ಕಡೆಗಣಿಸುತ್ತಿದ್ದು ಇದು ನಿಲ್ಲಬೇಕು ಅರಕಲಗೂಡು ಕ್ಷೇತ್ರದ ಶಾಸಕರಾದ ಎ ಮಂಜು ತಿಳಿಸಿದರು.

ಅವರು ಬಸವಾಪಟ್ಟಣ ಗ್ರಾಮದ ಶ್ರೀ ತೋಂಟದಾರ್ಯ ಕ್ಷೇಮಾಭಿವೃದ್ಧಿ ಸಂಘದಲ್ಲಿ ನಡೆದ ಮುನೇಶ್ವರಸ್ವಾಮಿ ಪೂಜಾ ಕೈಂಕರ್ಯ ಮತ್ತು ವೀರಶೈವ ಲಿಂಗಾಯಿತ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ೨೦೨೪-೨೫ ನೇ ಸಾಲಿನಲ್ಲಿ ಶೇ. ೮೦ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮುಂಚೆ ಬಸವಾಪಟ್ಟಣ ಮತ್ತು ಸುತ್ತಮುತ್ತಲ ಮುಖಂಡರ ಜೊತೆ ಮಾತನಾಡಿದರು.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಡಿಮೆ ವೆಚ್ಚದಲ್ಲಿ ಗುಣಾತ್ಮಾಕ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಾ ಬಂದಿದ್ದು, ಗುಣಾತ್ಮಕ ಶಿಕ್ಷಕರು -ಉಪಾನ್ಯಸಕರ ಆಯ್ಕೆ ಗುಣತ್ಮಾಕ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲಗಳನ್ನು ಕಲ್ಪಿಸಲಾಗಿದೆ. ನಮ್ಮ ತಾಲೂಕಿನ ಸಾರ್ವಜನಿಕರು, ಪೋಷಕರು ಮತ್ತು ತಾಲೂಕಿನ ಸರ್ಕಾರಿ ವಿದ್ಯಾಲಯ, ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳನ್ನು ಸೇರಿಸಿ ಸರ್ಕಾರಿ ಶಾಲೆ ಕಾಲೇಜು ಉಳಿಸಬೇಕು. ಸಕಾರಿ ಶಾಲೆಗಳ ಉಳಿವು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ಇದೇ ವೇಳೆ ಶ್ರೀ ತೋಂಟಾದಾರ್ಯ ಕ್ಷೇಮಾಬಿವೃದ್ಧಿ ಟ್ರಸ್ಟ್ ಅಧ್ಯಕ್ಷ ಟಿ ಸಿ ಅಂಬರೀಶ್, ಬಸವಾಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷರಾದ ಮಹೇಂದ್ರ ಕುಮಾರ್ ಹಾಗೂ ವೀರಶೈವ ಸಮಾಜದ ಮಖಂಡರು ಹಾಜರಿದ್ದರು.