ಪಠ್ಯದಲ್ಲಿ ಆರೋಗ್ಯದ ಮಾಹಿತಿ ಇರಲಿ

| Published : Jan 24 2025, 12:46 AM IST

ಸಾರಾಂಶ

ಶಿಕ್ಷಣದ ಪಾಠ್ಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಮಾಹಿತಿ ನೀಡುವಂತಾಗಬೇಕು, ಪ್ರಕೃತಿ ಆರೋಗ್ಯ ಚೆನ್ನಾಗಿದ್ದರೆ, ಮನುಷ್ಯನ ಆರೋಗ್ಯ ಕೂಡ ಉತ್ತಮವಾಗಿರಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಶಿಕ್ಷಣದ ಪಾಠ್ಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಮಾಹಿತಿ ನೀಡುವಂತಾಗಬೇಕು, ಪ್ರಕೃತಿ ಆರೋಗ್ಯ ಚೆನ್ನಾಗಿದ್ದರೆ, ಮನುಷ್ಯನ ಆರೋಗ್ಯ ಕೂಡ ಉತ್ತಮವಾಗಿರಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಹೇಳಿದರು.ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿರುವ 22ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ವೇದಿಕೆಯಲ್ಲಿ ಗುರುವಾರ ಆರೋಗ್ಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರ ಹಾಗೂ ಆರೋಗ್ಯವಂತ ಮಕ್ಕಳ ಆಯ್ಕೆ ಮತ್ತು ಆರೋಗ್ಯಕರ ಜೀವನಶೈಲಿ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಯಲು ಸೀಮೆಗೆ ನೀರು ಹರಿಸಬೇಕೆಂದು, ನೀರಿಗಾಗಿ ಹೋರಾಟ ಮಾಡುತ್ತಾ, ಸಮುದಾಯಕ್ಕೆ ಅನ್ಯಾಯವಾದಾಗ ಸಿಡಿದೆದ್ದು ನಿಷ್ಟೂರವಾಗಿ ಸತ್ಯವನ್ನೇ ಪ್ರತಿಪಾದಿಸುವ ನಂಜಾವಧೂತ ಶ್ರೀಗಳ ಜನಪರ ಕಾಳಜಿ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು. ಶ್ರೀ ಡಾ. ನಂಜಾವಧೂತ ಸ್ವಾಮೀಜಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ನಿರ್ಮಾಣ ಮಾಡಿ ವಿಶ್ವಕ್ಕೆ ಕೆಂಪೇಗೌಡರ ಆದರ್ಶವನ್ನು ಸಾರಬೇಕೆಂಬ ದೃಷ್ಟಿಯಿಂದ ಹೆಚ್ಚು ಸಹಕಾರ ನೀಡಿದ್ದು ಮಾಜಿ ಉಪಮುಖ್ಯಮಂತ್ರಿ ಡಾ ಅಶ್ವತ್ ನಾರಾಯಣ್ ರವರು ಸೇವೆ ಸಮುದಾಯ ಎಂದು ಮರೆಯಲು ಸಾಧ್ಯವಿಲ್ಲ ಎಂದರು.ಮಾಜಿ ಶಾಸಕ ಡಾ. ಸಿ.ಎಂ.ರಾಜೇಶ್ ಗೌಡ ಮಾತನಾಡಿ ಭಾಗಕ್ಕೆ ನೀರು ತರಲೇಬೇಕು ಎಂಬ ದೂರ ದೃಷ್ಟಿ ಆಲೋಚನೆಯೊಂದಿಗೆ ನೀರಾವರಿ ಹಕ್ಕೋತ್ತಾಯ ದಿನ ಆಚರಣೆ ಮಾಡಿ ಶ್ರೀಗಳು ಹೋರಾಟ ಮಾಡಿದ್ದು, ಮದಲೂರು ಕೆರೆಗೆ ಹೇಮಾವತಿ ನೀರು ಹರಿಯಲು ಪ್ರೇರಣೆಯಾಯಿತು. ಇದರಿಂದ ಕಳ್ಳಂಬೆಳ್ಳ, ಮದಲೂರು, ಶಿರಾ ಕೆರೆಗಳು ಭರ್ತಿ ಆಗುವುದರ ಜೊತೆಗೆ 16 ಕೆರೆಗಳು ಭರ್ತಿಯಾಗಿವೆ. ಇದಲ್ಲದೆ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕೂಡ ಅನುಷ್ಠಾನಗೊಂಡಿದ್ದು, ಶಿರಾ ಸಮೃದ್ಧಿಯಾಗುವ ದಿನಗಳು ದೂರವಿಲ್ಲ ಎಂದರು.ಕಾರ್ಯಕ್ರಮದಲ್ಲಿ ಅಂಜಿನಾಮೂರ್ತಿ, ಡಾ. ಡಿ.ಎಂ. ಗೌಡ, ನಾದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ನಾಜಿಯ ಹರ್ಮಿನ್, ತಾಲೂಕು ಪಂಚಾಯತಿಯ ಕನಕಪ್ಪ, ಪಿಡಿಒ ಲಕ್ಷ್ಮೀಬಾಯಿ, ವೆಂಕಟೇಶಮೂರ್ತಿ, ತಿಪ್ಪೇಸ್ವಾಮಿ, ಕದಿರೆಹಳ್ಳಿ ಮೂರ್ತಿ, ರಾಜಶೇಖರ್, ಸಿದ್ದನಹಳ್ಳಿ ಗಿರೀಶ್, ರಮೇಶ್, ಲಿಖಿತ್, ರಂಗನಾಥ್ ಇತರರಿದ್ದರು.