ಸಾರಾಂಶ
ರಾಮನಗರ: ಬರಡು ಭೂಮಿಯನ್ನು ಜಾನಪದ ಕಾಶಿಯಾಗಿ ಮಾಡಿ ರಾಮನಗರವನ್ನು ಪ್ರಸಿದ್ಧಗೊಳಿಸಿದ ಕೀರ್ತಿ ಎಚ್.ಎಲ್.ನಾಗೇಗೌಡರಿಗೆ ಸಲ್ಲುತ್ತದೆ ಎಂದು ಸ್ನೇಹಕೂಟ ಟ್ರಸ್ಟ್ ಅಧ್ಯಕ್ಷ ಎಚ್.ಪಿ.ನಂಜೇಗೌಡ ತಿಳಿಸಿದರು.
ರಾಮನಗರ: ಬರಡು ಭೂಮಿಯನ್ನು ಜಾನಪದ ಕಾಶಿಯಾಗಿ ಮಾಡಿ ರಾಮನಗರವನ್ನು ಪ್ರಸಿದ್ಧಗೊಳಿಸಿದ ಕೀರ್ತಿ ಎಚ್.ಎಲ್.ನಾಗೇಗೌಡರಿಗೆ ಸಲ್ಲುತ್ತದೆ ಎಂದು ಸ್ನೇಹಕೂಟ ಟ್ರಸ್ಟ್ ಅಧ್ಯಕ್ಷ ಎಚ್.ಪಿ.ನಂಜೇಗೌಡ ತಿಳಿಸಿದರು.
ಜಾನಪದ ಲೋಕದಲ್ಲಿ ನಡೆದ ಲೋಕ ಸಿರಿ -90 ತಿಂಗಳ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಪುಣ್ಯಭೂಮಿ ವಿವಿಧ ಜನಪದ ಪ್ರಾಕಾರಗಳ ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ಈ ಜನಪದ ಕಾಶಿಗೆ ಸರ್ಕಾರ ಹೆಚ್ಚು ಅನುದಾನ ಕಲ್ಪಿಸುವ ಅಗತ್ಯವಿದೆ. ಜೊತೆಗೆ ಹೆಚ್ಚು ಪ್ರವಾಸಿಗರು ಜನಪದ ಲೋಕದತ್ತ ಆಗಮಿಸುವಂತಹ ಎಲ್ಲ ಆಯಾಮಗಳ ಹೊಸ ಚಿಂತನೆಗಳತ್ತ ಜಾನಪದ ಪರಿಷತ್ತಿನ ಅಧ್ಯಕ್ಷರು ಮತ್ತು ಟ್ರಸ್ಟಿಗಳು ಚಿಂತನೆ ನಡೆಸಲಿ ಎಂದರು.ಸಾಹಿತಿ ವಿಜಯ್ ರಾಂಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಗಲು ವೇಷ ಕಲಾವಿದರು ರಂಗಭೂಮಿ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರು. ಗ್ರಾಮೀಣ ಭಾಗದಲ್ಲಿ ಪೌರಾಣಿಕ ಪಾತ್ರಗಳ ವೇಷಗಳನ್ನು ಧರಿಸಿ ಗ್ರಾಮೀಣರ ಮನಗೆದ್ದ ಕಲಾವಿದರು ಇವರು. ಹಗಲು ವೇಷ ಕಲೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಎಲ್ಲಿ ಹಗಲುವೇಷ ಕಲೆ ಮರೆಯಾಗುವುದೋ ಎಂಬ ಆತಂಕದಲ್ಲಿ ಅವರು ಹಗಲು ವೇಷ ಕಲೆಯನ್ನು ಉಳಿಸಿ ಬೆಳೆಸುತ್ತಾ ಮಹಾಭಾರತ, ರಾಮಾಯಣ ನಾಟಕಗಳ ಪಾತ್ರಗಳನ್ನು ವರ್ಷವಿಡೀ ಪಸರಿಸುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.
ಸಂಕಷ್ಟದಲ್ಲಿರುವ ಇಂತಹ ಕಲಾವಿದರಿಗೆ ಇಡೀ ಸಮಾಜ ಅವರ ಕಲೆಗೆ ಗೌರವ ಕೊಟ್ಟು ಪ್ರೋತ್ಸಾಹ ನೀಡಬೇಕಿದೆ. ಈ ನಿಟ್ಟಿನಲ್ಲಿ ಜಾನಪದ ಲೋಕ ವಿವಿಧ ಜನಪದ ಪ್ರಕಾರಗಳ ಕಲಾವಿದರನ್ನು ಹುಡುಕಿ ತಿಂಗಳ ಅತಿಥಿಯಾಗಿ ಕರೆಸಿ ಅವರ ಕಲೆಗೆ ಪ್ರೋತ್ಸಾಹ ನೀಡುವ ನಾಗೇಗೌಡರ ಕನಸ್ಸು ಸಾರ್ಥಕಗೊಳಿಸುವ ಕೆಲಸ ನಡೆಯುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಲೋಕಸಿರಿ-90ರ ಗೌರವ ಅತಿಥಿ ಹಗಲುವೇಷ ಕಲಾವಿದ ಅಶ್ವರಾಮಣ್ಣ ಅವರಿಗೆ ಜಾನಪದ ಪರಿಷತ್ತು ವತಿಯಿಂದ ೫ ಸಾವಿರ ನಗದು, ಪ್ರಶಸ್ತಿಪತ್ರ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.
ಮಂಡ್ಯ ಜಾನಪದ ಪರಿಷತ್ತಿನ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಜಾನಪದ ಲೋಕದ. ಆಡಳಿತಾಧಿಕಾರಿ ಸರಸವಾಣಿ, ಕ್ಯುರೇಟರ್ ರವಿಕುಮಾರ್ ಸೇರಿದಂತೆ ಕಲಾವಿದರು ಇತರರಿದ್ದರು.ಪೊಟೋ೧೦ಸಿಪಿಟಿ೭:
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕಸಿರಿ-90ರ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಹಗಲುವೇಷ ಕಲಾವಿದ ಅಶ್ವರಾಮಣ್ಣ ಅವರನ್ನು ಗೌರವಿಸಲಾಯಿತು.