ಸಾರಾಂಶ
ರೈತನೊಬ್ಬನ ಬೆಳವಣಿಗೆ ಸಹಿಸದ ಕಿಡಿಗೇಡಿ ಕೀಚಕರು ಆ.6ರಂದು ರಾತ್ರಿ 300 ಅಡಕೆ ಮರಗಳನ್ನು ಕತ್ತರಿಸಿರುವ ಘಟನೆ ತಾಲೂಕಿನ ಸೊಕ್ಕೆ ಗ್ರಾಮದ ಬಳಿಯ ಕಾಟೇನಹಳ್ಳಿ ನಡೆದಿದೆ.
ಜಗಳೂರು: ರೈತನೊಬ್ಬನ ಬೆಳವಣಿಗೆ ಸಹಿಸದ ಕಿಡಿಗೇಡಿ ಕೀಚಕರು ಆ.6ರಂದು ರಾತ್ರಿ 300 ಅಡಕೆ ಮರಗಳನ್ನು ಕತ್ತರಿಸಿರುವ ಘಟನೆ ತಾಲೂಕಿನ ಸೊಕ್ಕೆ ಗ್ರಾಮದ ಬಳಿಯ ಕಾಟೇನಹಳ್ಳಿ ನಡೆದಿದೆ.
ರೈತರಾದ ಕೆ.ಎನ್.ಅರ್ಚನಾ ಅವರಿಗೆ ಸೇರಿದ 15 ಎಕರೆ ಅಡಕೆ ತೋಟದಲ್ಲಿ ಒಂದೇ ರಾತ್ರೋ ರಾತ್ರಿ ನುಗ್ಗಿದ ಖದೀಮರು ಕೊಡಲಿಯಿಂದ ಹೊಂಬಾಳೆ ಬಿಡಲು ಆರಂಭಿಸಿದ್ದ ನಾಲ್ಕು ವರ್ಷದ 300 ಅಡಕೆ ಮರಗಳನ್ನು ಕತ್ತರಿಸಿದ್ದಾರೆ ಎಂದು ಅರ್ಚನಾ ಅವರ ತಂದೆ ನಾಗರಾಜ್ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಇನ್‍ಸ್ಪೆಕ್ಟರ್ ಸಿದ್ರಾಮಯ್ಯ ಮತ್ತು ಪಿಎಸ್‍ಐ ಗಾದಿಲಿಂಗಪ್ಪ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಡಿತಲೆ ಆಗಿರುವುದು ಸ್ಪಷ್ಟವಾಗಿದೆ ಎಂದರು.ಕಾಟೇನಹಳ್ಳಿ ಸರ್ವೆ ನಂ-10/2, 10/3, 10/4, ರಲ್ಲಿ ಒಟ್ಟು 15 ಎಕರೆ ಜಮೀನನ್ನು ಖರೀದಿಸಿದ್ದ ಅರ್ಚನಾ ಅಡಿಕೆ ಸಸಿಗಳನ್ನು ನೆಟ್ಟಿದ್ದು 04 ವರ್ಷದ ಅಡಿಕೆ ಇನ್ನೇನು ಫಲ ಬಿಡಲು ಆರಂಭಿಸಿದ್ದವು. ಅವುಗಳ ಜವಾಬ್ದಾರಿಯನ್ನು ತಂದೆ ನಾಗರಾಜ್ ನೋಡಿಕೊಳ್ಳುತ್ತಿದ್ದಾರೆ ಎಂದರು.
ಆ.7ರಂದು ರೈತ ನಾಗರಾಜ್ ಜಮೀನಿನಲ್ಲಿ ಘಟನೆ ನಡೆದಿದೆ. ಇದರಿಂದ ಆತನಿಗೆ 2.ಲಕ್ಷ ರು. ನಷ್ಟವಾಗಿದೆ. ಬುಧವಾರ ರಾತ್ರಿ 9 ಗಂಟೆಯಿಂದ 10 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.