ಸಾರಾಂಶ
ಇದೇ ವೇಳೆ ಪ್ರಭುದೇವ್ ಅವರು ನೆರೆದಿದ್ದ ಸಂಬಂಧಿಕರು ಹಾಗೂ ಬಾಲ್ಯದ ಸ್ನೇಹಿತರೊಂದಿಗೆ ಸಾಮಾನ್ಯ ವ್ಯಕ್ತಿಯಂತೆ ಕುಳಿತು ಮಾತನಾಡಿದರು.
ಕನ್ನಡಪ್ರಭ ವಾರ್ತೆ ದೂರ
ಮೈಸೂರು ತಾಲೂಕು ದೂರ ಗ್ರಾಮದಲ್ಲಿ ಮಂಗಳವಾರ ನಿಧನರಾಗಿದ್ದ ಪುಟ್ಟಮ್ಮಣಿ ಅವರ ಅಂತ್ಯಸಂಸ್ಕಾರದಲ್ಲಿ ನಟ ಪ್ರಭುದೇವ್, ಅವರ ತಾಯಿ ಮಹದೇವಮ್ಮ, ತಂದೆ ಮೂಗೂರು ಸುಂದರಂ, ಸಹೋದರರಾದ ರಾಜು ಹಾಗೂ ನಾಗೇಂದ್ರ ಪ್ರಸಾದ್ ಅವರು ಪಾಲ್ಗೊಂಡಿದ್ದರು.ಇದೇ ವೇಳೆ ಪ್ರಭುದೇವ್ ಅವರು ನೆರೆದಿದ್ದ ಸಂಬಂಧಿಕರು ಹಾಗೂ ಬಾಲ್ಯದ ಸ್ನೇಹಿತರೊಂದಿಗೆ ಸಾಮಾನ್ಯ ವ್ಯಕ್ತಿಯಂತೆ ಕುಳಿತು ಮಾತನಾಡಿದರು.
ನಂತರ ಅವರ ಅಜ್ಜಿಯ ಶವಕ್ಕೆ ಪ್ರಭುದೇವ್ ಹಾಗೂ ಅವರ ಸಹೋದರರು ಹೆಗಲು ಕೊಟ್ಟು ಸಾರ್ವಜನಿಕರೊಂದಿಗೆ ಸ್ವಲ್ಪ ದೂರ ಸಾಗಿದರು.ಇದಕ್ಕೂ ಮೊದಲು ಪ್ರಭುದೇವ್ ಹಾಗೂ ನಾಗೇಂದ್ರ ಪ್ರಸಾದ್ ಅವರು ಚೆನ್ನೈನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಭಿಮಾನಿಗಳು ಸೆಲ್ಫಿಗಾಗಿ ಮುತ್ತಿಕೊಂಡರು. ಅಜ್ಜಿಯ ಸಾವಿನ ನೋವಿನಲ್ಲಿಯೂ ಪ್ರಭುದೇವ್ ಅವರು ಅಭಿಮಾನಿಗಳ ಸೆಲ್ಫಿಗೆ ಫೋಜ್ ನೀಡಿದರು. ಆದರೆ ಮಾಧ್ಯಮದವರ ಬಳಿ ಮಾತನಾಡಲು ನಿರಾಕರಿಸಿದರು.