ಸಾರಾಂಶ
ಡಾಬಾದಲ್ಲಿ ಊಟ ಮಾಡುವಾಗ ಜೋರಾಗಿ ಮಾತನಾಡುತ್ತಿದ್ದರು ಎನ್ನುವ ಕಾರಣಕ್ಕೆ ಮದ್ಯ ಸೇವಿಸಿದ್ದ ಪುಂಡರು ಪ್ರವಾಸಿಗರ ಮಿನಿ ಬಸ್ಸಿನ ಮೇಲೆ ಕಲ್ಲು ತೂರಿ ಗಾಜು ಒಡೆದ ಘಟನೆ ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಭಾನುವಾರ ರಾತ್ರಿ ನಡೆದಿದೆ.
ಹಾಸನ : ಡಾಬಾದಲ್ಲಿ ಊಟ ಮಾಡುವಾಗ ಜೋರಾಗಿ ಮಾತನಾಡುತ್ತಿದ್ದರು ಎನ್ನುವ ಕಾರಣಕ್ಕೆ ಮದ್ಯ ಸೇವಿಸಿದ್ದ ಪುಂಡರು ಪ್ರವಾಸಿಗರ ಮಿನಿ ಬಸ್ಸಿನ ಮೇಲೆ ಕಲ್ಲು ತೂರಿ ಗಾಜು ಒಡೆದ ಘಟನೆ ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಭಾನುವಾರ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ಕುದುರೆಮುಖಕ್ಕೆ ಕಾರು ಮತ್ತು ಮಿನಿ ಬಸ್‌ನಲ್ಲಿ ಪ್ರವಾಸ ಹೊರಟಿದ್ದ ಕುಟುಂಬಗಳು ಕೆಂಚಟ್ಟಳ್ಳಿ ಬಳಿಯ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಮಹಿಳೆಯರು ಡಾಬಾದಲ್ಲಿ ಊಟ ಮಾಡುವಾಗ ಜೋರಾಗಿ ಮಾತನಾಡುತ್ತಿದ್ದರು ಎನ್ನುವ ಕಾರಣಕ್ಕೆ ಇದೇ ಡಾಬಾದಲ್ಲಿ ಮದ್ಯ ಸೇವಿಸಿ ಊಟ ಮಾಡುತ್ತಿದ್ದ ನಾಲ್ವರು ಅಪರಿಚಿತ ಯುವಕರು ಜೋರಾಗಿ ಮಾತನಾಡಬೇಡಿ ಎಂದು ಧಮ್ಕಿ ಹಾಕಿದ್ದಾರೆ.
ಈ ವೇಳೆ ಟ್ರಿಪ್ ಹೊರಟಿದ್ದ ಕುಟುಂಬಗಳು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಯುವಕರು ಡಾಬಾದಿಂದ ಹೊರಗೆ ಬಂದು ಮಿನಿ ಬಸ್ ಮೇಲೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಇದರಿಂದ ಮಿನಿಬಸ್ ಮುಂಭಾಗದ ಗಾಜು ಪುಡಿಪುಡಿಯಾಗಿದೆ.
ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.