ಮರ ಉರುಳಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

| Published : Dec 29 2024, 01:16 AM IST

ಸಾರಾಂಶ

ರಾಜ್ಯ ಹೆದ್ದಾರಿಯಲ್ಲಿ ಬೃಹತ್‌ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸೋಮವಾರಪೇಟೆ ಮಡಿಕೇರಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸೋಮವಾರಪೇಟೆ ಮಡಿಕೇರಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.

ಸೋಮವಾರಪೇಟೆ ಸಮೀಪ ಕಾಜೂರು ಜಂಕ್ಷನ್ ಬಳಿ ಅರಣ್ಯ ಇಲಾಖೆ ವಸತಿ ಗೃಹದ ಎದುರು ಶನಿವಾರ ಹಗಲು 9.30ರ ವೇಳೆಗೆ ಬೃಹತ್ ಅರಳಿ ಮರ ರಸ್ತೆಗೆ ಉರುಳಿ ಬಿದ್ದಿದೆ. ಇದೇ ಸಂದರ್ಭ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಕೂದಲೆಳೆ ಅಂತರದಿಂದ ಪಾರಾಗಿದೆ. ಈ ಸಂದರ್ಭ ರಾಜ್ಯ ಹೆದ್ದಾರಿಯಲ್ಲಿ ಬಹುತೇಕ ವಾಹನಗಳು ನಿಲುಗಡೆಗೊಂಡವು. ತಕ್ಷಣವೇ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಪಿ.ಎಂ.ಉಲ್ಲಾಸ್ ಮತ್ತು ಸಿಬ್ಬಂದಿ ಹಾಗೂ ಗ್ರಾಮದ ಯುವಕರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

------------------------------

ನಿವೃತ್ತ ಎಎಸ್‌ಐನಿಂದ ಸಹೋದರನ ಮಗನ ಮೇಲೆ ಹಲ್ಲೆಸೋಮವಾರಪೇಟೆ: ಸಮೀಪದ ಯಡವಾರೆ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನ ಮಗನ ಮೇಲೆ ನಿವೃತ್ತ ಎಎಸ್‌ಐ ಓರ್ವರು ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.ಯಡವಾರೆ ಗ್ರಾಮದ ನಿವಾಸಿ ಚೆರಿಯಮನೆ ಲವ ಕುಮಾರ್ ಎಂಬವರ ಮೇಲೆ ಸಂಬಂಧಿಕರೇ ಆಗಿರುವ ನಿವೃತ್ತ ಎಎಸ್‌ಐ ತಮ್ಮಯ್ಯ ಎಂಬವರು ಕತ್ತಿಯಿಂದ ಹಲ್ಲೆ ನಡೆಸಿದ್ದು, ಗಾಯಾಳು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದಾರೆ.

ಹಲ್ಲೆಯಿಂದಾಗಿ ಲವಕುಮಾರ್ ಅವರ ಕಾಲಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿ ತಮ್ಮಯ್ಯ ಅವರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ತನಿಖೆ ಮುಂದುವರೆಸಿದ್ದಾರೆ.-------------