ಬಿಜೆಪಿಯ ನಿಜಬಣ್ಣ ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಸಲ್ಲಿಸಿದ ವರದಿಯಲ್ಲಿ ಬಯಲು-ಶಾಸಕ ಮಾನೆ

| Published : Mar 23 2024, 01:07 AM IST

ಬಿಜೆಪಿಯ ನಿಜಬಣ್ಣ ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಸಲ್ಲಿಸಿದ ವರದಿಯಲ್ಲಿ ಬಯಲು-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊರೋನಾ ವ್ಯಾಕ್ಸಿನ್ ಕಂಪನಿ ಕೋವಿಶೀಲ್ಡ್ ಬಿಜೆಪಿಗೆ ಬರೋಬ್ಬರಿ ೫೦೦ ಕೋಟಿ ರು. ದೇಣಿಗೆ ಕೊಟ್ಟಿದೆ ಎನ್ನುವುದನ್ನು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಸ್ವತಃ ವರದಿ ಸಲ್ಲಿಸಿದೆ. ಇದು ಲಂಚದ ಹಣ ಅಲ್ಲ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಎದೆತಟ್ಟಿ ಹೇಳಿ ಬಿಡಲಿ ಎಂದು ಶಾಸಕ ಶ್ರೀನಿವಾಸ ಮಾನೆ ಸವಾಲು ಹಾಕಿದರು.

ಹಾನಗಲ್ಲ: ಹೋದಲ್ಲೆಲ್ಲ ಇವರು ''''ನ ಖಾವುಂಗಾ, ನ ಖಾನೆ ದುಂಗಾ'''' ಎಂದು ಹೇಳುತ್ತಾರೆ. ಕೊರೋನಾ ವ್ಯಾಕ್ಸಿನ್ ಕಂಪನಿ ಕೋವಿಶೀಲ್ಡ್ ಬಿಜೆಪಿಗೆ ಬರೋಬ್ಬರಿ ₹ ೫೦೦ ಕೋಟಿ ದೇಣಿಗೆ ಕೊಟ್ಟಿದೆ ಎನ್ನುವುದನ್ನು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಇದು ಲಂಚದ ಹಣ ಅಲ್ಲ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಎದೆತಟ್ಟಿ ಹೇಳಿ ಬಿಡಲಿ ಎಂದು ಶಾಸಕ ಶ್ರೀನಿವಾಸ ಮಾನೆ ಸವಾಲು ಹಾಕಿದರು.

ತಾಲೂಕಿನ ನೀರಲಗಿ ಮ ಆಡೂರು ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಮಾರನಬೀಡ ಹಾಗೂ ಮಾಸನಕಟ್ಟಿ ಗ್ರಾಪಂ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅವರು ಹೇಳಿದ್ದು ''''ನ ಖಾವುಂಗಾ, ನ ಖಾನೆ ದುಂಗಾ ಅಲ್ಲ, ಮೈ ಖಾವುಂಗಾ ಆಪ್ ಕೋ ಖಾನೆ ನಹಿ ದುಂಗಾ'''' ಎಂದು ಇದ್ದಿರಬಹುದು. ನಾವೇ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಬಿಜೆಪಿಯ ನಿಜಬಣ್ಣ ಎಸ್‌ಬಿಐ ವರದಿಯಲ್ಲಿ ಬಯಲಾಗಿದೆ. ಭ್ರಷ್ಟಾಚಾರದ ಇವರ ಅಸಲಿ ಮುಖದ ದರ್ಶನವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಪ್ರತಿ ವಿಷಯಗಳಲ್ಲಿಯೂ ಸಹ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಇದೆ. ಆದರೆ ಬಿಜೆಪಿ ಸಂಸದರು ಮಾತ್ರ ಅನ್ಯಾಯ ಪ್ರಶ್ನಿಸಲೇ ಇಲ್ಲ. ಹಾಗಾಗಿ ನಮಗೆ ನ್ಯಾಯಸಮ್ಮತವಾಗಿ ದೊರಕಬೇಕಿದ್ದ ಅನುದಾನವೂ ಸಿಗುತ್ತಿಲ್ಲ. ರಾಜ್ಯದಲ್ಲಿ ಬರಗಾಲ ಘೋಷಿಸಿ ಆರು ತಿಂಗಳು ಗತಿಸಿದರೂ ಕೂಡ ಕೇಂದ್ರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ನಯಾ ಪೈಸೆಯೂ ಪರಿಹಾರ ನೀಡಿಲ್ಲ. ರಾಜ್ಯದ ರೈತರ ಹಿತ ಕಾಯುತ್ತಿಲ್ಲ. ಇಂಥ ಬಿಜೆಪಿಗೆ ಬುದ್ಧಿ ಕಲಿಸಿ ಎಂದು ಮನವಿ ಮಾಡಿದ ಅವರು ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವೆ. ಅವಕಾಶ ನೀಡಿ ಎಂದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಪುಟ್ಟಪ್ಪ ನರೇಗಲ್, ಮಹಬಳೇಶ್ವರ ಚಿಕ್ಕಮಠ, ಚಂದ್ರು ಕಲ್ಲವಡ್ಡರ, ಚಂದ್ರಶೇಖರ ದೇವಗಿರಿ, ಬಸವರಾಜ ಹೊಸಮನಿ, ಅಶೋಕ ಹೆಳವರ, ಜಾಫರಸಾಬ ನದಾಫ್, ಪುಟ್ಟು ಹೊಸಮನಿ, ಬಸನಗೌಡ ಪಾಟೀಲ, ಬಸಪ್ಪ ವಡ್ಡರ, ನಾವಿದ್ ಹರವಿ, ಬಸವರಾಜ ಕೇಮಾಜಿ, ಮಂಜುನಾಥ ಲಕ್ಮಾಪುರ ಇದ್ದರು.