ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ವರ್ಗದ ಮುಸ್ಲಿಂ ಸಮುದಾಯದ ಇಬ್ಬರು ಪ್ರಭಾವಿ ನಾಯಕರ ಸ್ಥಾನಮಾನ ಆಧಾರ ರಹಿತವಾದ ಆರೋಪಗಳ ಮೇಲೆ ವಜಾಗೊಳಿಸಿರುವುದು ಅಘಾತಕಾರಿ ಸಂಗತಿ. ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯರ ಮೇಲೆ ಇರಿಸಿದ್ದ ನಂಬಿಕೆ ಮತ್ತು ವಿಶ್ವಾಸ ಹುಸಿಗೊಳಿಸಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ. ಮುಬಾರಕ್ ಬೇಸರ ವ್ಯಕ್ತಪಡಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬೀದರ್‌ನಿಂದ ಕೋಲಾರದವರೆಗೆ ತಮ್ಮ ವೈಯುಕ್ತಿಕ ಕೆಲಸ ಬದಿಗೊತ್ತಿ ಪಕ್ಷಕ್ಕೆ ಆದ್ಯತೆ ನೀಡಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರನ್ನು ಸಂಘಟಿಸಿರುವ ನಸೀರ್ ಅಹ್ಮದ್ ಹಾಗೂ ಜಮೀರ್ ಅಹ್ಮದ್ ಮುಸ್ಲಿಂ ಸಮುದಾಯದ ಶೇ. ೯೦ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡಿಸಿದ್ದರು. ಕಳೆದ ೨೦೨೩ರ ವಿಧಾನ ಸಭೆಯ ಚುನಾವಣೆಯಲ್ಲಿ ೧೩೪ ಸ್ಥಾನಗಳು ಬರಲು ಕಾರಣರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿ ಅಹಿಂದ ನಾಯಕ ಸಿದ್ದರಾಮಯ್ಯರನ್ನು ಸಿಎಂಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು ಎಂದರು.ಮುಸ್ಲಿಂ ಸಮುದಾಯದಯ ಅಹಿಂದ ವರ್ಗದ ನಾಯಕ ಸಿದ್ದರಾಮಯ್ಯರ ಮೇಲೆ ಅಪಾರ ವಿಶ್ವಾಸ, ನಂಬಿಕೆ ಹೊಂದಿದ್ದರು. ಸಿದ್ದರಾಮಯ್ಯ ಸಿಎಂ ಆದರೆ ಅಹಿಂದ ವರ್ಗಗಳಿಗೆ ರಕ್ಷಕರಾಗಿರುತ್ತಾರೆ. ಸಾಮಾಜಿಕ ನ್ಯಾಯ ಸಿಗುತ್ತದೆ. ರಾಜ್ಯದಲ್ಲಿ ಶಾಂತಿ ನೆಮ್ಮದಿಯಿಂದ ಎಲ್ಲರೂ ಸೌಹಾರ್ದತೆಯಿಂದ ಬಾಳ್ವೆ ನಡೆಸಲು ಸಾಧ್ಯ ಎಂಬ ವಿಶ್ವಾಸ ಹೊಂದಿದ್ದರು ಎಂದು ಹೇಳಿದರು. ಚುನಾವಣೆಯ ನಂತರದಲ್ಲಿ ಸಮಾಜದಲ್ಲಿ ಸಿಎಂ ಸಿದ್ದರಾಮಯ್ಯರ ಮೇಲೆ ಇಟ್ಟಿದ ನಂಬಿಕೆ, ವಿಶ್ವಾಸಕ್ಕೆ ಘಾಸಿಯಾಗಿದೆ. ದಾವಣಗೆರೆಯ ಉಪಚುನಾವಣೆಯಲ್ಲಿ ನಸೀರ್ ಜಮೀರ್‌ರನ್ನು ತೆಗೆದಿರುವುದನ್ನು ಕಾಂಗ್ರೆಸ್ ಪಕ್ಷದ ನಾಯಕರು ಪ್ರಶ್ನಿಸದೆ ಮೌನವಹಿಸಿರುವುದು ಸಮ್ಮತಿಸಿದಂತಾಗುದಂತೆ, ತಮ್ಮನ್ನು ಗೆಲ್ಲಿಸಿದವರಿಗೆ ಕನಿಷ್ಠ ಕೃತಜ್ಞಾನತೆಯು ಇಲ್ಲವಾಗಿದೆ. ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ನಸೀರ್ ಅಹ್ಮದ್ ಹಗಲು ರಾತ್ರಿ ಎನ್ನದೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ೬ ರಲ್ಲಿ ೪ ಸ್ಥಾನಗಳು ಬರಲು ನಸೀರ್ ಶ್ರಮವಿದೆ ಎಂಬುವುದನ್ನು ಮರೆಯಬಾರದು ಎಂದು ಹೇಳಿದರು.

ನಸೀರ್ ಅಹ್ಮದ್‌ರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿರುವುದಕ್ಕೆ ಮುಸ್ಲಿಂ ಸಮುದಾಯಕ್ಕೆ ನಷ್ಕಕ್ಕಿಂತ ಹೆಚ್ಚಾಗಿ ನಷ್ಟ ಆಗುವುದು ಸಿಎಂ ಸಿದ್ದರಾಮಯ್ಯರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇದರ ಜೊತೆಗೆ ವಿಪಕ್ಷಗಳಿಗೆ ಲಾಭವಾಗಲಿದೆ ಎಂಬುವುದು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಧಿವೇಶನಗಳಲ್ಲಿ ಮುಸ್ಲಿಂ ಸಮದಾಯಕ್ಕೆ ಹಾಗೂ ಅಹಿಂದ ವರ್ಗದವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಪ್ರಶ್ನೆ ಮಾಡುವಂತ ಎದೆಗಾರಿಕೆ ಇದ್ದದ್ದು ನಸೀರ್ ಅಹ್ಮದ್ ಮತ್ತು ಜಮೀರ್ ಅಹ್ಮದ್‌ರಿಗೆ ಇತ್ತು. ಆದರೆ ಈಗ ನಮ್ಮ ಸಮುದಾಯದವರ ಧ್ವನಿ ಅಡಗಿಸಲು ಇತರರು ಮಾಡಿರುವಂತ ಷಡ್ಯಂತ್ರವಾಗಿದೆ, ಟಿಪ್ಪು ಕಾಲದಲ್ಲಿದ್ದ ಮೀರ್ ಸಾಧಕರು ಕೆಲವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂಬುವುದು ಅರ್ಥ ಮಾಡಿಕೊಳ್ಳಬೇಕೆಂದರು.