ಕೇಬಲ್ ಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

| Published : Jul 06 2024, 12:56 AM IST

ಸಾರಾಂಶ

ದಾಬಸ್‌ಪೇಟೆ: ಹೊನ್ನುಡಿಕೆ ಹೋಬಳಿಯ ಮಸ್ಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಮೋಟಾರುಗಳಿಗೆ ಅಳವಡಿಸಿದ್ದ ಕೇಬಲ್‌ ಕದ್ದು ಮಾರಾಟ ಮಾಡುತ್ತಿದ್ದ ಕಳ್ಳರ ಗುಂಪನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಐಸಾಮಿ ಪಾಳ್ಯದಲ್ಲಿ ನಡೆದಿದೆ.

ದಾಬಸ್‌ಪೇಟೆ: ಹೊನ್ನುಡಿಕೆ ಹೋಬಳಿಯ ಮಸ್ಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಮೋಟಾರುಗಳಿಗೆ ಅಳವಡಿಸಿದ್ದ ಕೇಬಲ್‌ ಕದ್ದು ಮಾರಾಟ ಮಾಡುತ್ತಿದ್ದ ಕಳ್ಳರ ಗುಂಪನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಐಸಾಮಿ ಪಾಳ್ಯದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಗುಳೂರು ಮೂಲದ ಉದಯ್ ಕುಮಾರ್ ಬಂಧಿತ. ಜಯಂತ್, ಪ್ರಕಾಶ್ ಸೇರಿದಂತೆ ಐವರು ತಪ್ಪಿಸಿಕೊಂಡಿದ್ದಾರೆ. ಏಳು ಜನ ಕೇಬಲ್‌ ಕಳ್ಳರ ತಂಡ, ಕದ್ದಿರುವ ಕೇಬಲ್‌ಗಳನ್ನು ಐಸಾಮಿಪಾಳ್ಯದ ಸಮೀಪವಿರುವ ಗಣೇಶ ಸ್ಟೋನ್ ಕ್ರಷರ್ ಬಳಿಯ ಬಂಡೆಯೊಂದರ ಸಮೀಪ ಸುಡಲು ಸಂಚು ರೂಪಿಸಿದ್ದರು. ಇದನ್ನು ಗಮನಿಸಿ ಅನುಮಾನಗೊಂಡ ಗ್ರಾಮದ ಕೆಲ ಯುವಕರು ಅವರನ್ನು ಹಿಂಬಾಲಿಸಿದರು. ಬಂಡೆ ಬಳಿ ಕಲ್ಲಿನಿಂದ ಕೇಬಲ್‌ಗಳನ್ನು ತುಂಡು ಮಾಡುತ್ತಿವರನ್ನು ಹಿಡಿದರು. ಈ ವೇಳೆ ಐವರು ಪರಾರಿಯಾಗಿದ್ದು, ಉದಯ್ ಕುಮಾರ್ ಸಿಕ್ಕಿದ್ದಾನೆ. ಆತನನ್ನು ಸ್ಥಳೀಯರು ಹೊನ್ನುಡುಕೆ ಪೊಲೀಸರಿಗೆ ಒಪ್ಪಿಸಿದರು. ಈತನಿಂದ 2 ಲಕ್ಷ ಮೌಲ್ಯದ ಕೇಬಲ್ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.