ನಾನು ಯಾರಿಗೂ ಮೋಸ, ವಂಚನೆ ಮಾಡಿಲ್ಲ

| Published : Jul 06 2024, 12:55 AM IST

ಸಾರಾಂಶ

ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಲಾದ ಏಳನೇ ಬಾರಿ ಆಯ್ಕೆಯಾದ ಸಂಸದರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಡಚಣ

ಸತತ 48 ವರ್ಷಗಳ ಕಾಲ ರಾಜಕಾರಣದಲ್ಲಿದ್ದು, ನಾನು ಒಬ್ಬರಿಗೂ ಮೋಸ, ವಂಚನೆ, ದ್ವೇಷ ಮಾಡಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಲಾದ ಏಳನೇ ಬಾರಿ ಆಯ್ಕೆಯಾದ ಸಂಸದರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇಂಡಿ ಮತ್ತು ಚಡಚಣ ನನ್ನ ಹೃದಯವಿದ್ದಂತೆ. ಸತತ 48 ವರ್ಷಗಳ ಕಾಲ ನನ್ನನ್ನು ತಾವೆಲ್ಲರೂ ರಾಜಕೀಯದಲ್ಲಿ ಬೆಳೆಯಲು ತಮ್ಮ ಅಮೂಲ್ಯ ಮತಗಳನ್ನು ನೀಡಿರುವ ತಮೆಗೆಲ್ಲ ತುಂಬು ಹೃದಯದ ಧನ್ಯವಾದಗಳು. ನಾನೂ ನಿಮಗೆ ಚಿರರುಣಿಯಾಗಿರುವೆ. ನನ್ನ ರಾಜಕೀಯ ಗುರುಗಳಾದ ಜೆ.ಎಚ್ ಪಟೇಲ ಹಾಗೂ ರಾಮಕೃಷ್ಣ ಹೆಗಡೆ ಅವರು ನನ್ನ ಬೆನ್ನು ಹಿಂದೆ ಇರುವವರೆಗೆ ಹಾಗೂ ನನ್ನನ್ನು ಪ್ರೀತಿಸುವ ಜನರಿರುವವರೆಗೂ ನಾನು ಯಾವತ್ತೂ ಅಂಜುವುದಿಲ್ಲ ಎಂದರು.

ಈ ವೇಳೆ ಬಿಜೆಪಿ ಮುಖಂಡ ಸಂಜೀವ ಐಹೊಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಸದಸ್ಯ ಭೀಮುಸಾಹುಕಾರ ಬಿರಾದಾರ, ಮಂಡಲ ಅಧ್ಯಕ್ಷ ಕಾಂತೂಗೌಡ ಪಾಟೀಲ, ತಾಪಂ ಸದಸ್ಯ ರಾಜೂ ಝಳಕಿ, ಮಾಜಿ ಮಂಡಲ ಅಧ್ಯಕ್ಷ ರಾಮ ಅವಟಿ, ಮುಖಂಡರಾದ ಚಿದಾನಂದ ಚಲವಾದಿ, ಡೊಳ್ಳಿ ಸಾಹುಕಾರ, ಶಿವಾನಂದ ಮಕಣಾಪೂರ, ರಮೇಶ ಜಿತ್ತಿ, ಸಿದ್ದು ಬಗಲಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.