ಸಮಾಜಕ್ಕೆ ದೀನದಲಿತರಿಗೆ ನೆರವು ನೀಡಿದ ಪುಣ್ಯ ಕಾಪಾಡುತ್ತದೆ: ಪರುಶುರಾಮಪ್ಪ

| Published : Sep 09 2025, 01:00 AM IST

ಸಮಾಜಕ್ಕೆ ದೀನದಲಿತರಿಗೆ ನೆರವು ನೀಡಿದ ಪುಣ್ಯ ಕಾಪಾಡುತ್ತದೆ: ಪರುಶುರಾಮಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯ ಪಡೆದು ಸಮಾಜದ ದೀನದಲಿತರಿಗೆ ನೆರವು ನೀಡಿ ಆ ಪುಣ್ಯ ನಿಮ್ಮನ್ನು ಕಾಪಾಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧ.ಗ್ರಾ.ಯೋ.ಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯ ಪಡೆದು ಸಮಾಜದ ದೀನದಲಿತರಿಗೆ ನೆರವು ನೀಡಿ ಆ ಪುಣ್ಯ ನಿಮ್ಮನ್ನು ಕಾಪಾಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಹೇಳಿದ್ದಾರೆ.ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯೋಜನೆ ಕಚೇರಿಯಲ್ಲಿ ನಡೆದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಫಲ ಬಯಸದೆ ಸಮಾಜ ಕಟ್ಟುವ ಕೆಲಸವನ್ನು ಯೋಜನೆ ನಿರ್ವಹಿಸುತ್ತಿದೆ. ವಿದ್ಯೆ ಕಲಿಯುವವರಿಗೆ, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತಿದೆ. ವಿದ್ಯೆ ಕಲಿತು, ಬೇರೆ ಬೇರೆ ಉದ್ಯೋಗ ಮಾಡಬಹುದು. ಪ್ರತಿ ಹಳ್ಳಿಗಳಲ್ಲಿ ಸಂಘಗಳಿವೆ. ಯೋಜನೆ ಸರಳವಾಗಿ ಧನಸಹಾಯ ಮಾಡಿ ಆರ್ಥಿಕ ಶಕ್ತಿ ಕೊಡುತ್ತಿದೆ. ವೃತ್ತಿಪರ ಕೋರ್ಸ್ ಗಳು ಯಶಸ್ವಿಯಾಗಲಿ, ವಿದ್ಯೆ ಕಲಿತು ವಿನಯವಂತರಾಗಿ ದೇಶದ ಸಂಸ್ಕೃತಿಗೆ ನಿಮ್ಮದೇ ಆದ ಕೊಡುಗೆ ನೀಡಿ ಎಂದು ಹಾರೈಸಿದರು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಟಿ.ಆರ್.ಶ್ರೀಧರ್ ಮಾತನಾಡಿ ಯೋಜನೆ ಈ ನೆರವನ್ನು ಪ್ರೋತ್ಸಾಹದಾಯಕವಾಗಿ ಬಳಸಿಕೊಳ್ಳಿ, ಸ್ವಂತ ವೃತ್ತಿಪರರಾಗಿ, ಇದು ಇನ್ನೊಬ್ಬರಿಗೆ ಪ್ರೇರಣೆಯಾಗಲಿ, ವ್ಯಸನ ಮುಕ್ತ ಸಮಾಜ, ದುಶ್ಟಟ ಮುಕ್ತ ಸಮಾಜ ನಿರ್ಮಾಣ ಮಾಡಲು ಯೋಜನೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಅಸ್ಲಾಂಖಾನ್ ಮಾತನಾಡಿ ನಾವು ಒಳ್ಳೆಯದನ್ನು ಮಾತ್ರ ನೋಡಬೇಕು. ಒಳ್ಳೇತನ ಬೆಳೆಸಿಕೊಳ್ಳಬೇಕು. ಶ್ರೀ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಸಾವಿರಾರು ಜನರಿಗೆ ಅನ್ನ ಕೊಟ್ಟಿದೆ. ಅರ್ಥಿಕ ನೆರವು ನೀಡಿದೆ. ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ನೀಡುತ್ತಿದೆ. ಸಂಸ್ಕೃತಿ ಸಂಸ್ಕಾರ ಉಳಿಸಿಕೊಳ್ಳಬೇಕು ಎಂದು ಹೇಳಿದರು.ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿ ಯೋಜನೆಯಿಂದ 20240-25ನೇ ಸಾಲಿನಲ್ಲಿ 135 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ 6 ಲಕ್ಷ ಸ್ವಸಹಾಯ ಸಂಘಗಳು, 50 ಲಕ್ಷ ಸದಸ್ಯರು ಇದ್ದಾರೆ, ಎಂದು ಮಾಹಿತಿ ನೀಡಿದರು.

ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಿಸಲಾಯಿತು. ಲಕ್ಷ್ಮೀಬಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಜುನಾಥ್, ಯೋಜನೆ ಮೇಲ್ವಿಚಾರಕ ಮಂಜುನಾಥ್ ಭಾಗವಹಿಸಿದ್ದರು.

8ಕೆಟಿಆರ್.ಕೆ.12ಃ

ತರೀಕೆರೆಯಲ್ಲಿ ರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಟಿ.ಆರ್.ಶ್ರೀಧರ್, ಅಸ್ಲಾಂಖಾನ್, ಯೋಜನಾಧಿಕಾರಿ ಕುಸುಮಾದರ ಮತ್ತಿತರರು ಇದ್ದರು.